Published : Mar 06, 2025, 07:22 AM ISTUpdated : Mar 06, 2025, 10:34 PM IST

Karnataka News Live: ಯತ್ನಾಳ್ ವರ್ಸಸ್ ರೇಣುಕಾಚಾರ್ಯ; ಗ್ರೇಟರ್ ಬೆಂಗಳೂರು ವಿಧೇಯಕ

ಸಾರಾಂಶ

ಬೆಂಗಳೂರು: ರಾಜ್ಯ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ನಡುವಿನ ವಾಕ್ಸಮರ ಮುಂದುವರಿದಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಅರೆ ಹುಚ್ಚನಾಗಿದ್ದು, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇತ್ತ ಯತ್ನಾಳ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಂಡ ನಡೆಸಿದ ಸಭೆಯಲ್ಲಿದ್ದವರು ರೆಡಿಮೇಡ್‌ ಸ್ವಾಮೀಜಿಗಳು. ಸಭೆಯಲ್ಲಿ ಯಾವುದೇ ಪ್ರತಿಷ್ಠಿತ ಸ್ವಾಮೀಜಿಗಳು ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಸೇರಿದಂತ ಹಲವು ಶಿಫಾರಸುಗಳನ್ನು ಒಳಗೊಂಡ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲನಾ ಸಮಿತಿ ಅಧ್ಯಕ್ಷ, ಶಾಸಕ ರಿಜ್ವಾನ್‌ ಅರ್ಷದ್‌ ಪರಿಶೀಲನಾ ವರದಿ ಮಂಡಿಸಿದ್ದಾರೆ. ಈ ದಿನದ ಪ್ರಮುಖ ಘಟನೆಗಳ ಕುರಿತ ಮಾಹಿತಿ ಇಲ್ಲಿದೆ .

Karnataka News Live: ಯತ್ನಾಳ್ ವರ್ಸಸ್ ರೇಣುಕಾಚಾರ್ಯ; ಗ್ರೇಟರ್ ಬೆಂಗಳೂರು ವಿಧೇಯಕ

10:34 PM (IST) Mar 06

ಹನಿ ಸಿಂಗ್‌ ಹಾಡಿನ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಪುನೀತ್‌ ಜೊತೆ ಐಟಂ ಡಾನ್ಸ್ ಮಾಡಿದ್ದ ನಟಿ!

ನಟಿ ನೀತು ಚಂದ್ರ ಹನಿ ಸಿಂಗ್ ಅವರ 'ಮ್ಯಾನಿಯಕ್' ಹಾಡಿನಲ್ಲಿ ಅಶ್ಲೀಲತೆಯಿದೆ ಎಂದು ಆರೋಪಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ PIL ಸಲ್ಲಿಸಿದ್ದಾರೆ. ಹಾಡು ಮಹಿಳೆಯರನ್ನು ಲೈಂಗಿಕ ವಸ್ತುಗಳಾಗಿ ತೋರಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ಪೂರ್ತಿ ಓದಿ

08:22 PM (IST) Mar 06

ED arrests SDPI chief: ಪಿಎಫ್​ಐ ಬ್ಯಾನ್ ನಂತರ ಎಸ್‌ಡಿಪಿಐ ಪಕ್ಷವೂ ಬ್ಯಾನ್ ಆಗುತ್ತಾ..?

ಪಿಎಫ್‌ಐ ಬ್ಯಾನ್ ಬಳಿಕ ಎಸ್‌ಡಿಪಿಐ ಮೇಲೆ ಭಯೋತ್ಪಾದನೆಯ ಆರೋಪ ಕೇಳಿಬಂದಿದೆ. ಎಸ್‌ಡಿಪಿಐ ಮುಖವಾಡದಲ್ಲಿ ಪಿಎಫ್‌ಐ ಕಾರ್ಯಚಟುವಟಿಕೆ ಮುಂದುವರೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಮತ್ತು ಕಚೇರಿಗಳ ಮೇಲೆ ಇ.ಡಿ ದಾಳಿ ನಡೆದಿದೆ.

ಪೂರ್ತಿ ಓದಿ

07:13 PM (IST) Mar 06

ಕರ್ನಾಟಕದ ಆರುಷಿಯಾದ ಸೌಜನ್ಯ: ಮರು ತನಿಖೆ ಸಾಧ್ಯವೇ ಇಲ್ಲ ಎಂದು ಹೈಕೋರ್ಟ್‌ ಹೇಳಿದ್ದೇಕೆ? ಪೊಲೀಸರು ತಪ್ಪು ಮಾಡಿದ್ದೆಲ್ಲಿ!

ಬಳ್ಳಾರಿ ಮೂಲದ ಯೂಟ್ಯೂಬರ್ ಸೌಜನ್ಯ ಕೇಸ್ ವಿಚಾರದೊಂದಿಗೆ ಧರ್ಮಸ್ಥಳದ ಬಗ್ಗೆ ಮಾತನಾಡಿದ್ದು ವೈರಲ್ ಆಗಿದೆ. ಹೈಕೋರ್ಟ್ ಈ ಪ್ರಕರಣದ ಮರು ತನಿಖೆ ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ತನಿಖಾ ತಂಡದ ವೈಫಲ್ಯವೇ ಪ್ರಕರಣ ಹಳ್ಳ ಹಿಡಿಯಲು ಕಾರಣವೆಂದು ಹೇಳಲಾಗಿದೆ.

ಪೂರ್ತಿ ಓದಿ

05:24 PM (IST) Mar 06

ಸುಂದರಿಯರು ಹೆಚ್ಚಿರೋ ಭಾರತದ ರಾಜ್ಯ ಯಾವುದು ಗೊತ್ತಾ? ಕರ್ನಾಟಕಕ್ಕೆ ಸ್ಥಾನ ಇದ್ಯಾ? ಇಲ್ಲಿದೆ ಡಿಟೇಲ್ಸ್​

ಸೌಂದರ್ಯಕ್ಕೆ ಹಲವು ರೀತಿಯ ವ್ಯಾಖ್ಯಾನಗಳು ಇದ್ದರೂ, ಸಾಮಾನ್ಯವಾಗಿ ಸುಂದರಿಯರು ಎಂದು ಕರೆಸಿಕೊಳ್ಳುವ ಪೈಕಿ ಭಾರತದ ಯಾವ ರಾಜ್ಯಗಳು ಟಾಪ್​ 1ನಲ್ಲಿ ಇವೆ? ಇಲ್ಲಿದೆ ಡಿಟೇಲ್ಸ್​...
 

ಪೂರ್ತಿ ಓದಿ

04:00 PM (IST) Mar 06

Chikkaballapur: ಹಣಕ್ಕಾಗಿ ಹೆತ್ತ ತಾಯಿಯ ಶವವನ್ನೇ ಹೂಳಲು ಬಿಡದ ಗಂಡು ಮಕ್ಕಳು

ಚಿಕ್ಕಬಳ್ಳಾಪುರದಲ್ಲಿ ವೃದ್ಧೆಯ ಶವವನ್ನು ಹೂಳಲು ಆಕೆಯ ಮಕ್ಕಳು ಹಣಕ್ಕಾಗಿ ಪಟ್ಟು ಹಿಡಿದ ಘಟನೆ ನಡೆದಿದೆ. ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದ ಕಾರಣ ಶವ ಹೂಳಲು ಅಡ್ಡಿಪಡಿಸಿದ ಗಂಡು ಮಕ್ಕಳು, ನಂತರ ತಹಶೀಲ್ದಾರ್ ಮಧ್ಯಪ್ರವೇಶದಿಂದ ಅಂತ್ಯಕ್ರಿಯೆ ನಡೆಯಿತು.

ಪೂರ್ತಿ ಓದಿ

02:06 PM (IST) Mar 06

Bengaluru: ರಾಜಧಾನಿಯಲ್ಲಿ 27 ಮೂಟೆಗಳಲ್ಲಿದ್ದ 1 ಕೋಟಿ ಮೌಲ್ಯದ 830 ಕೆಜಿ ಕೂದಲು ಕಳ್ಳತನ

Bengaluru Theft Case: ಬೆಂಗಳೂರಿನ ಹೊರವಲಯದಲ್ಲಿರುವ ಗೋದಾಮಿನಿಂದ 830 ಕೆಜಿ ತೂಕದ, 1 ಕೋಟಿ ರೂ. ಮೌಲ್ಯದ ಕೂದಲನ್ನು ಕಳ್ಳತನ ಮಾಡಲಾಗಿದೆ. ಎಸ್‌ಯುವಿ ಕಾರಿನಲ್ಲಿ ಬಂದ ಆರು ಜನರು ಈ ಕೃತ್ಯ ಎಸಗಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.

ಪೂರ್ತಿ ಓದಿ

01:36 PM (IST) Mar 06

ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ |ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ವಾಪಸ್, ಸಿಟಿ ರವಿ ಆಕ್ರೋಶ

ಸಿಟಿ ರವಿ ಅವರು ಮತೀಯ ಆಧಾರದ ಮೀಸಲಾತಿಯನ್ನು ವಿರೋಧಿಸಿದ್ದು, ಇದು ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿಯ ಆರೋಪಿಗಳ ಕೇಸ್ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪೂರ್ತಿ ಓದಿ

12:39 PM (IST) Mar 06

ತೇಜಸ್ವಿ ಸೂರ್ಯ-ಶಿವಶ್ರೀ ಕಲ್ಯಾಣ; ಮದುವೆಗಗೆ ಯಾರೆಲ್ಲಾ ಬಂದಿದ್ರು? ಫೋಟೋಗಳಲ್ಲಿ ನೋಡಿ

Tejasvi Surya Marriage: ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ವಿವಾಹವು ಬೆಂಗಳೂರಿನಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ರಾಜಕೀಯ ಗಣ್ಯರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಪೂರ್ತಿ ಓದಿ

11:42 AM (IST) Mar 06

ದಾಂಪತ್ಯಕ್ಕೆ ಕಾಲಿರಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ವಿವಾಹವಾಗಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ನಡೆದ ಸರಳ ವಿವಾಹದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು.

ಪೂರ್ತಿ ಓದಿ

09:57 AM (IST) Mar 06

ಸೌಜನ್ಯ ಕೇಸ್ ವಿಡಿಯೋ ಮಾಡಿದ್ದ ಯುಟ್ಯೂಬರ್ Dhootha ಸಮೀರ್‌ ಬಂಧನಕ್ಕೆ ಯತ್ನ; ಪೊಲೀಸರಿಂದ ನೋಟಿಸ್

ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ ಸಮೀರ್ ಎಂಡಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಜೀವ ಬೆದರಿಕೆ ಕರೆಗಳು ಬಂದಿವೆ ಎಂದುಸಮೀರ್ ಎಂ.ಡಿ. ಹೇಳಿಕೆ ನೀಡಿದ್ದಾರೆ.

ಪೂರ್ತಿ ಓದಿ

07:41 AM (IST) Mar 06

ತುಮಕೂರು: ಲಂಚ ಕೇಳಿದ ಭ್ರಷ್ಟ ಅಧಿಕಾರಿಯ ಟೇಬಲ್‌ ಮೇಲೆ ಚಿಲ್ಲರೆ ಸುರಿದು ಪ್ರತಿಭಟಿಸಿದ ರೈತರು!

ಚಿಕ್ಕನಾಯಕನಹಳ್ಳಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ರೈತರು, ಸಾರ್ವಜನಿಕರು ಕೆಆರ್‌ಎಸ್‌ ಪಕ್ಷದ ನೇತೃತ್ವದಲ್ಲಿ ಚಿಲ್ಲರೆ ಹಣ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ ರಾಘವೇಂದ್ರ ಒಡೆಯರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ

More Trending News