Apr 2, 2025, 11:19 PM IST
Karnataka News Live 2nd April: ನನ್ನ ಗೆಲುವಿನಲ್ಲಿ ಯಡಿಯೂರಪ್ಪ ಶ್ರಮವಿದೆ: ಸಂಸದ ಗೋವಿಂದ ಕಾರಜೋಳ


ಬೆಂಗಳೂರು (ಮಾ.11): ಗ್ಯಾರಂಟಿ ಬಿಸಿಯನ್ನು ರಾಜ್ಯ ಸರ್ಕಾರ ಈಗ ನೇರವಾಗಿ ಜನರಿಗೆ ವರ್ಗಾವಣೆ ಮಾಡಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಜನರಿಂದಲೇ ತುಂಬಿಸುವ ನಿಟ್ಟಿನಲ್ಲಿ ಹಾಲು, ವಿದ್ಯುತ್, ಬಸ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಸುತ್ತಿನಲ್ಲಿ ಡೀಸೆಲ್ ದರವನ್ನು ಏರಿಕೆ ಮಾಡಿದೆ. ಖಜಾನೆಗೆ 2 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆಯಲ್ಲಿ ಡೀಸೆಲ್ ದರವನ್ನು ಇಂದಿನಿಂದಲೇ ಜಾರಿಗೆ ಬರುವಂತೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅದರೊಂದಗೆ ಎಂದಿನಂತೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಅಗ್ಗ ಎನ್ನುವ ಹಳೇ ಹೇಳಿಕೆಯನ್ನೇ ಸಮರ್ಥನೆಗೆ ಬಳಸಿಕೊಂಡಿದೆ.
11:19 PM
ನನ್ನ ಗೆಲುವಿನಲ್ಲಿ ಯಡಿಯೂರಪ್ಪ ಶ್ರಮವಿದೆ: ಸಂಸದ ಗೋವಿಂದ ಕಾರಜೋಳ
ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಪೂರ್ತಿ ಓದಿ11:14 PM
ಚಿಕ್ಕಮಗಳೂರು ಹಸಿರ ಕಾನನದಲ್ಲಿ ರಕ್ತದೋಕುಳಿ! ಮೂರು ಕೊಲೆ, ಒಂದು ಆತ್ಮಹತ್ಯೆಗೆ ಕಾರಣವಾದ ಹೆಂಡತಿ!
ಚಿಕ್ಕಮಗಳೂರಿನಲ್ಲಿ ರತ್ನಾಕರ್ ಎಂಬಾತ ತನ್ನ ಅತ್ತೆ, ಮಗಳು ಮತ್ತು ನಾದಿನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹೆಂಡತಿ ಬಿಟ್ಟು ಹೋದ ನೋವಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೂರ್ತಿ ಓದಿ11:06 PM
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಬೆಲೆ ಏರಿಕೆ: ಮಾಜಿ ಶಾಸಕ ಎಲ್.ನಾಗೇಂದ್ರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಬಿಜೆಪಿ ನಗರಾಧಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಕಿಡಿಕಾರಿದರು.
11:00 PM
ರಂಜಾನ್ ಸಹಾಯಾರ್ಥ: ₹2.5 ಲಕ್ಷ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ 250 ಮಕ್ಕಳಿಗೆ ಕುಡಿಯುವ ನೀರು ಕೊಟ್ಟ ಶಿಕ್ಷಕಿಯರು!
ಚಿಕ್ಕಮಗಳೂರಿನ ಸರ್ಕಾರಿ ಶಾಲೆಯ ಶಿಕ್ಷಕಿಯರು ರಂಜಾನ್ ಹಬ್ಬದ ಸಂದರ್ಭದಲ್ಲಿ 2.5 ಲಕ್ಷ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ವಿದ್ಯಾರ್ಥಿಗಳ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಮೂರು ವರ್ಷಗಳಿಂದ ನೀರಿನ ತೊಂದರೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಶಿಕ್ಷಕಿಯರ ಈ ಕಾರ್ಯವು ಸಹಾಯವಾಗಿದೆ. ಇದಕ್ಕೂ ಶಾಲೆ ಮಕ್ಕಳು ಅನುಭವಿಸಿ ಸಂಕಷ್ಟ ಒಮ್ಮೆ ನೋಡಿ..
ಪೂರ್ತಿ ಓದಿ10:44 PM
ಡೋನಾಲ್ಡ್ ಟ್ರಂಪ್ ಸರ್ಕಾರದಿಂದ ಶೀಘ್ರದಲ್ಲೇ ಎಲಾನ್ ಮಸ್ಕ್ ಹೊರಕ್ಕೆ?
ಡೋನಾಲ್ಡ್ ಟ್ರಂಪ್ ಸರ್ಕಾರದ DOGE ಹುದ್ದೆಯಲ್ಲಿದ್ದ ಆಪ್ತ ಎಲಾನ್ ಮಸ್ಕ್‌ಗೆ ಕೊಕ್ ನೀಡಲಾಗುತ್ತಿದೆಯಾ? ಹೌದು ಎನ್ನುತ್ತಿದೆ ಸರ್ಕಾರದ ಮೂಲಗಳು. ಕಾರಣವೇನು?
ಪೂರ್ತಿ ಓದಿ10:40 PM
ಇ-ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ: ಎಚ್.ಡಿ.ರೇವಣ್ಣ ಕಿಡಿ
ಪುರಸಭೆ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ.
ಪೂರ್ತಿ ಓದಿ10:16 PM
ಶ್ರೀಲಂಕಾದ ಸಮುದ್ರ ಪಾಲಾದ ಸೈಕೋ ಜಯಂತನ ಚಿನ್ನುಮರಿ! ಗಂಡನಿಗೆ ಬುದ್ಧಿ ಕಲಿಸದ ಜಾಹ್ನವಿ ಸಾವು ನ್ಯಾಯವೇ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡನ ಕಿರುಕುಳ ತಾಳಲಾರದೆ ಚಿನ್ನುಮರಿ ಸಮುದ್ರಕ್ಕೆ ಹಾರಿದ್ದಾಳೆ. ಆಕೆ ಬದುಕಿದ್ದಾಳೋ, ಸತ್ತಳೋ ಎಂಬುದು ತಿಳಿದಿಲ್ಲ. ಆದರೆ ಜಯಂತ್ ಹುಚ್ಚನಂತೆ ವರ್ತಿಸುತ್ತಿದ್ದಾನೆ.
ಪೂರ್ತಿ ಓದಿ9:43 PM
ರತನ್ ಟಾಟಾ ಮುದ್ದಿನ ನಾಯಿ ಖರ್ಚಿಗೆ ಲಕ್ಷ ಲಕ್ಷ ರೂ, ವಿಲ್‌ನಲ್ಲಿ ಹೃದಯಶ್ರೀಮಂತಿಗೆ ಮೆರೆದ ಉದ್ಯಮಿ
ರತನ್ ಟಾಟಾ ಬಿಟ್ಟು ಹೋದ ಸುಮಾರು 3,800 ಕೋಟಿ ರೂಪಾಯಿ ಆಸ್ತಿಯನ್ನು ಯಾರಿಗೆಲ್ಲಾ ಹಂಚಿಕೆ ಮಾಡಿದ್ದಾರೆ ಅನ್ನೋ ವಿವರ ಹಲವರು ಕಣ್ಣಾಲಿ ತೇವಗೊಳಿಸಿದೆ. ಈ ಆಸ್ತಿಯ ಪಾಲಿನಲ್ಲಿ ರತನ್ ಟಾಟಾ ಮುದ್ದಿನ ನಾಯಿ ಟಿಟೂಗೆ ಲಕ್ಷ ಲಕ್ಷ ರೂಪಾಯಿ ತೆಗೆದಿಟ್ಟಿದ್ದಾರೆ. ಇದರ ತಿಂಗಳ ಖರ್ಚಿಗೆ ಎಷ್ಟು ರೂಪಾಯಿ ಇದೆ ಗೊತ್ತಾ?
ಪೂರ್ತಿ ಓದಿ9:40 PM
ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ: ನಟ ಚೇತನ್ ಅಹಿಂಸಾ
ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ. ಪ್ರಸ್ತುತ ಪರ್ಯಾಯವಾದ ರಾಜಕೀಯ ವ್ಯವಸ್ಥೆ ಕಟ್ಟುವ ಅವಶ್ಯಕತೆ ಇದೆ. ಸಮ ಸಮಾಜಕ್ಕಾಗಿ ರಾಜಕೀಯ ಚಳವಳಿ ಆರಂಭವಾಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ನಟ ಅಹಿಂಸಾ ಚೇತನ್ ತಿಳಿಸಿದರು.
9:24 PM
ಧಾರವಾಡ ನೀರಾವರಿ ನಿಗಮದ ಇಂದುಮತಿ ಕಾಂಬಳೆ ಇನ್ನಿಲ್ಲ! ಬಸ್‌ನಲ್ಲಿ ಪ್ರಯಾಣಿಸುವಾಗ ಹಾರ್ಟ್ ಅಟ್ಯಾಕ್
ಧಾರವಾಡದಲ್ಲಿ ನೀರಾವರಿ ನಿಗಮದ ಇಂದುಮತಿ ಕಾಂಬಳೆ ಎಂಬ ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವರು ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಪೂರ್ತಿ ಓದಿ9:21 PM
ಹನಿಟ್ರ್ಯಾಪ್ ಪ್ರಕರಣ.. ಯಾವ ತನಿಖೆ ಮಾಡುತ್ತಾರೋ ಮಾಡಲಿ: ಸಚಿವ ಕೆ.ಎನ್.ರಾಜಣ್ಣ
ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಕೊಡುತ್ತಾರೋ ಮತ್ತೊಂದು ಮಾಡುತ್ತಾರೋ ಮಾಡಲಿ. ಅದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಪೂರ್ತಿ ಓದಿ9:20 PM
ಆರಂಭದಲ್ಲಿ ಆರ್‌ಸಿಬಿ ಸೈಲೆಂಟ್ ಬಳಿಕ ವೈಲೆಂಟ್, ಗುಜರಾತ್‌ಗೆ 169 ರನ್ ಟಾರ್ಗೆಟ್
ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ಆರಂಭದಲ್ಲಿ ಸೈಲೆಂಟ್ ಆಗಿದ್ದು ಬಳಿಕ ಅಬ್ಬರಿಸಿದೆ. ಈ ಮೂಲಕ 169 ರನ್ ಸಿಡಿಸಿದೆ. ಇದೀಗ ಈ ಅಲ್ಪ ಟಾರ್ಗೆಟನ್ನು ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ?
ಪೂರ್ತಿ ಓದಿ9:03 PM
ಶಾಸಕ ಯತ್ನಾಳ ಬಗ್ಗೆ ಹೈಕಮಾಂಡ್‌ನಿಂದ ಸಕಾಲದಲ್ಲಿ ತೀರ್ಮಾನ: ಬಿ.ಶ್ರೀರಾಮುಲು
ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಪೂರ್ತಿ ಓದಿ8:52 PM
ಶಾಸಕ ಯತ್ನಾಳ್ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ: ಬಿ.ವೈ.ವಿಜಯೇಂದ್ರ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಳ ಫ್ರೀಯಾಗಿದ್ದಾರೆ. ಅವರು ಏನೇ ಆರೋಪ ಮಾಡಲಿ, ದಾಳಿ ಮಾಡಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪೂರ್ತಿ ಓದಿ8:45 PM
ರೈತರ ಬಹುದಿನಗಳ ಕನಸು ನನಸು: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕಳೆದ 25 ವರ್ಷಗಳಿಂದ ಈ ಭಾಗದ ರೈತರು ನೀರಾವರಿ ಯೋಜನೆಗಳ ಬಗ್ಗೆ ಅತೀ ಆಶಯ ಹೊಂದಿದ್ದರು. ಅದರಂತೆಯೇ ಈಗ ಅವರ ಆಶಯ ಈಡೇರಿದ್ದು, ಸತ್ತಿಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರುವ ಮೂಲಕ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪೂರ್ತಿ ಓದಿ8:24 PM
ಮಂಗಳೂರು ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ, 17 ಆರೋಪಿಗಳು ಖುಲಾಸೆ!
ಮಂಗಳೂರಿನ ಅತ್ತಾವರದಲ್ಲಿ 2022ರಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣದ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರೂ, ಪ್ರಮುಖ ಸಾಕ್ಷಿಗಳು ಹಾಜರಾಗದ ಕಾರಣ ಆರೋಪಿಗಳು ಖುಲಾಸೆಯಾಗಿದ್ದಾರೆ.
ಪೂರ್ತಿ ಓದಿ8:21 PM
ಈ ಫೋಟೋದಲ್ಲಿರುವ ಬಿಗ್ ಬಾಸ್ ವಿನ್ನರ್ ಯಾರು? ಚಾಣಾಕ್ಷರಾಗಿದ್ದರೆ 5 ಸೆಕೆಂಡ್‌ನಲ್ಲಿ ಗೆಸ್ ಮಾಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಎಐ ಘಿಬ್ಲಿ ಇಮೇಜ್‌ನಲ್ಲಿರುವ ವ್ಯಕ್ತಿ ಕನ್ನಡ ಕಿರುತೆರೆಯ ಬಿಗ್ ಬಾಸ್ ವಿನ್ನರ್ ಯಾರೆಂದು ಗೆಸ್ ಮಾಡಿ..
ಪೂರ್ತಿ ಓದಿ8:09 PM
ನಟಿ ರನ್ಯಾ ರಾವ್ ಚಿನ್ನದ ಕೇಸ್, ಬಂಧಿತ ಸಾಹಿಲ್ ಜೈನ್‌ಗೆ ನ್ಯಾಂಯಾಂಗ ಬಂಧನ
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಹಿಲ್ ಜೈನ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರನ್ಯಾ ಚಿನ್ನ ಸಾಗಣೆಗೆ ಸಹಾಯ ಮಾಡಿದ್ದ ಆರೋಪ ಸಾಹಿಲ್ ಮೇಲಿದೆ.
ಪೂರ್ತಿ ಓದಿ8:05 PM
ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ತುಷ್ಟೀಕರಣ: ಮಾಜಿ ಸಂಸದ ಎಸ್.ಮುನಿಸ್ವಾಮಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಮುಸ್ಲಿಮರ ತುಷ್ಟೀಕರಣ, ಹಾಲು, ವಿದ್ಯುತ್, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಪೂರ್ತಿ ಓದಿ7:40 PM
ಶಾಸಕ ಯತ್ನಾಳ್ ಕಾಂಗ್ರೆಸ್‌ಗೆ ಸೂಟ್ ಆಗಲ್ಲ: ಸಚಿವ ಸತೀಶ್ ಜಾರಕಿಹೊಳಿ
ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವುದು ಶುದ್ಧ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೇ ಸೂಟ್ ಆಗುತ್ತದೆ.
ಪೂರ್ತಿ ಓದಿ7:33 PM
ಶಾಸಕ ಯತ್ನಾಳ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ: ಸಂಸದ ಜಗದೀಶ್ ಶೆಟ್ಟರ್
ಕಳೆದ ಒಂದು ವರ್ಷದ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.
7:28 PM
ರಾಜಕಾರಣದಲ್ಲಿ ಏನು ಬೇಕಾದರೂ ಆಗ್ಬಹುದು: ಮುರುಗೇಶ ನಿರಾಣಿ
ರಾಜಕಾರಣದಲ್ಲಿ ಏನು ಬೇಕಾದರೂ ಆಗ್ತದ, ಯಾವತ್ತೂ ಸೂರ್ಯ ಪೂರ್ವಕ್ಕೆ ಹುಟ್ಟೋದು ನಿಸರ್ಗ ನಿಯಮ. ಆದ್ರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗುತ್ತದೆ. ಇಲ್ಲಿ ಯಾವತ್ತೂ ಮೆಥಾಮೆಟಿಕ್ಸ್ ಅಪ್ಲೈ ಆಗಲ್ಲ. ಏನೇ ಇದ್ದರೂ ಅದು ಕೆಮಿಷ್ಟ್ರಿ, ಟು ಪ್ಲಸ್ ಟು ಫೋರ್ ಆಗಬಹುದು.
ಪೂರ್ತಿ ಓದಿ7:19 PM
ಗುಜರಾತ್ ವಿರುದ್ಧ ಆರ್‌ಸಿಬಿ ಟಾಸ್ ಸೋತಿದ್ದೇ ಒಳ್ಳೇದಾಯ್ತಾ? ಪ್ಲೇಯಿಂಗ್ 11 ಬದಲಾವಣೆ ಏನು?
ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ಟಾಸ್ ಸೋತಿದೆ. ಆದರೆ ಇದರಿಂದ ತಂಡಕ್ಕಿದೆಯಾ ಲಾಭ? ಪ್ಲೇಯಿಂಗ್ 11ನಲ್ಲಿ ಯಾರು ಸ್ಥಾನ ಪಡೆದಿದ್ದಾರೆ?
ಪೂರ್ತಿ ಓದಿ7:06 PM
ಶೀಘ್ರದಲ್ಲೇ ಅಬುಧಾಬಿ ವಿಶ್ವದ ಮೊದಲ ಸಂಪೂರ್ಣ AI ಚಾಲಿತ ಸರ್ಕಾರ, ಏನಿದು ಎಐ ನೇಟೀವ್ ಸಿಟಿ?
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಆದರೆ ಅಬುಧಾಬಿ ಎಲ್ಲರಿಗಿಂತ ಹಲವು ಹೆಜ್ಜೆ ಮುಂದಿದೆ. ಕಾರಣ ಅಬುಧಾಬಿ ಶೀಘ್ರದಲ್ಲೇ ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಸರ್ಕಾರ ಹಾಗೂ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ. ಏನಿದು ನೇಟೀವ್ ಎಐ ಸಿಟಿ?
ಪೂರ್ತಿ ಓದಿ6:55 PM
Uber for Teens ಟೀನೆಜ್ ಮಕ್ಕಳ ಸುರಕ್ಷತೆಗಾಗಿ ಹೊಸ ಸೇವೆ ಆರಂಭಿಸಿದ ಊಬರ್!
Uber ಭಾರತದಲ್ಲಿ 13-17 ವರ್ಷ ವಯಸ್ಸಿನ ಮಕ್ಕಳಿಗಾಗಿ 'Uber for Teens' ಸೇವೆಯನ್ನು ಪ್ರಾರಂಭಿಸಿದೆ. ಇದು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. GPS ಟ್ರ್ಯಾಕಿಂಗ್ ಮತ್ತು ತುರ್ತು ಬಟನ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಪೂರ್ತಿ ಓದಿ6:38 PM
ರೀಲ್ಸ್ ಮಾಡ್ತಿದ್ದ ಹುಡುಗಿಯ ಕೂದಲು ಹಿಡಿದು ಎಳೆದಾಡಿದ ಕೋತಿ: ವೀಡಿಯೋ ವೈರಲ್
ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದಾಗ ಕೋತಿಯೊಂದು ಆಕೆಯ ಕೂದಲನ್ನು ಹಿಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿದೆ. ಟ್ರೆಂಡಿಂಗ್ ಹಾಡಿಗೆ ರೀಲ್ಸ್ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ.
ಪೂರ್ತಿ ಓದಿ6:34 PM
ಕಾಂಗ್ರೆಸ್‌ನಿಂದ ಬೆಲೆ ಏರಿಕೆ ಲೂಟಿ; ರೈತರಿಗೆ ರಿಲೀಫ್ ಕೊಟ್ಟ ಕೇಂದ್ರದ ವಕ್ಫ್ ಕಾಯ್ದೆ ತಿದ್ದುಪಡಿ: ಆರ್. ಅಶೋಕ
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿದೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ಐದು ಗ್ಯಾರಂಟಿಗಳಿಗಾಗಿ ಮನೆ ಮನೆ ಲೂಟಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ6:15 PM
ಮುಂದೂಡಿದ್ರಾ ರಿಷಬ್ ಶೆಟ್ಟಿ ಕಾಂತಾರಾ 1 ಬಿಡುಗಡೆ ? ಚಿತ್ರತಂಡದಿಂದ ಮಹತ್ವದ ಅಪ್‌ಡೇಟ್
ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮತ್ತೊಮ್ಮೆ ಪ್ಯಾನ್ ಇಂಡಿಯಾ ಮೂಲಕ ಅಬ್ಬರ ನೋಡಲು ಸ್ಯಾಂಡಲ್‌ವುಡ್ ಕೂಡ ಸಜ್ಜಾಗಿದೆ. ಇದರ ನಡುವೆ ಕಾಂತಾರ 1 ಸಿನಿಮಾ ಬಿಡುಗಡೆ ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ.
ಪೂರ್ತಿ ಓದಿ5:49 PM
ಇನ್ಮುಂದೆ ಕರ್ನಾಟಕದಲ್ಲಿ ಓಲಾ ಊಬರ್ ರ್ಯಾಪಿಡೊ ಬೈಕ್ ಸೇವೆ ಬಂದ್! ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರಿನಲ್ಲಿ ಓಲಾ, ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆರು ವಾರಗಳಲ್ಲಿ ಈ ಸೇವೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪೂರ್ತಿ ಓದಿ5:21 PM
ನಮಗೆ ಕಾಣದ ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಅದ್ಭುತ ವಿಡಿಯೋ ಸೆರೆ
ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಮಿಶನ್ ಸೆರೆ ಹಿಡಿದ ವಿಡಿಯೋ ಇದೀಗ ಹಲವು ಕುತೂಹಲ ಹುಟ್ಟು ಹಾಕಿದೆ. ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ.
ಪೂರ್ತಿ ಓದಿ5:17 PM
ಗೆಳತಿಗೆ ವಂಚಿಸಿ, ತಲೆ ತಗ್ಗಿಸಿದ ಕೊರಿಯನ್ ಮಹಾನ್ ನಟ ಬೀದಿಗೆ, ಇಲ್ಲಿ ಮೆರೆಯುತ್ತಿರೋ ಸ್ಟಾರ್ ನಟ! ಶೋಭಾ ಮಳವಳ್ಳಿ ಬರಹ!
ತಪ್ಪು ಮಾಡಿದ ನಟನನ್ನು ಕೊರಿಯಾ ಜನತೆ ಯಾವ ಮಟ್ಟಕ್ಕೆ ತಂದು ಕೂರಿಸಿದೆ ಎನ್ನೋದಕ್ಕೆ ಕಿಮ್ ಉದಾಹರಣೆ.
ಪೂರ್ತಿ ಓದಿ5:15 PM
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ
RCB ಮತ್ತು GT ನಡುವಿನ ಪಂದ್ಯದಲ್ಲಿ ಕೊಹ್ಲಿ 24 ರನ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, ಅತಿವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಪೂರ್ತಿ ಓದಿ4:55 PM
ಗಂಡು ಮಗುವಿಗ ಜನ್ಮ ನೀಡಿದ ಕಾಲೇಜು ವಿದ್ಯಾರ್ಥಿನಿ: 17ರ ಪ್ರಾಯದ ಗೆಳೆಯನ ಬಂಧನ
ಕೇರಳದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ4:46 PM
ಆರಂಭಿಸಿದ ಎರಡೇ ದಿನಕ್ಕೆ 10 ಕೋಟಿ ರೂ ಹೂಡಿಕೆ ಆಕರ್ಷಿಸಿದ ಕುಶಾ ಕಪಿಲಾ ಅಂಡರ್‌ನೀಟ್ ಬ್ರ್ಯಾಂಡ್
ಇನ್‌ಫ್ಲುಯೆನ್ಸ್ ಕುಶಾ ಕಪಿಲಾ ಅವರ ಜನಪ್ರಿಯ ಅಂಡರ್‌ನೀಟ್ ಬ್ರ್ಯಾಂಡ್ ಮೇಲೆ ಇದೀಗ ವಿಶ್ವದದ ಜನಪ್ರಿಯ ಫೈರ್‌ಸೈಡ್ ಹಾಗೂ ಮಾಮಾಅರ್ಥ್ ಹೂಡಿಕೆ ಮಾಡಿದೆ. ಬರೋಬ್ಬರಿ 8 ರಿಂದ 10 ಕೋಟಿ ರೂಪಾಯಿ ವರೆಗೆ ಸೀಡ್ ಫಂಡಿಂಗ್ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಪೂರ್ತಿ ಓದಿ4:29 PM
KSDL ದಾಖಲೆ ವಹಿವಾಟು: ಮೈಸೂರು ಸ್ಯಾಂಡಲ್ ಫ್ಯಾಕ್ಟರಿಗೆ 416 ಕೋಟಿ ರೂ. ಲಾಭ!
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ವಹಿವಾಟು ಮತ್ತು 416 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಪೂರ್ತಿ ಓದಿ4:23 PM
ಐಪಿಎಲ್ ನಡುವೆಯೇ ಮಹತ್ವದ ಬೆಳವಣಿಗೆ; ಈ ತಂಡ ತೊರೆಯಲು ಮುಂದಾದ ಯಶಸ್ವಿ ಜೈಸ್ವಾಲ್!
ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇ-ಮೇಲ್ ರವಾನಿಸಿದ್ದು, ಗೋವಾ ಪರ ಕಣಕ್ಕಿಳಿಯಲು ನಿರಪೇಕ್ಷಣ ಪತ್ರ(ಎನ್‌ಒಸಿ) ನೀಡುವಂತೆ ಮನವಿ ಮಾಡಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿಯಲು ಬಯಸಿದ್ದಾರೆ. ನಾಯಕತ್ವಕ್ಕಾಗಿ ತಂಡ ತೊರೆಯುತ್ತಿದ್ದಾರಾ ಜೈಸ್ವಾಲ್?
ಪೂರ್ತಿ ಓದಿ4:09 PM
ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಸಾವು ಪ್ರಕರಣ: ಶಿಕ್ಷೆಗೆ ತಡೆ ನೀಡುವಂತೆ ಆರೋಪಿಯಿಂದ ಸುಪ್ರೀಂಗೆ ಅರ್ಜಿ
ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಸಾವಿನ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆ ನೀಡುವಂತೆ ಆರೋಪಿ ಕಿರಣ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಸ್ಮಯ 2021 ಜೂನ್‌ನಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಳು.
ಪೂರ್ತಿ ಓದಿ3:52 PM
ನಿಮ್ಮ ವ್ಯಾಟ್ಸಾಪ್ ಸ್ಟೇಟಸ್ ಯಾರು ನೋಡಬೇಕು, ನೀವೇ ಆಯ್ಕೆ ಮಾಡಿ? ಹೊಸ ಫೀಚರ್
ವ್ಯಾಟ್ಸಾಪ್ ಸ್ಟೇಟಸ್ ಹಾಕಿದ ಬಳಿಕ ಯಾರು ನೋಡಿದ್ದಾರೆ? ಎಷ್ಟು ಲೈಕ್ಸ್ ಬಂದಿದೆ, ಯಾರು ಪ್ರತಿಕ್ರಿಯಿಸಿದ್ದಾರೆ ಎಂದು ನೋಡೋದರಲ್ಲೇ ಆನಂದ ಇದೆ. ಇದೀಗ ನಿಮ್ಮ ವ್ಯಾಟ್ಸಾಪ್ ಸ್ಟೇಟಸ್ ಯಾರು ನೋಡಬೇಕು ಅನ್ನೋದನ್ನು ನೀವೇ ಆಯ್ಕೆ ಮಾಡುವ ಫೀಚರ್ ಇದೆ.
3:50 PM
ಕರ್ನಾಟಕದಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ! ಬೇಸಿಗೆಯಲ್ಲಿ ನೌಕರರಿಗೆ ರಿಲೀಫ್ ಕೊಟ್ಟ ಸರ್ಕಾರ!
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನದ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಒಟ್ಟು 9 ಜಿಲ್ಲೆಗಳಲ್ಲಿ ಈ ಬದಲಾವಣೆ ಅನ್ವಯವಾಗಲಿದೆ.
ಪೂರ್ತಿ ಓದಿ3:46 PM
ವಕ್ಫ್‌ನ ಕ್ರೂರ ಸೆಕ್ಷನ್ 40 ಇನ್ನು ಇತಿಹಾಸ, ರಾತ್ರೋರಾತ್ರಿ ಇನ್ನು ವಕ್ಫ್ ಆಸ್ತಿ ಘೋಷಣೆ ಸಾಧ್ಯವಿಲ್ಲ!
ಲೋಕಸಭೆಯಲ್ಲಿ ಮಂಡಿಸಲಾದ ವಕ್ಫ್ (ತಿದ್ದುಪಡಿ) ಮಸೂದೆ, 2024, ವಕ್ಫ್ ಕಾಯ್ದೆಯ ಸೆಕ್ಷನ್ 40 ಅನ್ನು ರದ್ದುಗೊಳಿಸಲು ತೀರ್ಮಾನಿಸಿದೆ. ಈ ಸೆಕ್ಷನ್ ವಕ್ಫ್ ಮಂಡಳಿ ಮತ್ತು ನ್ಯಾಯಮಂಡಳಿಗೆ ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಅವಕಾಶ ನೀಡಿತ್ತು.
ಪೂರ್ತಿ ಓದಿ3:24 PM
ಸಿಡಿಲು ಬೀಳುವುದನ್ನು ಮೊದಲೇ ಸೂಚಿಸುವ ತಂತ್ರಜ್ಞಾನ ಪತ್ತೆ ಮಾಡಿದ ಇಸ್ರೋ
ಇಸ್ರೋ ಸಿಡಿಲು ಎಲ್ಲಿ ಬೀಳುತ್ತೆ ಅಂತ ಮೊದಲೇ ಕಂಡುಹಿಡಿಯಲು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ. ಈ ತಂತ್ರಜ್ಞಾನದಿಂದ ಮಳೆಗಾಲದಲ್ಲಿ ಕೃಷಿ ಕೆಲಸ ಮಾಡುವ ಜನರಿಗೆ ಸಿಡಿಲಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಬಹುದು.
ಪೂರ್ತಿ ಓದಿ3:22 PM
ಕಿತ್ತೂರು: ಶಾಸಕ ರಾಜು ಕಾಗೆ ಸಹೋದರನ ಪುತ್ರನ ಕಾರು ಅಪಘಾತ, ಬೈಕ್ ಸವಾರ ಸಾವು
ಕಿತ್ತೂರು ಬಳಿ ನಡೆದ ಕಾರು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರ ಶ್ರೀಪ್ರಸಾದ್ ಕಾಗೆ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಗೋಕಾಕ್‌ನ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದಾರೆ.
ಪೂರ್ತಿ ಓದಿ3:10 PM
ಡ್ರೈವರ್ ಆತ್ಮಹತ್ಯೆ ಪ್ರಕರಣ, 'ಗಂಡ-ಹೆಂಡ್ತಿ ನಡುವೆ ಗಲಾಟೆ ಇತ್ತು' ತಾನೇ ತನಿಖೆ ಮಾಡಿ ತೀರ್ಪು ಕೊಟ್ಟ NWKRTC!
ಬೆಳಗಾವಿಯಲ್ಲಿ ರಜೆ ಸಿಗದಿದ್ದಕ್ಕೆ ಬಸ್ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡ್ರೈವರ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.
ಪೂರ್ತಿ ಓದಿ3:05 PM
ಮತ್ತೊಂದು ಬೆಲೆ ಏರಿಕೆ ಶಾಕ್, ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣ ದುಬಾರಿ
ಹಾಲು, ವಿದ್ಯುತ್, ಪಾರ್ಕಿಂಗ್ ಸೇರಿದಂತೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣವೂ ದುಬಾರಿಯಾಗಿದೆ.
ಪೂರ್ತಿ ಓದಿ2:50 PM
ಶಾಲಾ ಮಕ್ಕಳಿಗೆ ತಮಿಳುನಾಡಲ್ಲಿ AI, ಕೋಡಿಂಗ್ ಪಠ್ಯಕ್ರಮ; ಕರ್ನಾಟಕದ ಮಕ್ಕಳಿಗೆ ಇದು ಸಿಗುತ್ತಾ?
ತಮಿಳುನಾಡಿನಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಯಾಗಿ ಪರಿಚಯಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಮತ್ತು ಕೋಡಿಂಗ್, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್‌ನಂತಹ ವಿಷಯಗಳನ್ನು ಕಲಿಸಲಾಗುವುದು.
ಪೂರ್ತಿ ಓದಿ2:48 PM
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ : ಪ್ರಮುಖ ಅಂಶಗಳು
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಆಡಳಿತವನ್ನು ಸುಧಾರಿಸುವುದು ಮಸೂದೆಯ ಮುಖ್ಯ ಉದ್ದೇಶವಾಗಿದೆ.
ಪೂರ್ತಿ ಓದಿ2:37 PM
'Best Homecoming Ever' ಸುನೀತಾ ವಿಲಿಯಮ್ಸ್‌ಗೆ ಪ್ರೀತಿಯ ಸ್ವಾಗತ ನೀಡಿದ ಮುದ್ದಿನ ನಾಯಿಗಳು!
ಸುದೀರ್ಘ ಬಾಹ್ಯಾಕಾಶ ಯಾತ್ರೆಯ ಬಳಿಕ ಸುನೀತಾ ವಿಲಿಯಮ್ಸ್ ಮನೆಗೆ ಮರಳಿದ್ದು, ತಮ್ಮ ನಾಯಿಗಳನ್ನು ಕಂಡು ಸಂಭ್ರಮಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ1:31 PM
ಸರ್ಕಾರಿ ಕೆಲಸ, ಖಾಸಗಿ ಜಾಬ್, ಸ್ವಂತ ವ್ಯವಹಾರ: ಯಾವುದು ಬೆಸ್ಟ್ ಇಲ್ಲಿದೆ ಡೀಟೇಲ್ಸ್!
ಉದ್ಯೋಗ ಆಯ್ಕೆಯು ವ್ಯಕ್ತಿಯ ಆಸಕ್ತಿಯನ್ನು ಅವಲಂಬಿಸಿದೆ. ಸರ್ಕಾರಿ ಉದ್ಯೋಗ ಭದ್ರತೆ ನೀಡಿದರೆ, ಖಾಸಗಿ ಉದ್ಯೋಗ ವೇಗದ ಬಡ್ತಿ ನೀಡುತ್ತದೆ. ಸ್ವಂತ ವ್ಯವಹಾರದಲ್ಲಿ ಹಣ ಸಂಪಾದನೆಗೆ ಮಿತಿ ಇಲ್ಲ.
ಪೂರ್ತಿ ಓದಿ1:21 PM
ಜಾರ್ಜ್ ಸೊರೊಸ್‌ನಿಂದ ರೂ ಹಣಕಾಸು ನೆರವು: ಇಡಿ ಸ್ಕ್ಯಾನರ್ ಅಡಿ ಬೆಂಗಳೂರು ಮೂಲದ 3 ಕಂಪನಿಗಳು
ಜಾರ್ಜ್ ಸೊರೊಸ್ ನಿಧಿಯಿಂದ ಹಣ ಪಡೆದ ಬೆಂಗಳೂರಿನ ಮೂರು ಸಂಸ್ಥೆಗಳು ಜಾರಿ ನಿರ್ದೇಶನಾಲಯದ ತನಿಖೆಗೆ ಒಳಗಾಗಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮತ್ತು ಯುಎಸ್‌ಎಐಡಿಯಿಂದ ಅಕ್ರಮವಾಗಿ ಹಣ ಪಡೆದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.
ಪೂರ್ತಿ ಓದಿ1:05 PM
'ಕಳ್ಳ' ಇನ್ಸ್ಪೆಕ್ಟರ್ ಗೆ ಚಿನ್ನದ ಪದಕ ಕೊಟ್ಟ ಸಿಎಂ? ಲೋಕಾ ದಾಳಿ ಬೆನ್ನಲ್ಲೇ ಮನೆಬಿಟ್ಟು ಪರಾರಿ!
ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವಿಷಯ ತಿಳಿದು ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಂದೆಡೆ, ಇಬ್ಬರು ಪೊಲೀಸ್ ಪೇದೆಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೂರ್ತಿ ಓದಿ12:34 PM
Bengaluru: ನಾಗರಭಾವಿಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೊಸ ಶೋರೂಂ ಆರಂಭ
ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಂಗಳೂರಿನ ನಾಗರಭಾವಿಯಲ್ಲಿ ಹೊಸ ಶೋರೂಂ ತೆರೆದಿದೆ. ಇದು ಬೆಂಗಳೂರಿನಲ್ಲಿ 21ನೇ ಮತ್ತು ಕರ್ನಾಟಕದಲ್ಲಿ 41ನೇ ಶೋರೂಂ ಆಗಿದೆ. ನಟಿ ರಚಿತಾ ರಾಮ್ ಅವರು ಶೋರೂಂ ಅನ್ನು ಉದ್ಘಾಟಿಸಿದರು.
ಪೂರ್ತಿ ಓದಿ12:14 PM
ಸ್ಪೀಕರ್ ಖಾದರ್ ಕೋಮು ದ್ವೇಷ ಸಾಧಿಸಿದ್ದಾರೆ: ಹರೀಶ್ ಪೂಂಜಾ ಆರೋಪ, ದೇಶ್‌ಪಾಂಡೆ ಖಂಡನೆ
ಬಿಜೆಪಿ ಶಾಸಕರ ಅಮಾನತು ಕೋಮು ದ್ವೇಷದಿಂದ ಎಂದು ಹರೀಶ್ ಪೂಂಜಾ ಆರೋಪಿಸಿದ್ದಾರೆ. ಸ್ಪೀಕರ್ ಖಾದರ್ ಮುಸ್ಲಿಂ ಭಾವನೆ ತೋರ್ಪಡಿಸಿದ್ದಾರೆ ಎಂದಿದ್ದಾರೆ. ಆರ್.ವಿ ದೇಶಪಾಂಡೆ ಪೂಂಜಾ ಹೇಳಿಕೆ ಖಂಡಿಸಿದ್ದಾರೆ.
ಪೂರ್ತಿ ಓದಿ12:11 PM
ತವರಿನಲ್ಲಿ ನಡೆಯೋ ಗುಜರಾತ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್?
ಐಪಿಎಲ್‌ನಲ್ಲಿ ಇಂದು ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ತವರಿನಲ್ಲಿ ಆರ್‌ಸಿಬಿ ಶುಭಾರಂಭ ಮಾಡಲು ಸಜ್ಜಾಗಿದ್ದು, ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪೂರ್ತಿ ಓದಿ12:10 PM
'ಸಿದ್ದರಾಮಯ್ಯ 16ನೇ ಲೂಹಿ ಇದ್ದಂತೆ' ಕಾಂಗ್ರೆಸ್-ಬಿಜೆಪಿ ನಾಯಕರ ನೆತ್ತಿಗೆ ಕುಕ್ಕಿದ ಹಳ್ಳಿಹಕ್ಕಿ!
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಸಿದ್ದರಾಮಯ್ಯ ಸರ್ಕಾರದ ಆರ್ಥಿಕ ನೀತಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ, ಸರ್ಕಾರ ಯಾವುದೇ ಶಾಶ್ವತ ಯೋಜನೆಗಳನ್ನು ನೀಡಿಲ್ಲ ಎಂದು ದೂರಿದ್ದಾರೆ.
ಪೂರ್ತಿ ಓದಿ12:10 PM
ಪ್ರಸ್ತುತ ಜಗತ್ತಿನಲ್ಲಿ ಈ ತಾಕತ್ತಿರುವುದು ಭಾರತದ ಪ್ರಧಾನಿಗೆ ಮಾತ್ರ: ಮೋದಿ ಹೊಗಳಿದ ಚಿಲಿ ಅಧ್ಯಕ್ಷ
ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ಪ್ರಧಾನಿ ಮೋದಿಯವರನ್ನು ಜಾಗತಿಕ ರಾಜಕೀಯ ನಾಯಕ ಎಂದು ಹಾಡಿ ಹೊಗಳಿದ್ದಾರೆ.
ಪೂರ್ತಿ ಓದಿ12:07 PM
Viral Video: ಚಲಿಸುತ್ತಿದ್ದ ಟ್ರೇನ್‌ಗೆ ಶ್ವಾನವನ್ನು ಹತ್ತಿಸುವ ಪ್ರಯತ್ನ, ರೈಲು ಚಕ್ರದಡಿ ಸಿಕ್ಕಿಬಿದ್ದ ನಾಯಿ!
ರೈಲಿಗೆ ನಾಯಿಯನ್ನು ಏರಿಸುವ ಭರದಲ್ಲಿ ಮಾಲೀಕನೊಬ್ಬ ಅಪಾಯಕ್ಕೆ ಸಿಲುಕುವ ವಿಡಿಯೋ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲಿನಿಂದ ನಾಯಿ ಕೆಳಗೆ ಬಿದ್ದಾಗ ಆತಂಕದ ವಾತಾವರಣ ಸೃಷ್ಟಿಯಾಯಿತು. ನಾಯಿಯನ್ನು ರಕ್ಷಿಸಲಾಯಿತೇ ಎಂಬ ಪ್ರಶ್ನೆಗೆ ವಿಡಿಯೋದಲ್ಲಿ ಉತ್ತರವಿಲ್ಲ.
ಪೂರ್ತಿ ಓದಿ11:42 AM
'ವಿಜಯೇಂದ್ರ ಆಡಿಯೋ-ವಿಡಿಯೋ ನನ್ನ ಬಳಿ ಇವೆ' ಯತ್ನಾಳ್ ಹೊಸ ಬಾಂಬ್!
ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಬಳಿ ಸಾವಿರಾರು ಕೋಟಿ ರೂಪಾಯಿ ಹಗರಣದ ದಾಖಲೆಗಳು ಮತ್ತು ಆಡಿಯೋಗಳಿವೆ ಎಂದು ಅವರು ಹೇಳಿದ್ದಾರೆ, ಮತ್ತು ಸಂದರ್ಭ ಬಂದಾಗ ಅವುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಪೂರ್ತಿ ಓದಿ11:40 AM
CHITRADURGA: ಹೆದ್ದಾರಿಯಲ್ಲೇ 15 ಪಲ್ಟಿ ಹೊಡೆದ ಕಾರ್, ಇಬ್ಬರು ಮಕ್ಕಳು ಸೇರಿ ಮೂವರ ಸಾವು!
ಚಿತ್ರದುರ್ಗದ ಮೊಳಕಾಲ್ಮೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಾರು ಡಿಕ್ಕಿ ಹೊಡೆದು ಹಲವು ಬಾರಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ11:20 AM
ಬ್ಯಾಟ್‌ಮ್ಯಾನ್ ಖ್ಯಾತಿಯ ನಟ ವಾಲ್ ಕಿಲ್ಮರ್ ಇನ್ನಿಲ್ಲ
ಹಾಲಿವುಡ್‌ನ ಖ್ಯಾತ ನಟ ಬ್ಯಾಟ್‌ಮ್ಯಾನ್ ಹಾಗೂ ಜಿಮ್ ಮೊರಿಸನ್ ಪಾತ್ರಗಳಿಂದ ಖ್ಯಾತಿ ಗಳಿಸಿದ್ದ ವಾಲ್ ಕಿಲ್ಮರ್ ಲಾಸ್ ಏಂಜಲೀಸ್‌ನಲ್ಲಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಪೂರ್ತಿ ಓದಿ11:14 AM
ನೆಗೆಟಿವ್ ಯೋಚನೆ ನಿಮ್ಮ ನೆಮ್ಮದಿ ಹಾಳುಮಾಡ್ತಿದ್ಯಾ?; ಈ ಮಂತ್ರ ಹೇಳಿದ್ರೆ ನಿಮ್ಮ ಬದುಕೇ ಬದಲಾಗತ್ತೆ!
ಪಾಸಿಟಿವ್ ಆಗಿರಬೇಕು, ಪಾಸಿಟಿವ್ ಯೋಚನೆ ಮಾಡಬೇಕು ಅಂತ ಹೇಳ್ತಾರೆ. ಆದರೆ ಎಲ್ಲ ಟೈಮ್‌ನಲ್ಲೂ ಪಾಸಿಟಿವ್ ಆಗಿರೋಕೆ ಆಗೋದಿಲ್ಲ. ಅದಕ್ಕೆ ಏನು ಮಾಡಬೇಕು?
ಪೂರ್ತಿ ಓದಿ11:05 AM
ರೆಡ್ಡಿಗಾರು ಇಲ್ನೋಡಿ.. ರಜೆ ನೀಡದ್ದಕ್ಕೆ ಬಸ್‌ನಲ್ಲೇ ಪ್ರಾಣಬಿಟ್ಟ ಡ್ರೈವರ್, ಪ್ರಜ್ಞೆ ತಪ್ಪಿ ಬಿದ್ದ ಪತ್ನಿ!
ಬೆಳಗಾವಿಯಲ್ಲಿ KSRTC ಡ್ರೈವರ್ ಬೆನ್ನು ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಜೆ ನಿರಾಕರಿಸಿದ್ದಕ್ಕೆ ಮತ್ತು ಅಕ್ಕನ ಮಗನ ಮದುವೆಗೆ ರಜೆ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ತಿ ಓದಿ10:30 AM
ವಂದೇ ಭಾರತ ರೈಲು: ಹಾವೇರಿಯಲ್ಲಿ ನಿಲುಗಡೆಗೆ ಆದೇಶ; ಬಸವರಾಜ ಬೊಮ್ಮಾಯಿಯಿಂದ ಕೇಂದ್ರ, ರಾಜ್ಯ ರೈಲ್ವೆ ಸಚಿವರಿಗೆ ಧನ್ಯವಾದ!
ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶಿಸಲಾಗಿದೆ. ಇದು ಹಾವೇರಿ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದರಿಂದ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.
ಪೂರ್ತಿ ಓದಿ10:25 AM
ದಂಪತಿಗಳು ಮಲಗಿದ್ರೆ ಸಾಕು ತನ್ನಿಂದ ತಾನೇ ಬೌನ್ಸ್ ಆಗಲಿದೆ ಬೆಡ್, 'ಇಷ್ಟೆಲ್ಲಾ ಸೋಂಬೇರಿ ಇರಬಾರದು' ಎಂದ ನೆಟ್ಟಿಗರು!
ಚೀನಾದ ಕಂಪನಿಯೊಂದು ಹೊಸ ಬೌನ್ಸಿಂಗ್ ಬೆಡ್ ಅನ್ನು ಬಿಡುಗಡೆ ಮಾಡಿದೆ, ಇದು ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಹಾಸಿಗೆಯನ್ನು ಪರೀಕ್ಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅಲ್ಲಿ ಮಹಿಳೆಯೊಬ್ಬರು ನಗುತ್ತಾ ಅದನ್ನು ಬಳಸುತ್ತಿದ್ದಾರೆ.
ಪೂರ್ತಿ ಓದಿ10:16 AM
ತವರಲ್ಲಿ ಶುಭಾರಂಭ ನಿರೀಕ್ಷೆಯಲ್ಲಿ ಆರ್‌ಸಿಬಿ; ಬೆಂಗಳೂರಿಗೆ ಹ್ಯಾಟ್ರಿಕ್ ಜಯದ ಗುರಿ
ಆರ್‌ಸಿಬಿ ತವರಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮೊದಲ ಪಂದ್ಯವಾಡಲು ಸಜ್ಜಾಗಿದೆ. ಹ್ಯಾಟ್ರಿಕ್ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮುಂದುವರಿಯುವ ಗುರಿಯಿದೆ. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇದೆ.
ಪೂರ್ತಿ ಓದಿ9:45 AM
Shivamogga: ರಂಜಾನ್ ಪ್ರಾರ್ಥನೆ ಬೆನ್ನಲ್ಲೇ ಡಿಸಿ ಕಚೇರಿ ಎದುರಿನ ಖಾಲಿ ಜಾಗಕ್ಕೆ ಬೇಲಿ ಹಾಕಿದ ಮುಸ್ಲಿಂ ಸಮುದಾಯ!
ಶಿವಮೊಗ್ಗದಲ್ಲಿ ವಕ್ಫ್ ಆಸ್ತಿ ವಿವಾದ ಭುಗಿಲೆದ್ದಿದ್ದು, ಡಿಸಿ ಕಚೇರಿ ಎದುರಿನ ಮೈದಾನಕ್ಕೆ ಬೇಲಿ ಹಾಕಲಾಗಿದೆ. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪೂರ್ತಿ ಓದಿ9:36 AM
ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿಬಿಟ್ಟ ರವಿಚಂದ್ರನ್; ಕೂದಲು ಮುಖ ಮುಚ್ಚುತ್ತಿತ್ತು ಅಂತ ಶಕುನಿ ಬಿಟ್ರಾ?
ಯಾಕೆ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ರು ರವಿಚಂದ್ರನ್. ಕೋಟಿರಾಮು ನಿರ್ಮಾಣದ ಶಕುನಿ ಸಿನಿಮಾದಲ್ಲಿ ನಿಜಕ್ಕೂ ಏನ್ ಆಯ್ತು?
ಪೂರ್ತಿ ಓದಿ9:27 AM
ಅರಣ್ಯ ಭೂಮಿ ಒತ್ತುವರಿಯಲ್ಲಿ ದೇಶದಲ್ಲೇ ಕರ್ನಾಟಕ ನಂ.3!
ದೇಶದ 25 ರಾಜ್ಯಗಳಲ್ಲಿ 13000 ಚದರ ಕಿ.ಮೀ ಅರಣ್ಯ ಭೂಮಿ ಒತ್ತುವರಿಯಾಗಿದೆ. ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೂರ್ತಿ ಓದಿ9:19 AM
ಮಾರ್ಚ್‌ನಲ್ಲಿ 1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ ದಾಖಲೆ, ಕರ್ನಾಟಕಕ್ಕೆ 2ನೇ ಸ್ಥಾನ!
ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.96 ಲಕ್ಷ ಕೋಟಿ ತಲುಪಿದ್ದು, ಜಿಎಸ್‌ಟಿ ಇತಿಹಾಸದಲ್ಲಿ 2ನೇ ಗರಿಷ್ಠ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ.
ಪೂರ್ತಿ ಓದಿ9:15 AM
45 ದಿನದ ಕುಂಭಮೇಳ ಅವಧಿಯಲ್ಲಿ 2.8 ಲಕ್ಷ ಕೋಟಿ ರೂ. ವಹಿವಾಟು
ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ 2.8 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ ಎಂದು ವರದಿಯಾಗಿದೆ. ರಸ್ತೆ, ರೈಲ್ವೆ, ಮನರಂಜನೆ, ಚಿಲ್ಲರೆ ವ್ಯಾಪಾರ, ಆಹಾರ ಕ್ಷೇತ್ರಗಳಲ್ಲಿ ಭರ್ಜರಿ ವಹಿವಾಟು ನಡೆದಿದೆ.
ಪೂರ್ತಿ ಓದಿ9:02 AM
ಮುಂದಿನ ವಾರವೇ ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ? ಬಿವೈ ವಿಜಯೇಂದ್ರ ಮುಂದುವರಿಯುತ್ತಾರಾ?
ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದು, ಮುಂದಿನ ವಾರ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರ ಕುರಿತು ಘೋಷಣೆ ಹೊರಡಿಸಲಿದೆ. ಏಪ್ರಿಲ್ ಅಂತ್ಯದ ವೇಳೆಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಪೂರ್ತಿ ಓದಿ8:50 AM
ರೇಷನ್ ಅಂಗಡಿಗಳಲ್ಲಿ ಅಕ್ಕಿ ‘ನೋ ಸ್ಟಾಕ್’: ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಕಿಡಿ
ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಸರ್ಕಾರವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಅಕ್ಕಿ ವಿತರಣೆಯಲ್ಲಿನ ಕೊರತೆ, ಹಾಲಿನ ದರ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ8:37 AM
ಏರ್‌ಪೋರ್ಟ್ ವೆಬ್‌ಸೈಟ್ ಇನ್ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯ!
ಬೆಂಗಳೂರು ವಿಮಾನ ನಿಲ್ದಾಣವು ತನ್ನ ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ವಿಮಾನ ಹಾರಾಟದ ಮಾಹಿತಿ, ಆಗಮನ, ನಿರ್ಗಮನ, ಮತ್ತು ಇತರ ಸೇವೆಗಳ ಬಗ್ಗೆ ಕನ್ನಡದಲ್ಲಿಯೇ ಮಾಹಿತಿ ಪಡೆಯಬಹುದು.
ಪೂರ್ತಿ ಓದಿ8:34 AM
ಮೈದಾನದಲ್ಲೇ ಮತ್ತೆ ಕಿರಿಕ್ ಮಾಡಿದ ಗೋಯೆಂಕಾ; ರಾಹುಲ್ ಬಳಿಕ ಪಂತ್ ಮೇಲೂ ಸಿಡಿಮಿಡಿ!
ಲಖನೌ ಸೂಪರ್ ಜೈಂಟ್ಸ್ ತಂಡದ ದುಬಾರಿ ಆಟಗಾರ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ ಪಂತ್‌ಗೆ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೂರ್ತಿ ಓದಿ8:22 AM
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಏರ್ಪೋರ್ಟ್ ಸಿಸಿಟೀವಿ ದೃಶ್ಯಾವಳಿ ಸಂಗ್ರಹಿಸಿಡಲು ಹೈಕೋರ್ಟ್ ಸೂಚನೆ
ದುಬೈನಿಂದ ಚಿನ್ನ ಅಕ್ರಮ ಸಾಗಣೆ ಮಾಡಿದ ಪ್ರಕರಣದಲ್ಲಿ ರನ್ಯಾರಾವ್ ಅವರನ್ನು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಭದ್ರಪಡಿಸಲು ಹೈಕೋರ್ಟ್ ಡಿಆರ್‌ಐ ಮತ್ತು ಕೆಐಎಎಲ್ಗೆ ಸೂಚನೆ ನೀಡಿದೆ. ರನ್ಯಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪೂರ್ತಿ ಓದಿ8:20 AM
ಕೇಂದ್ರ ಸರ್ಕಾರ ಶುಭ ಸುದ್ದಿ: ಸಿಲಿಂಡರ್ ದರ ₹41 ಕಡಿತ - ಬೆಂಗ್ಳೂರಲ್ಲಿ1836 ರು.ಗೆ ಇಳಿಕೆ
ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 41 ರು. ಇಳಿಕೆ ಮಾಡಿದೆ. ಇದರಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಅನುಕೂಲವಾಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಪೂರ್ತಿ ಓದಿ7:59 AM
ಬೇಟೆಯಾಡಿದ ಮೊಲಗಳ ಮೆರವಣಿಗೆ ಮಾಡಿ ವಿಕೃತಿ, ಮಸ್ಕಿ ಶಾಸಕ ಪುತ್ರನ ಮೇಲೆ ಕೇಸ್!
ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶಗೌಡ ತುರ್ವಿಹಾಳ ಹಾಗೂ ತಮ್ಮ ಆರ್. ಸಿದ್ದನಗೌಡ ತುರ್ವಿಹಾಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುಗಾದಿ ಹಬ್ಬದ ಮೆರವಣಿಗೆಯಲ್ಲಿ ಮೊಲಗಳ ಬೇಟೆ ಮತ್ತು ಮಾರಕಾಸ್ತ್ರ ಪ್ರದರ್ಶನ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪೂರ್ತಿ ಓದಿ7:43 AM
ಹಾಲು, ವಿದ್ಯುತ್ ಬಳಿಕ ಇದೀಗ ಮತ್ತೊಂದು ದರ ಏರಿಕೆ ಬರೆ! ಡೀಸೆಲ್ ದರ ₹2 ಹೆಚ್ಚಳ!
ರಾಜ್ಯದಲ್ಲಿ ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರುಪಾಯಿ ಹೆಚ್ಚಿಸಲಾಗಿದೆ, ಪರಿಷ್ಕೃತ ದರ 91.02 ರುಪಾಯಿ ತಲುಪಿದೆ. ಮಾರಾಟ ತೆರಿಗೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ 2000 ಕೋಟಿ ರುಪಾಯಿ ಆದಾಯ ನಿರೀಕ್ಷಿಸಲಾಗಿದೆ.
7:43 AM
ಇಂದಿನಿಂದ ಬಿಜೆಪಿ 'ಬೆಲೆ ಏರಿಕೆ' ವಿರುದ್ಧ ಅಹೋರಾತ್ರಿ ಹೋರಾಟ, ಯಡಿಯೂರಪ್ಪ ಹೇಳಿದ್ದೇನು?
ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲಿದೆ. ಏಪ್ರಿಲ್ 13ರವರೆಗೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.
7:43 AM
ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ: ರಮೇಶ್ ಜಾರಕಿಹೊಳಿ ಸ್ಪಷ್ಟನೆ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ. ಯತ್ನಾಳ್ ಬಿಜೆಪಿಗೆ ಮರಳಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
7:43 AM
ವಿಚಾರಣೆ ವಿಳಂಬ: ಅಪರಾಧಿಗೆ ಶಿಕ್ಷೆ ಕಡಿತಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ! ಏನಿದು ಪ್ರಕರಣ?
ಎರಡು ಕೊಲೆ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಶಿಕ್ಷೆ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ. ವಿಚಾರಣಾ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಈ ತೀರ್ಮಾನಕ್ಕೆ ಬಂದಿದೆ.
7:42 AM
ವಕ್ಫ್ ತಿದ್ದುಪಡಿ ವಿರೋಧಿಸಿ SDPI ಪ್ರತಿಭಟನೆ; 'ನಾವು ಕೇಂದ್ರದ ವಿರುದ್ಧ ನಿರಂತರ ಹೋರಾಡುತ್ತೇವೆ' ಮುಖಂಡ ಕಿಡಿ!
ಕುಷ್ಟಗಿಯಲ್ಲಿ ಎಸ್‌ಡಿಪಿಐ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ವಕ್ಫ್ ಆಸ್ತಿ ವಿಚಾರವಾಗಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮೌನ ಪ್ರತಿರೋಧ ವ್ಯಕ್ತಪಡಿಸಿತು.
7:42 AM
18 ಶಾಸಕರ ಸಸ್ಪೆಂಡ್ ವಾಪಸ್ ಕೋರಿ ಸ್ಪೀಕರ್‌ಗೆ ಅಶೋಕ್ ಪತ್ರ! ಬಿಜೆಪಿಯಲ್ಲಿ ಅಸಮಾಧಾನ!
ವಿಧಾನಸಭೆಯಿಂದ ಶಾಸಕರ ಅಮಾನತು ಖಂಡಿಸಿ ಪ್ರತಿಭಟನೆಗೆ ನಿರ್ಧರಿಸಿದ ಬಳಿಕ ಅಶೋಕ್ ಸ್ಪೀಕರ್‌ಗೆ ಪತ್ರ ಬರೆದಿದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿಭಟನೆ ಹಿಂದಿನ ದಿನ ಪತ್ರ ಬರೆದು ಹೋರಾಟದ ತೀವ್ರತೆ ಕಡೆಗಣಿಸಿದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಪೂರ್ತಿ ಓದಿ7:42 AM
'2028ಕ್ಕೆ ನಾನೇ ಸಿಎಂ, ನೋಡ್ತಾ ಇರ್ರಿ’ ಎಂದ ಯತ್ನಾಳ್!
ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ 2028ಕ್ಕೆ ತಾನೇ ಸಿಎಂ ಆಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ವಾಪಸ್ ಬರುವ ಬಗ್ಗೆಯೂ ಮಾತನಾಡಿದ್ದು, ಸಂತೋಷ ತಟಗಾರ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
7:42 AM
ವಕ್ಫ್ ತಿದ್ದುಪಡಿ ಮಸೂದೆಯಿಂದ ಅನ್ಯಾಯವಿಲ್ಲ: ಕೇರಳ ಚರ್ಚ್ ಪತ್ರಿಕೆ ಸಂಸದರಿಗೆ ಆಗ್ರಹ
ಕೇರಳದ ಚರ್ಚ್ ಪತ್ರಿಕೆಯೊಂದು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವಂತೆ ಸಂಸದರಿಗೆ ಎಚ್ಚರಿಕೆ ನೀಡಿದೆ. ತಿದ್ದುಪಡಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ, ಬೆಂಬಲಿಸದಿದ್ದರೆ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಹೇಳಿದೆ.
7:42 AM
ಕರಾಚಿಯಲ್ಲಿ ಉಗ್ರ ಹಫೀಜ್‌ನ ಮತ್ತೊಬ್ಬ ಬಲಗೈ ಬಂಟ ಉಗ್ರನ ಹತ್ಯೆ!
ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಹಣಕಾಸು ವಹಿವಾಟು ನೋಡಿಕೊಳ್ಳುತ್ತಿದ್ದ ಹಫೀಜ್ ಸಯೀದ್‌ನ ಬಲಗೈ ಬಂಟ ಅಬ್ದುಲ್ ರೆಹಮಾನ್ ಕರಾಚಿಯಲ್ಲಿ ಹತ್ಯೆಯಾಗಿದ್ದಾನೆ. ಈತ ಎಲ್‌ಇಟಿಗೆ ನಿಧಿ ಸಂಗ್ರಹಿಸುತ್ತಿದ್ದ. ಈ ಹಿಂದೆ ಹಫೀಜ್‌ನ ಆಪ್ತ ಅಬು ಕತಲ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
7:41 AM
ಇಂದಿನಿಂದ ಒಂದು ವಾರ ಕಾಲ ರಾಜ್ಯದಲ್ಲಿ ಗಾಳಿ ಸಹಿತ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ!
ರಾಜ್ಯಾದ್ಯಂತ ಒಂದು ವಾರ ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
7:41 AM
ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ನೀಡುವುದು ತಾರತಮ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕಿಡಿ!
ಸರ್ಕಾರಿ ಗುತ್ತಿಗೆಯಲ್ಲಿ ಒಂದು ಸಮುದಾಯಕ್ಕೆ ಮೀಸಲಾತಿ ನೀಡಿ ಇತರರನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ನೀಡಿ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
7:41 AM
ಯತ್ನಾಳ್ ಉಚ್ಚಾಟನೆ ಬಳಿಕ ಪಕ್ಷಕ್ಕೆ ಬಲ ಬಂದಿದೆ: ಬಿಜೆಪಿ ಮುಖಂಡನ ಶಾಕಿಂಗ್ ಹೇಳಿಕೆ!
ಶಾಸಕ ಯತ್ನಾಳರ ಉಚ್ಚಾಟನೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದ್ದಾರೆ. ಯತ್ನಾಳರ ಕೆಟ್ಟ ನಿರ್ಧಾರದಿಂದ ಉಚ್ಚಾಟನೆಗೊಂಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ನೀಡಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಟೀಕಿಸಿದ್ದಾರೆ.
7:41 AM
ಯೋಗಿ ಸರ್ಕಾರದ ಬುಲ್ಡೋಜರ್ ನೀತಿಗೆ ಸುಪ್ರೀಂ ತೀವ್ರ ಆಕ್ರೋಶ! ಹೇಳಿದ್ದೇನು?
ಉತ್ತರ ಪ್ರದೇಶದ ಬುಲ್ಡೋಜರ್ ನೀತಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಯಾಗರಾಜ್‌ನಲ್ಲಿ ಐವರ ಮನೆಗಳನ್ನು ಅಕ್ರಮವಾಗಿ ಧ್ವಂಸಗೊಳಿಸಿದ್ದಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.
7:41 AM
ಉದ್ಯಮಿಗೆ ₹50 ಸಾವಿರಕ್ಕೆ ಮುತ್ತುಕೊಟ್ಟು ₹20 ಲಕ್ಷಕ್ಕೆ ಬ್ಲ್ಯಾಕ್‌ಮೇಲ್: ಶಿಕ್ಷಕಿ ಬಂಧನ! ಏನಿದು ಪ್ರಕರಣ?
ಬೆಂಗಳೂರಿನಲ್ಲಿ ಪ್ಲೇ ಹೋಂ ಮುಖ್ಯಸ್ಥೆಯೊಬ್ಬರು ಉದ್ಯಮಿಯನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ₹2.5 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಖಾಸಗಿ ಪ್ಲೇ ಹೋಂ ಮುಖ್ಯಸ್ಥೆ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
7:40 AM
4 ಅಜೆಂಡಾ ಜತೆ ಇಂದಿನಿಂದ ಸಿದ್ದು ದಿಲ್ಲಿ ಯಾತ್ರೆ: ಹೈಕಮಾಂಡ್ ಭೇಟಿಯ ರಹಸ್ಯವೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ವಿಧಾನ ಪರಿಷತ್ ಸ್ಥಾನಗಳು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ವಿಸ್ತರಣೆ ಮತ್ತು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.