ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಜಿಬಿಎ ಬ್ಯಾಟರಾಯನಪುರ ವಿಭಾಗವೊಂದರಲ್ಲೇ 6,000 ಗುಂಡಿಗಳು ಕಂಡು ಬಂದಿವೆ ಎಂದು ಖಾಸಗಿ ಕೃತಕ ಬುದ್ಧಿಮತ್ತೆ ಸಂಸ್ಥೆಯಾಗಿರುವ ‘ಎಐಆರ್-ಎಐ’ ವರದಿ ಮಾಡಿದೆ.
ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ಸಚಿವರಿಗೆ ವರದಿಯ ಕುರಿತು ಪೋಸ್ಟ್ ಮಾಡಿರುವ ಕಂಪನಿಯು, ಒಟ್ಟು 824 ಕಿ.ಮೀ ರಸ್ತೆಯನ್ನು ಕೃತಕ ಬುದ್ಧಿಮತ್ತೆ ಮತ್ತೆ ಡೆಟಾ ಆಧಾರಿತ ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ರಿಪೇರಿ ಕಾರ್ಯವನ್ನು ಕೈಗೊಳ್ಳಲು, ಆದ್ಯತೆಯ ಮೇಲೆ ಕಾಮಗಾರಿ ಮಾಡಲು ಮತ್ತು ಸೂಕ್ತ ಅನುದಾನವನ್ನು ಒದಗಿಸಲು ಡೆಟಾ ನೆರವಾಗಲಿದೆ. ಈ ಕುರಿತಾದ ವರದಿಯನ್ನು ತಮಗೆ ಸಲ್ಲಿಸಲು ಸಮಯ ನೀಡುವಂತೆ ಕಂಪನಿ ಕೋರಿದೆ.
ಇನ್ನು ಪೂರ್ವ ಪಾಲಿಕೆ ವ್ಯಾಪ್ತಿಯ 1,600 ಕಿ.ಮೀ ರಸ್ತೆಗಳಲ್ಲಿ ಮತ್ತು ಉತ್ತರ ಪಾಲಿಕೆ ವ್ಯಾಪ್ತಿಯ 2494 ಕಿ.ಮೀ ರಸ್ತೆಗಳನ್ನು ಸರ್ವೇಗೆ ಒಳಪಡಿಸಲಾಗಿದ್ದು, ಕ್ರಮವಾಗಿ 27,000 ಗುಂಡಿಗಳು ಹಾಗೂ 14,000 ರಸ್ತೆ ಗುಂಡಿಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಎಐಆರ್ ಎಐ ತಿಳಿಸಿದೆ.
08:46 AM (IST) Oct 07
08:38 AM (IST) Oct 07
ಸಚಿವ ಪ್ರಿಯಾಂಕ್ ಖರ್ಗೆ ಅವರು ಫಾರ್ಮ್ 7 ದುರ್ಬಳಕೆ ನೆಪದಲ್ಲಿ ಪೊಲೀಸರ ಮೂಲಕ ಎಫ್‌ಐಆರ್ ದಾಖಲಿಸಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿರುವ ಖರ್ಗೆ ಅವರೇ ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆಂದು ತಿರುಗೇಟು ನೀಡಿದ್ದಾರೆ.
08:17 AM (IST) Oct 07
ಕಳೆದ 3 ವರ್ಷಗಳಲ್ಲಿ ರಾಜ್ಯದ 69 ಶಾಸಕರು ಮತ್ತು ಅವರ ಕುಟುಂಬದವರು 7.40 ಕೋಟಿ ರೂ. ವೈದ್ಯಕೀಯ ವೆಚ್ಚವನ್ನು ಮರುಪಾವತಿ ಪಡೆದಿರುವುದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಬೇಲೂರು ಶಾಸಕ ಎಚ್.ಕೆ.ಸುರೇಶ್ ಅತಿ ಹೆಚ್ಚು ಮೊತ್ತ ಪಡೆದಿದ್ದರೆ, ನಿಖಿಲ್ ಉಮೇಶ್ ಕತ್ತಿ ಅತ್ಯಂತ ಕಡಿಮೆ ಪಡೆದಿದ್ದಾರೆ.
08:14 AM (IST) Oct 07
08:06 AM (IST) Oct 07
07:57 AM (IST) Oct 07
ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಪೂಜಾರಿ 200 ಮೀಟರ್ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರತಿಭೆಯ ಈ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
07:47 AM (IST) Oct 07
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ. ಶಾಸಕ ಸಿ.ಎಸ್.ಅಪ್ಪಾಜಿ ನಾಡಗೌಡ ಅವರ ಮನವಿಯ ಮೇರೆಗೆ ಅಕ್ಟೋಬರ್ 7ರಿಂದ ನೀರು ಬಿಡಲಾಗುತ್ತಿದೆ.
07:39 AM (IST) Oct 07
ಲೋಕೋಪಯೋಗಿ ಇಲಾಖೆಯ ವಿಳಂಬ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿಯಿಂದಾಗಿ ಕೆ-ಶಿಪ್ 4 ಹೆದ್ದಾರಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇದರಿಂದಾಗಿ 780 ಕಿ.ಮೀ ರಸ್ತೆ ನಿರ್ಮಾಣದ ವೆಚ್ಚ ಬರೋಬ್ಬರಿ 3,000 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ
07:27 AM (IST) Oct 07
ತೀವ್ರ ಮಳೆಯ ಕೊರತೆಯ ನಡುವೆಯೂ ರಾಮನಗರ ಜಿಲ್ಲೆಯ 4 ಜಲಾಶಯಗಳಲ್ಲಿ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸಿದ್ದು, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಮತ್ತು ವನ್ಯಜೀವಿಗಳಿಗೆ ಅನುಕೂಲವಾಗಿದೆ.
07:15 AM (IST) Oct 07
ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯು ವಿಶೇಷ ಕಾಯ್ದಿರಿಸದ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಕೆಎಸ್ಆರ್ ಬೆಂಗಳೂರು, ಮೈಸೂರು, ಅಶೋಕಪುರಂ ಮತ್ತು ಚಾಮರಾಜನಗರ ನಡುವೆ ಈ ಹೆಚ್ಚುವರಿ ರೈಲುಗಳು ಸಂಚರಿಸಲಿವೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ, ತಿಳಿಯಿರಿ.
07:12 AM (IST) Oct 07