LIVE NOW
Published : May 08, 2026, 07:17 AM ISTUpdated : May 08, 2026, 09:39 AM IST

Karnataka News Live: ರಾಜ್ಯದಲ್ಲಿ ಏಪ್ರಿಲ್‌ ತಿಂಗಳು ಎಣ್ಣೆ ಪಾರ್ಟಿ ರೆಕಾರ್ಡ್ - 13ವರ್ಷದ ದಾಖಲೆ ಉಡೀಸ್! ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ

ಸಾರಾಂಶ

ತುಮಕೂರಿನ ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಭಜರಂಗದಳದ ಕಾರ್ಯಕರ್ತರಾದ ಆಕಾಶ್ (29), ಮಂಜುನಾಥ್ (34) ಮೃತಪಟ್ಟ ಘಟನೆ ನಡೆದಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ವೇಗವಾಗಿ ಬಂದ ಬೊಲೆರೋ ವಾಹನ‌ ಬೈಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸಂಬಂಧ ಜಟಾಪಟಿ ನಡೆಯುತ್ತಿದೆ. ಜನಗಣತಿ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸೆಪ್ಟಂಬರ್ ವರೆಗೂ ರಾಜ್ಯ ಸರ್ಕಾರ ಕಾಲಾವಕಾಶ ಕೇಳಿತ್ತು. ಇಂದು ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ಚುನಾವಣೆ ಬಗ್ಗೆ ಆಯೋಗ ಮಹತ್ವದ ಸಭೆ ಕರೆದಿದೆ. ಇಂದಿನ ಪ್ರತಿ ಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.

Liquor

09:39 AM (IST) May 08

ರಾಜ್ಯದಲ್ಲಿ ಏಪ್ರಿಲ್‌ ತಿಂಗಳು ಎಣ್ಣೆ ಪಾರ್ಟಿ ರೆಕಾರ್ಡ್ - 13ವರ್ಷದ ದಾಖಲೆ ಉಡೀಸ್! ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ

ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಮದ್ಯ ಮಾರಾಟವು ಕಳೆದ 13 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಐಎಂಎಲ್ ಮತ್ತು ಬಿಯರ್ ಎರಡರ ಮಾರಾಟದಲ್ಲೂ ಭಾರೀ ಏರಿಕೆ ಕಂಡಿದ್ದು, ಇದು ರಾಜ್ಯ ಸರ್ಕಾರದ ಆದಾಯವನ್ನು ಸಾವಿರಾರು ಕೋಟಿಗಳಷ್ಟು ಹೆಚ್ಚಿಸಿದೆ. ಗಡಿ ರಾಜ್ಯಗಳ ಚುನಾವಣೆಯು ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಅಂದಾಜಿಸಲಾಗಿದೆ.
Read Full Story

09:33 AM (IST) May 08

ಕಾರ್ಮಿಕರ ಕಲ್ಯಾಣ ಮಂಡಳಿ ಇನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ; - ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ!

ಕಾರ್ಮಿಕ ಇಲಾಖೆಯಡಿಯಲ್ಲಿದ್ದ ಕರ್ನಾಟಕ ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ತಿದ್ದುಪಡಿಯಿಂದಾಗಿ, ಸಾರಿಗೆಯೇತರ ವಾಹನಗಳಿಂದ ಸಂಗ್ರಹಿಸಿದ ಸೆಸ್ ನಿಧಿಯನ್ನು  ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಿದೆ.

Read Full Story

09:20 AM (IST) May 08

ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ ಜಿಬಿಎ ಆಯುಕ್ತರ ನೋಟಿಸ್

ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ ಜಿಬಿಎ ಆಯುಕ್ತರ ನೋಟಿಸ್, ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಹಗೂ ಕಟ್ಟಡಗಳು ಮಳೆಗೆ ಧರೆಗುರುಳಿ ಅನಾಹುತ ಸಂಭವಿಸುವ ಮೊದಲೇ ಧ್ವಂಸಗೊಳಿಸಲು ಸೂಚಿಸಲಾಗಿದೆ.

Read Full Story

08:54 AM (IST) May 08

ಜಿಬಿಎ ಚುನಾವಣೆ ಜೂನ್ ನಲ್ಲೇ ನಡೆಸಲು ಪಟ್ಟು ಹಿಡಿದ ರಾಜ್ಯ ಚುನಾವಣಾ ಆಯೋಗ, ಇಂದು ಸರ್ಕಾರ ನಿರ್ಣಾಯಕ ಸಭೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್‌ನಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಪಟ್ಟು ಹಿಡಿದಿದೆ. ಆದರೆ, ಸಿಬ್ಬಂದಿ ಕೊರತೆಯ ಕಾರಣ ನೀಡಿ ಸರ್ಕಾರ ಸೆಪ್ಟೆಂಬರ್‌ವರೆಗೆ ಕಾಲಾವಕಾಶ ಕೇಳಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದೆ.
Read Full Story

08:45 AM (IST) May 08

ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಲ್ಲಿ ಮೇ.11ರ ವರೆಗೆ ಭಾರಿ ಮಳೆ

ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಲ್ಲಿ ಮೇ.11ರ ವರೆಗೆ ಭಾರಿ ಮಳೆ, ಇಂದು ಮುಂಜಾನೆಯಿಂದಲೇ ಹಲೆವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಅಲರ್ಟ್ ಮೆಸೇಜ್ ಬಂದಿದೆ.

 

Read Full Story

08:22 AM (IST) May 08

ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ

ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

Read Full Story

08:17 AM (IST) May 08

Tamil Nadu government formation - ಟಿವಿಕೆ ವಿಜಯ್ ಹಾದಿಗೆ ರಾಜ್ಯಪಾಲರು ಅಡ್ಡಗಾಲು? 118 ಶಾಸಕರ ಬೆಂಬಲ ಸಾಬೀತುಪಡಿಸಲು ಸೂಚನೆ!

ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ತಡೆ ನೀಡಿದ್ದಾರೆ. ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದು, ಅಗತ್ಯ ಬೆಂಬಲಕ್ಕಾಗಿ ವಿಜಯ್ ಪಕ್ಷವು ಇದೀಗ ಇತರ ಪಕ್ಷಗಳ ಬೆಂಬಲ ಯಾಚಿಸುತ್ತಿದೆ.
Read Full Story

08:03 AM (IST) May 08

Adidwara app ವಿಶೇಷಚೇತನರಿಗೆ ಗುಡ್‌ನ್ಯೂಸ್ - ಉದ್ಯೋಗಕ್ಕಾಗಿ ಸರ್ಕಾರದಿಂದಲೇ ‘ಆದಿದ್ವಾರ’ ಆ್ಯಪ್‌

ವಿಶೇಷ ಚೇತನರಿಗೆ ಉದ್ಯೋಗ ಮತ್ತು ಕೌಶಲ್ಯ ವೇದಿಕೆ ಒದಗಿಸುವ 'ಆದಿದ್ವಾರ' ಆ್ಯಪ್ ಬಿಡುಗಡೆಯಾಗಿದೆ. ಇದರೊಂದಿಗೆ, ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ದಿವ್ಯಾಂಗರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಘೋಷಿಸಿದ್ದಾರೆ.
Read Full Story

07:55 AM (IST) May 08

ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಬಂಧನ ಭೀತಿ

ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಮಹಿಳಾ ಪೇದಿ ದೂರು ನೀಡಿದ್ದು, ಇದೀಗ ಇಡೀ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪಿಎಸ್ಐ ವಿರುದ್ಧ ಹಲವು ಕೇಸ್ ದಾಖಲಾಗಿದೆ.

Read Full Story

07:52 AM (IST) May 08

Karnataka vs Centre - ಜಿ ರಾಮ್‌ ಜಿ ವಿರುದ್ಧ ಕೋರ್ಟ್‌ಗೆ ಮೊರೆ; ಸಂಪುಟ ನಿರ್ಧಾರ ನರೇಗಾದಡಿಯೇ ಕಾಮಗಾರಿಗಾಗಿ ಹೋರಾಟ

ಕೇಂದ್ರ ಸರ್ಕಾರವು ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಹಾಗೂ ಪ್ರಸಕ್ತ ಸಾಲಿನಲ್ಲಿ ಮನರೇಗಾ ಮುಂದುವರಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Read Full Story

07:18 AM (IST) May 08

ತುಮಕೂರು ಅಪಘಾತ, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೈಕ್‌ನಲ್ಲಿ ತೆರಳುತ್ತಿದ್ದ ಆಕಾಶ್ ಹಾಗೂ ಮಂಜುನಾಥ್ ಇಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಆಕಾಶ್ ಮೃತಪಟ್ಟರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮಂಜುನಾಥ್ ಸಾವು ಕಂಡಿದ್ದಾರೆ. ಕುಣಿಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.


More Trending News