ತುಮಕೂರು: ಸಿದ್ಧಗಂಗಾ ಮಠ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ನೈಸ್ ಸಂಸ್ಥೆ ಅಶೋಕ್ ಖೇಣಿ ವಿರುದ್ಧ ನಗರದ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಅವರ ಹೇಳಿಕೆ ಖಂಡಿಸಿದ್ದಾರೆ.
ಎರಡು ದಿನದಲ್ಲಿ ಖೇಣಿ ಸಿದ್ಧಗಂಗಾ ಮಠಕ್ಕೆ ಬಂದು ಸ್ವಾಮೀಜಿಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಖೇಣಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ನಗರದ ಕನ್ನಡ ಭವನದಲ್ಲಿ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಸಭೆ ಸೇರಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗೆ ಅಪಮಾನ ಮಾಡುವ ರೀತಿಯಲ್ಲಿ ಅಶೋಕ್ ಖೇಣಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಅವರ ವಿರುದ್ಧ ಹೋರಾಟ ಮಾಡುವ ನಿರ್ಣಯ ಕೈಗೊಂಡರು.
08:44 AM (IST) Oct 03
ಶಿವಮೊಗ್ಗದ ತ್ಯಾಗರ್ತಿಯಲ್ಲಿ ನಾಗಪ್ಪ ಎಂಬುವವರು ಕಳೆದುಕೊಂಡಿದ್ದ 17,500 ರೂ. ಹಣವು 9ನೇ ತರಗತಿ ವಿದ್ಯಾರ್ಥಿ ಅಜಯ್ ಕುಮಾರ್‌ಗೆ ಸಿಕ್ಕಿತ್ತು. ಈ ಬಾಲಕ ಪ್ರಾಮಾಣಿಕತೆಯಿಂದ ಆ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾನೆ.
08:36 AM (IST) Oct 03
08:33 AM (IST) Oct 03
ಆಟೋ, ಟ್ಯಾಕ್ಸಿ ವಾಹನ ಚಾಲಕರ 25 ವರ್ಷಗಳ ಬಹುದಿನಗಳ ಬೇಡಿಕೆ ಈಡೇರಿದ್ದು, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಸಿಕ್ಕಿದೆ. ವಾಹನ ಚಾಲಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ.
08:23 AM (IST) Oct 03
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಸನ-ಬೇಲೂರು ಚತುಷ್ಪಥ ರಸ್ತೆ ಯೋಜನೆಗೆ 426 ಕೋಟಿ ರೂ. ಪರಿಷ್ಕೃತ ವೆಚ್ಚದೊಂದಿಗೆ ಮರುಜೀವ ಸಿಕ್ಕಿದೆ. ನವೆಂಬರ್ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
08:11 AM (IST) Oct 03
ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು 6 ಜನರು ಗಾಯಗೊಂಡ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ಗಾಯಾಳುಗಳೆಲ್ಲ ರಾಯಚೂರು ಮೂಲದವರೆಂದು ಗುರುತಿಸಲಾಗಿದೆ.
08:04 AM (IST) Oct 03
ಶಿವರಾಮ ಕಾರಂತ್ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನಗಳ ಮಾಲೀಕರು ತಮ್ಮ ಸ್ವಂತ ಜಾಗಗಳಲ್ಲೇ ಬದಲಿ ನಿವೇಶನ ನೀಡುವಂತೆ ಬಿಡಿಎಗೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾ.ಭೋಪಯ್ಯ ವರದಿ ಇದ್ದರೂ ಬಿಡಿಎ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
07:53 AM (IST) Oct 03
ಅಂಕೋಲಾದ ಕೇಣಿ ಹಳ್ಳದಲ್ಲಿ ಸಮುದ್ರದಲ್ಲಿ ಕಾಣಸಿಗುವ ಕೊಕ್ಕರಾ ಮೀನುಗಳು ಭಾರಿ ಪ್ರಮಾಣದಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿವೆ. ಮೀನು ಹಿಡಿಯಲು ತೆರಳಿದ್ದ ಯುವಕರ ಗಾಳಕ್ಕೆ ಒಂದರ ಹಿಂದೊಂದರಂತೆ ನೂರಾರು ಮೀನುಗಳು ಸಿಕ್ಕಿವೆ.
07:36 AM (IST) Oct 03
ಮಡಿವಾಳ ಸಮಾಜದ ವ್ಯಕ್ತಿಯೊಬ್ಬರು ಹೊರರಾಜ್ಯದವರನ್ನು ಕರೆಸಿ ಕ್ಷೌರಿಕ ವೃತ್ತಿ ಆರಂಭಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ತಾಲೂಕು ಸವಿತಾ ಸಮಾಜದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಪರಂಪರಾಗತ ವೃತ್ತಿಗೆ ಧಕ್ಕೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
07:32 AM (IST) Oct 03
ನೈಸ್ ರಸ್ತೆ ಹಗರಣದ ಬಗ್ಗೆ ಸಿಎಂ ಆಗಿದ್ದಾಗ ಸುಮ್ಮನಿದ್ದ ಎಚ್.ಡಿ. ಕುಮಾರಸ್ವಾಮಿ ಈಗ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ವಾಗ್ದಾಳಿ. ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಫಾರಂ-7 ದುರ್ಬಳಕೆ ಬಗ್ಗೆ ಗಂಭೀರ ಆರೋಪ ಮಾಡಿದ್ರು.
07:22 AM (IST) Oct 03
ಹೆಬ್ಬಾಳದ ಸಂಚಾರಿ ದಟ್ಟಣೆ ನಿವಾರಿಸಲು ಬಿಡಿಎ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಕಿರು ಸುರಂಗ ಮತ್ತು ಎಲಿವೇಟೆಡ್ ರಸ್ತೆ ನಿರ್ಮಿಸುತ್ತಿದೆ. ಈ ಯೋಜನೆಯಿಂದ ಹೆಬ್ಬಾಳ ಕೆರೆ, ಅಂತರ್ಜಲ ಹಾಗೂ ಮರಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಲಾಗಿದ್ದು, 1072 ಮರಗಳನ್ನು ಸ್ಥಳಾಂತರಿಸಲಾಗುತ್ತಿದೆ.