ಗೃಹಜ್ಯೋತಿ ದುಡ್ಡು ಸರ್ಕಾರ ಕೊಡದಿದ್ರೆ ಜನರಿಂದ ವಸೂಲಿ! ರಾಜ್ಯದ ಜನರಿಗೆ ತ್ರಿಬಲ್ ಶಾಕ್!

Published : Feb 24, 2025, 06:29 AM ISTUpdated : Feb 24, 2025, 06:34 AM IST
ಗೃಹಜ್ಯೋತಿ ದುಡ್ಡು ಸರ್ಕಾರ ಕೊಡದಿದ್ರೆ ಜನರಿಂದ ವಸೂಲಿ! ರಾಜ್ಯದ ಜನರಿಗೆ ತ್ರಿಬಲ್ ಶಾಕ್!

ಸಾರಾಂಶ

ಬೆಲೆ ಏರಿಕೆ ನಡುವೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಕೆಇಆರ್‌ಸಿ ಮಾರ್ಚ್‌ನಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆ ಇದ್ದು, ಎಸ್ಕಾಂಗಳು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಬೆಂಗಳೂರು (ಫೆ.24) : ಈಗಾಗಲೇ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರಿಸುತ್ತಿರುವ ಶ್ರೀಸಾಮಾನ್ಯನಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಬರುವ ಮಾರ್ಚ್‌ ತಿಂಗಳಲ್ಲಿ ವಿದ್ಯುತ್‌ ದರ ಏರಿಕೆಯ ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ಅದರಲ್ಲೂ ಒಂದು ವರ್ಷದ ಬದಲಿಗೆ ಮುಂದಿನ ಮೂರು ವರ್ಷಗಳ ದರ ಏರಿಕೆಯನ್ನು ಒಮ್ಮೆಗೆ ನಿರ್ಧಾರ ಮಾಡಿ ಬಳಕೆದಾರರಿಗೆ ತ್ರಿಬಲ್‌ ಶಾಕ್‌ ನೀಡುವ ಸಾಧ್ಯತೆ ಇದೆ.

ಬೆಸ್ಕಾಂ ಸೇರಿ ವಿವಿಧ ಎಸ್ಕಾಂಗಳು ಈಗಾಗಲೇ ಕನಿಷ್ಠ 39 ಪೈಸೆಯಿಂದ ಹಿಡಿದು ಗರಿಷ್ಠ 1.32 ರು.ವರೆಗೆ ದರ ಹೆಚ್ಚಳ ಕೋರಿ ಕೆಇಆರ್‌ಸಿಗೆ ಪ್ರಸ್ತಾಪ ಸಲ್ಲಿಸಿವೆ. ಈ ಕುರಿತು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲಿರುವ ಕೆಇಆರ್‌ಸಿ ಏ.1 ರಿಂದ ಅನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಳ ಮಾಡಿ ವಿದ್ಯುತ್‌ ಗ್ರಾಹಕರಿಗೆ ಶಾಕ್‌ ನೀಡಲಿದೆ.

ಇದನ್ನೂ ಓದಿ: 'ಕ್ಷೇತ್ರದ ಜನರಿಗೆ ಸ್ಪಂದಿಸಲು ಆಗುತ್ತಿಲ್ಲ', ಪದತ್ಯಾಗದ ಬಗ್ಗೆ ಪರಮೇಶ್ವರ್ ಅಚ್ಚರಿಯ ಹೇಳಿಕೆ!

ತ್ರಿವಳಿ ಮನವಿ:

ಬೆಸ್ಕಾಂ ಸೇರಿ ರಾಜ್ಯದ ವಿವಿಧ ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್‌ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್‌ಗೆ 37 ಪೈಸೆಯಿಂದ ಬರೋಬ್ಬರಿ 1.32 ರು.ವರೆಗೆ ಹೆಚ್ಚಳಕ್ಕೆ ಮನವಿ ಮಾಡಿದೆ.

ಎಸ್ಕಾಂಗಳ ಪ್ರಸ್ತಾವನೆಯ ವಿಚಾರಣೆಯನ್ನು ಕೆಇಆರ್‌ಸಿ ಮುಗಿಸಿದ್ದು, ಫೆ.27ಕ್ಕೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹವನ್ನೂ ಪೂರ್ಣಗೊಳಿಸಲಿದೆ. ಹೀಗಾಗಿ ಏ.1ರಿಂದ ಅನ್ವಯವಾಗುವಂತೆ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ವಿದ್ಯುತ್‌ ದರ ಹೆಚ್ಚಳವನ್ನು ಕೆಇಆರ್‌ಸಿ ಪ್ರಕಟಿಸಲಿದೆ. ಈ ವೇಳೆ ಮೂರು ವರ್ಷಕ್ಕೂ ಒಮ್ಮೆಯೇ ಹೆಚ್ಚಳ ಮಾಡಲಿದೆಯೇ ಅಥವಾ 2025-26ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಪ್ರಕಟಿಸಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ. 

ಈ ಪೈಕಿ ಬೆಸ್ಕಾಂ ಬೆಸ್ಕಾಂ ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್‌ಗೆ 2025-26ನೇ ಸಾಲಿಗೆ 67 ಪೈಸೆ, 2026-27ಕ್ಕೆ 75 ಪೈಸೆ ಹಾಗೂ 2027-28ಕ್ಕೆ 91 ಪೈಸೆಯಂತೆ ದರ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಮನವಿ ಸಲ್ಲಿಸಿದೆ. ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮ (ಸೆಸ್ಕ್) 2025-26ಕ್ಕೆ 68 ಪೈಸೆ, 2026-27ಕ್ಕೆ 1.03 ರು., 2027-28ಕ್ಕೆ 1.23 ರು., ಮಂಗಳೂರಿನ ಮೆಸ್ಕಾಂ 2025-26ಕ್ಕೆ 70 ಪೈಸೆ, 2026-27ಕ್ಕೆ 0.37 ಪೈಸೆ, 2027-28ಕ್ಕೆ 0.54 ಪೈಸೆ, ಹುಬ್ಬಳ್ಳಿಯ ಹೆಸ್ಕಾಂ 2025-26ಕ್ಕೆ 0.69 ಪೈಸೆ, 2026-27ಕ್ಕೆ 1.18 ರು., 2027-28ಕ್ಕೆ 1.32 ರು. ಪ್ರತಿ ಯುನಿಟ್‌ಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿವೆ.

ವಿದ್ಯುತ್ ಉತ್ಪಾದನೆ, ಖರೀದಿ, ಪ್ರಸರಣ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕು ಎಂದು ಎಸ್ಕಾಂಗಳು ಮನವಿ ಮಾಡಿದ್ದು, ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ದರ ಹೆಚ್ಚಳಕ್ಕೆ ಮೊರೆ ಇಟ್ಟಿವೆ. ಈಗ 2027-28ನೇ ಸಾಲಿನವರೆಗೂ ದರ ಹೆಚ್ಚಳ ಮಾಡಿದರೂ ಮುಂದಿನ ವರ್ಷಗಳಲ್ಲೂ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ಇಂಧನ ನಿರ್ವಹಣ ವೆಚ್ಚದ ಅಡಿ ಮತ್ತೆ ದರ ಹೆಚ್ಚಳ ಮಾಡಬಹುದು. ಆಗ ಎರಡೆರಡು ಬಾರಿ ದರ ಏರಿಕೆ ಪೆಟ್ಟು ಗ್ರಾಹಕರಿಗೆ ತಗುಲಲಿದೆ.==

ಬೆಸ್ಕಾಂ-2025-26:67 ಪೈಸೆ, 2026-27:75 ಪೈಸೆ2027-28:91 ಪೈಸೆ.

--ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮ (ಸೆಸ್ಕ್)2025-2668 ಪೈಸೆ2026-27: 1.03 ರು.2027-28: 1.23 ರು.

--ಮಂಗಳೂರಿನ ಮೆಸ್ಕಾಂ2025-26:70 ಪೈಸೆ.

2026-27: 0.37 ಪೈಸೆ2027-28: 0.54 ಪೈಸೆ.

--ಹುಬ್ಬಳ್ಳಿಯ ಹೆಸ್ಕಾಂ2025-26:0.69 ಪೈಸೆ2026-27:1.18 ರು.2027-28:.32 ರು.(ಗೃಹಜ್ಯೋತಿ ಮುಂಗಡ ಹಣಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮ ಬೇಡಿಕೆ ಸಲ್ಲಿಸಿರುವ ಪ್ರತಿ ಫೋಟೋ ಇದೆ)ಸರ್ಕಾರ ಗೃಹಜ್ಯೋತಿ

ಸಬ್ಸಿಡಿ ನೀಡದಿದ್ದರೆ ಜನರಿಂದಲೇ ವಸೂಲಿ!

ದರ ಏರಿಕೆಯ ಜೊತೆಗೆ ರಾಜ್ಯ ಸರ್ಕಾರ ‘ಗೃಹ ಜ್ಯೋತಿ’ಸಬ್ಸಿಡಿ ಹಣ ಮುಂಗಡವಾಗಿ ಪಾವತಿಸದಿದ್ದರೆ ಫಲಾನುಭವಿ ವಿದ್ಯುತ್‌ ಬಳಕೆದಾರರಿಂದಲೇ ಎಸ್ಕಾಂಗಳು ಸಂಗ್ರಹಿಸಬಹುದು ಎಂಬ ಆದೇಶ ಮಾಡಲಿದೆಯೇ ಎಂಬ ಆತಂಕ ಶುರುವಾಗಿದೆ.

ಯಾಕೆಂದರೆ ದರ ಪರಿಷ್ಕರಣೆಗೆ ಮನವಿ ಮಾಡಿರುವ ಎಸ್ಕಾಂಗಳು ಗೃಹ ಜ್ಯೋತಿ ಸಬ್ಸಿಡಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸುವಂತೆ ಮಾಡಬೇಕು ಎಂದು ಕೆಇಆರ್‌ಸಿಯನ್ನು ಕೋರಿವೆ. ‘ರಾಜ್ಯ ಸರ್ಕಾರವು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಗೃಹ ಬಳಕೆದಾರರಿಗೆ ಸಬ್ಸಿಡಿ ಯೋಜನೆ ಜಾರಿ ಮಾಡಿದೆ. ರಾಜ್ಯ ಸರ್ಕಾರ ಈ ಸಬ್ಸಿಡಿ ಹಣವನ್ನು ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ ಕೆಇಆರ್‌ಸಿ (ಸಬ್ಸಿಡಿ ಪಾವತಿ) ನಿಯಮಗಳು-2008ರ ನಿಯಮ 6.1 ರ ಅಡಿ ಬಳಕೆ ಮಾಡಿರುವ ಗ್ರಾಹಕರಿಂದ ಒತ್ತಾಯದಿಂದ ಸಂಗ್ರಹಿಸಲು ಅವಕಾಶ ನೀಡಬೇಕು’ ಎಂದು ಎಸ್ಕಾಂಗಳು ಮನವಿ ಸಲ್ಲಿಸಿವೆ.ಈ ಮನವಿಯನ್ನು ಕೆಇಆರ್‌ಸಿ ಪುರಸ್ಕರಿಸುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಪುರಸ್ಕರಿಸಿದರೆ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿರುವ 1.70 ಕೋಟಿ ಗ್ರಾಹಕರಿಗೆ ಹೊಸ ಶಾಕ್‌ ಕಾದಿದೆ.

ಇದನ್ನೂ ಓದಿ: 'ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದ್ರೆ ನಾನು ಬೇರೆ ದಾರಿ ನೋಡಿಕೊಳ್ತೇನೆ': ಸಂಚಲನ ಸೃಷ್ಟಿಸಿದ ಶಶಿ ತರೂರ್ ಹೇಳಿಕೆ!

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 1,70,90,681 ಅರ್ಹ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. 1.65 ಕೋಟಿ ಕುಟುಂಬಗಳಿಗೆ ಇದರಡಿ ಶೂನ್ಯ ಬಿಲ್‌ ಬರುತ್ತಿದೆ. ಕೇವಲ ಬೆಸ್ಕಾಂ ವ್ಯಾಪ್ತಿಯಲ್ಲೇ 71 ಲಕ್ಷ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ 1,602 ಕೋಟಿ ರು. ಸಬ್ಸಿಡಿಯನ್ನು ಎಸ್ಕಾಂಗಳಿಗೆ ಪಾವತಿಸಬೇಕು. ಆದರೆ ಪ್ರತಿ ಬಾರಿಯು ರಾಜ್ಯ ಸರ್ಕಾರ ಮುಂಗಡ ಅಥವಾ ಸಕಾಲಕ್ಕೆ ಪಾವತಿ ಮಾಡದೆ 3-4 ತಿಂಗಳು ಬಾಕಿ ಉಳಿಸಿಕೊಂಡೇ ಪಾವತಿಸುತ್ತಿದೆ.ಇದೀಗ ಕೆಇಆರ್‌ಸಿ-2008ರ ನಿಯಮ 6.1 ಅನುಷ್ಠಾನ ಮಾಡಿದರೆ, ರಾಜ್ಯ ಸರ್ಕಾರ ಮುಂಗಡವಾಗಿ ಸಬ್ಸಿಡಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಫಲಾನುಭವಿಗಳೇ ಮೊದಲು ಎಸ್ಕಾಂಗಳಿಗೆ ಪಾವತಿಸಿ ಬಳಿಕ ರಾಜ್ಯ ಸರ್ಕಾರದಿಂದ ಸಬ್ಸಿಡಿ ಕ್ಲೇಮು ಮಾಡಿಕೊಳ್ಳಬೇಕಾಗುತ್ತದೆ.

ಮಾರ್ಚ್‌ಗೆ 3 ವರ್ಷದಎಲೆಕ್ಟ್ರಿಕ್ ಶಾಕ್‌ ಫಿಕ್ಸ್‌ಒಮ್ಮೆಗೆ 3 ವರ್ಷದ ದರ ಏರಿಕೆ ಘೋಷಣೆಯುನಿಟ್‌ಗೆ 37 ಪೈ- ₹1.32ವರೆಗೆ ಹೆಚ್ಚಳ?ಏ.1ರಿಂದ ಹೊಸ ವಿದ್ಯುತ್‌ ದರ ಸಂಭವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ