LIVE NOW
Published : May 15, 2026, 07:50 AM ISTUpdated : May 15, 2026, 09:30 AM IST

Karnataka News live: ಮಂಡ್ಯದಲ್ಲಿ ನಾಪತ್ತೆಯಾದ 20 ಮಕ್ಕಳ ಪೈಕಿ 8 ಮಕ್ಕಳು ಪೋಷಕರ ಮಡಿಲಿಗೆ! ಟ್ರೇಸ್ ಮಾಡಿದ್ದು ಹೇಗೆ ಪೊಲೀಸರು?

ಸಾರಾಂಶ

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನ್ಮದಿನವಾಗಿದ್ದು, ರಾಜ್ಯಾದ್ಯಂತ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಡಿಕೆಶಿಗೆ ಜನ್ಮದಿನದಂದು ಶುಭ ಸುದ್ದಿ ಬರುತ್ತದೆ ಎಂಬ ಮಾತುಗಳು ಅವರ ಹಿಂಬಾಲಕರಿಂದ ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ಶುಭ ಸುದ್ದಿ ಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ತೈಲ ಕಂಪನಿಗಳು ಇಂಧನ ದರವನ್ನು ಪರಿಷ್ಕರಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 3 ರಿಂದ 4 ರೂಪಾಯಿಗಳಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ಪ್ರತಿ ಲೀಟರ್ ಪೆಟ್ರೋಲ್‌‌ಗೆ 102.91 ರೂಪಾಯಿ ಇತ್ತು. ಇಂದು ಪೆಟ್ರೋಲ್ ಬೆಲೆ 106.21 ರೂಪಾಯಿ ತಲುಪಿದೆ. ನಿನ್ನೆ ಲೀಟರ್‌ಗೆ 90.99 ರೂಪಾಯಿ ಇದ್ದ ಡೀಸೆಲ್ ಬೆಲೆ ಇಂದು 94.10 ರೂಪಾಯಿ ಆಗಿದೆ. ಅಂದರೆ, ಪೆಟ್ರೋಲ್ ಮೇಲೆ ಸರಿಸುಮಾರು 3.30 ರೂಪಾಯಿ ಹಾಗೂ ಡೀಸೆಲ್ ಮೇಲೆ 3.11 ರೂಪಾಯಿಗಳಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಇನ್ನು ರಾಜ್ಯಾದ್ಯಂತ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿಯೂ ದರ ಏರಿಕೆಯಾಗಿದ್ದು, ಪೈಸೆಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.

09:30 AM (IST) May 15

ಮಂಡ್ಯದಲ್ಲಿ ನಾಪತ್ತೆಯಾದ 20 ಮಕ್ಕಳ ಪೈಕಿ 8 ಮಕ್ಕಳು ಪೋಷಕರ ಮಡಿಲಿಗೆ! ಟ್ರೇಸ್ ಮಾಡಿದ್ದು ಹೇಗೆ ಪೊಲೀಸರು?

ಮಂಡ್ಯ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಒಟ್ಟು 20 ಕ್ಕೂ ಹೆಚ್ಚು ಮಕ್ಕಳ ಪೈಕಿ 6 ಪ್ರಕರಗಳಲ್ಲಿ 8 ಮಕ್ಕಳನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಒಪ್ಪಿಸಲು ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮಕ್ಕಳು ನಾಪತ್ತೆಯಾಗಿದ್ದು ಹೇಗೆ, ಪತ್ತೆ ಹಚ್ಚಿದ್ದು ಹೇಗೆ ವರದಿ ಓದಿ.

Read Full Story

09:21 AM (IST) May 15

ವಿಜಯಪುರ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು 'ಜೀವಂತ ಸಮಾಧಿ'; ಮಳೆ ಅಬ್ಬರಕ್ಕೆ ನಲುಗಿದ ಆಲಮೇಲ!

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ, ಭಾರೀ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ತಮ್ಮ ಸ್ವಂತ ಮನೆಯ ದುರಸ್ತಿ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ.

Read Full Story

09:01 AM (IST) May 15

ಆಸ್ತಿ ಬೇಕು, ತಾಯಿ ಬೇಡ!ಅಮ್ಮನ ನೋಡಿಕೊಳ್ಳದ ಮಗಳಿಗೆ ಹೈಕೋರ್ಟ್ ತಪರಾಕಿ, ದಾನಪತ್ರ ರದ್ದು, ಏನಿದು ಪ್ರಕರಣ?

ತಾಯಿಯನ್ನು ನೋಡಿಕೊಳ್ಳುವ ಕಾನೂನುಬದ್ಧ, ನೈತಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ, ಮಗಳ ಹೆಸರಿಗೆ ನೀಡಲಾಗಿದ್ದ ದಾನಪತ್ರ ರದ್ದುಗೊಳಿಸಿ, ಆಸ್ತಿ ಮರಳಿ ತಾಯಿಗೆ ನೀಡುವಂತೆ ನ್ಯಾಯಮಂಡಳಿ ನೀಡಿದ್ದ ಆದೇಶ ಹೈಕೋರ್ಟ್ ಎತ್ತಿಹಿಡಿದಿದೆ.

Read Full Story

08:10 AM (IST) May 15

ಶಾಲೆಗಳಲ್ಲಿ ಹಿಜಾಬ್ ವಿವಾದ - ಭುಗಿಲೆದ್ದ ರಾಜಕೀಯ, 'ಕೇಸರಿ ಅಲೆ'ಗೆ ದಾರಿಯಾಗಲಿದೆಯಾ? ಈಶ್ವರಪ್ಪ ಸ್ಫೋಟಕ ಹೇಳಿಕೆ!

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಧಾನ ಮಂಡಲ ಕೇಸರಿಮಯವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ಓಲೈಕೆಗಾಗಿ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story

07:51 AM (IST) May 15

ರಾಜ್ಯದ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್; ಪೆಟ್ರೋಲ್-ಡೀಸೆಲ್ ದರ ಏರಿಕೆ; ಪ್ರತಿ ಲೀ.ಪೆಟ್ರೋಲ್‌ಗೆ 3.21 ರೂ. ಹೆಚ್ಚಳ!

ಸಿಲಿಕಾನ್ ಸಿಟಿ ಜನತೆಗೆ ವಾರಾಂತ್ಯದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ತೈಲ ಕಂಪನಿಗಳು ಇಂಧನ ದರವನ್ನು ಪರಿಷ್ಕರಿಸಿವೆ.

HP ಪೆಟ್ರೋಲ್ ಬಂಕ್ ದರ ವಿವರ:

ಹಿಂದೂಸ್ತಾನ್ ಪೆಟ್ರೋಲಿಯಂ (HP) ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 3 ರಿಂದ 4 ರೂಪಾಯಿಗಳಷ್ಟು ಏರಿಕೆಯಾಗಿದೆ.

ಪೆಟ್ರೋಲ್: ನಿನ್ನೆ ಪ್ರತಿ ಲೀಟರ್‌ಗೆ 102.91 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಇಂದು 106.21 ರೂಪಾಯಿ ತಲುಪಿದೆ.

ಡೀಸೆಲ್: ನಿನ್ನೆ ಲೀಟರ್‌ಗೆ 90.99 ರೂಪಾಯಿ ಇದ್ದ ಡೀಸೆಲ್ ಬೆಲೆ ಇಂದು 94.10 ರೂಪಾಯಿ ಆಗಿದೆ.

ಅಂದರೆ, ಪೆಟ್ರೋಲ್ ಮೇಲೆ ಸರಿಸುಮಾರು 3.30 ರೂಪಾಯಿ ಹಾಗೂ ಡೀಸೆಲ್ ಮೇಲೆ 3.11 ರೂಪಾಯಿಗಳಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.

Read Full Story

More Trending News