LIVE NOW
Published : Oct 05, 2026, 05:24 AM ISTUpdated : Oct 05, 2026, 06:58 AM IST

Karnataka News Live: ಮಧುರಖಂಡಿ-ಯಲ್ಲಟ್ಟಿ ರೈತರ ಮೊಗದಲ್ಲಿ ಮಂದಹಾಸ, ನೆಮ್ಮದಿ ತಂದ ಜಲವಿಸ್ಮಯ; ಭರ್ತಿಯಾದ ಕೆರೆ

ಸಾರಾಂಶ

ದಾವಣಗೆರೆ: ಎಸ್ಐಆರ್ ಎಂಬುದು ಬಿಜೆಪಿ ಮತ್ತು ಆರೆಸ್ಸೆಸ್‌ ಕುತಂತ್ರದ ಕೂಸಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ಎಸ್ಐಆರ್‌ನ ಅಗತ್ಯವಿಲ್ಲ. ಬದಲಿಗೆ ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮತ್ತು ಸುಧಾರಣೆ ತರುವ ಅಗತ್ಯವಿದೆ ಎಂದರು. 

ದೇಶದ ಹಲವಾರು ಭಾಗಗಳಲ್ಲಿ ಚುನಾವಣಾ ವೇಳೆ ಅಕ್ರಮ, ಹಣ ಮತ್ತು ಸಾಮಗ್ರಿಗಳ ದುರುಪಯೋಗ ನಡೆಯುತ್ತಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣಾ ವಿಚಾರಗಳು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ. ನ್ಯಾಯಾಲಯವು ಇಂತಹ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

06:58 AM (IST) Oct 05

ಮಧುರಖಂಡಿ-ಯಲ್ಲಟ್ಟಿ ರೈತರ ಮೊಗದಲ್ಲಿ ಮಂದಹಾಸ, ನೆಮ್ಮದಿ ತಂದ ಜಲವಿಸ್ಮಯ; ಭರ್ತಿಯಾದ ಕೆರೆ

ಮಧುರಖಂಡಿ-ಯಲ್ಲಟ್ಟಿ ಮಾರ್ಗದ ಮಧ್ಯದಲ್ಲಿರುವ ಕೆರೆಯು ಜಿಎಲ್‌ಬಿಸಿ ಕಾಲುವೆ ನೀರಿನಿಂದ ಭರ್ತಿಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದ್ದು, ಕಬ್ಬು, ಶೇಂಗಾ ಮತ್ತು ಅರಿಷಿಣ ಬೆಳೆಯುವ ಸಾವಿರಾರು ರೈತರಿಗೆ ಅನುಕೂಲವಾಗಿದೆ.

Read Full Story

06:34 AM (IST) Oct 05

Sandalwood - ಉಪೇಂದ್ರ 'ಎ' ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ಆರೋಗ್ಯ ಗಂಭೀರ - ನೆರವಿಗೆ ಮೊರೆ

ಉಪೇಂದ್ರ ಅವರ 'ಎ' ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಸತತ ಸೋಲುಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿ ಎದುರಾಗಿದೆ. ಚಿತ್ರರಂಗ ಮತ್ತು ಸರ್ಕಾರ ತಕ್ಷಣ ನೆರವು ನೀಡಬೇಕೆಂದು ಆಪ್ತರು ಮನವಿ ಮಾಡಿದ್ದಾರೆ.
Read Full Story

06:17 AM (IST) Oct 05

Bengaluru ಕೋಟಿ ಕೋಟಿ ಅನುದಾನವಿದ್ದರೂ ಮೈಸೂರು ರಸ್ತೆಯ ಈ ಸೇತುವೆಗೇಕೆ ಕಠೋರ ಶಾಪ?

ಬೆಂಗಳೂರು ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ ₹2000 ಕೋಟಿ ಅನುದಾನ ಬಂದಿದ್ದರೂ, 70 ವರ್ಷದ ಹಳೆಯ ಸೇತುವೆ ಅಗಲೀಕರಣಗೊಂಡಿಲ್ಲ. ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ರಕ್ಷಣೆಗಾಗಿ ಸರ್ಕಾರಗಳು ಈ ಕಾಮಗಾರಿಯನ್ನು ನಿರ್ಲಕ್ಷಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Read Full Story

06:11 AM (IST) Oct 05

Bengaluru - ಶೇ.43ರಷ್ಟು ಮುಂಗಾರು ಮಳೆ ಕೊರತೆ, ಬತ್ತಿದ ಕೆರೆಗಳು - ಕಾದಿದೆಯಾ ಜಲಕಂಟಕ?

ಬೆಂಗಳೂರಿನಲ್ಲಿ ಈ ಬಾರಿ ಶೇ.43ರಷ್ಟು ಮುಂಗಾರು ಮಳೆ ಕೊರತೆಯಾಗಿದ್ದು, ಕೆರೆಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಭಾರಿ ನೀರಿನ ಅಭಾವ ಮತ್ತು ಟ್ಯಾಂಕರ್ ನೀರಿನ ದರ ಹೆಚ್ಚಾಗುವ ಆತಂಕ ಎದುರಾಗಿದೆ.
Read Full Story

05:59 AM (IST) Oct 05

ಬೆಂಗಳೂರಿನ ಕೆರೆ ಏರಿ ಕಬಳಿಕೆ - 9 ವರ್ಷಗಳ ಹಿಂದಿನ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರಿನ ಕೆರೆ ಏರಿ ಪ್ರದೇಶ ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ 9 ವರ್ಷಗಳ ಹಿಂದಿನ ಪ್ರಕರಣದ ತನಿಖೆ ಮುಂದುವರಿಸಲು ಹೈಕೋರ್ಟ್ ಆದೇಶಿಸಿದೆ. ಒಂದೇ ಪ್ರಕರಣದಲ್ಲಿ ಯಲಹಂಕ ಠಾಣೆ ಮತ್ತು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಕೋರಿದ್ದ ಕಂದಾಯ ಅಧಿಕಾರಿಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Read Full Story

05:50 AM (IST) Oct 05

ನಕಲಿ ಔಷಧ ದಂಧೆ - ಟರ್ಕಿಯಿಂದ ಅಸಲಿ ಲೇಬಲ್ ತಂದು ಅಂಟಿಸಿ ಕೋಟ್ಯಂತರ ರೂಪಾಯಿ ವ್ಯವಹಾರ

ಬಿಡದಿ ಸೇರಿ ಹಲವೆಡೆ ನಡೆದ ದಾಳಿಯಲ್ಲಿ ನಕಲಿ ಫೈಜರ್ ಔಷಧಿ ಜಾಲ ಪತ್ತೆಯಾಗಿದೆ. ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಟರ್ಕಿಯಿಂದ ಅಸಲಿ ಲೇಬಲ್ ತಂದು ನಕಲಿ ಔಷಧಿಗೆ ಅಂಟಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದನು. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
Read Full Story

05:45 AM (IST) Oct 05

ಬೆಂಗಳೂರಿನ ನೀರಿನ ಭವಿಷ್ಯ - ವಿಶ್ವಬ್ಯಾಂಕ್ ನೆರವಿನಿಂದ ಜಲಮಂಡಳಿಯ ಹೊಸ ಹೆಜ್ಜೆ ಏನು?

ವಿಶ್ವಬ್ಯಾಂಕ್ ನೆರವಿನಿಂದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ 148 ಎಂಎಲ್‌ಡಿ ಸಾಮರ್ಥ್ಯದ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ಚುರುಕುಗೊಳಿಸಲು ಜಲಮಂಡಳಿ ಅಧ್ಯಕ್ಷೆ ಸೂಚಿಸಿದ್ದಾರೆ. ಅಲ್ಲದೆ, ಜೈಕಾ ನೆರವಿನ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೂ ಅಂತಿಮ ರೂಪ ನೀಡಲಾಗಿದೆ.
Read Full Story

More Trending News