ಬೆಂಗಳೂರು: ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಸಂಬಂಧ ಕರ್ನಾಟ ಮತ್ತು ಮಹಾರಾಷ್ಟ್ರ ಗಡಿಯಲ್ಲಿಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಪುಂಡರು ಮಾಡಿದ ಹಲ್ಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಭಿನ್ನರು ಮತ್ತೊಮ್ಮೆ ಸ್ಪಷ್ಟಪಡಿಸುವ ಮೂಲಕ ಬಿವೈ ವಿಜಯೇಂದ್ರರಿಗೆ ಸಂದೇಶ ರವಾನಿಸಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬಣದ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಾಕ್ ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆಯ ಚರ್ಚೆ ನಡೆಯುತ್ತಿರುವಾಗಲೇ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇಂದು ಇಡೀ ದಿನದ ನಡೆದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

07:40 PM (IST) Feb 23
ಖ್ಯಾತ ರಂಗಭೂಮಿ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜ್ಯೋಗತಿಯವರ ಮನೆಗೆ ಮೆಘಾಲಯದ ರಾಜ್ಯಪಾಲ ವಿಜಯ್ ಶಂಕರ್ ಭೇಟಿ ನೀಡಿದ್ದಾರೆ. ಜೋಗತಿ ನೃತ್ಯದ ಮೂಲಕ ರಾಜ್ಯಪಾಲರನ್ನು ಸ್ವಾಗತಿಸಲಾಗಿದೆ. ಇದೇ ವೇಳೆ ಮೇಘಾಲಯದ ರಾಜ್ಯಪಾಲರು ವಿಜಯ್ ಶಂಕರ್ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂಜಮ್ಮ ಜೋಗತಿ ಮನವಿ ಸಲ್ಲಿಸಿದ್ದಾರೆ.
07:04 PM (IST) Feb 23
ತುಮಕೂರು ಜಿಲ್ಲೆಯಲ್ಲಿ ಮಧುಗಿರಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
06:06 PM (IST) Feb 23
ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಜಾತಿ ಗಣತಿ ವಿರುದ್ದ ಸಿಡಿದೆದ್ದಿದ್ದಾರೆ. ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ, ನಮ್ಮ ಮನೆಗೆ ಬಂದು ಜಾತಿ ಗಣತಿ ಮಾಡಿಲ್ಲ. ಎಲ್ಲೋ ಕೂತು ಜಾತಿಗಣತಿ ಮಾಡಿದರೆ ಹೇಗೆ ಒಪ್ಪೋದು ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.
05:27 PM (IST) Feb 23
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಕುರಿತು ರಂಭಾಪುರಿ ಸ್ವಾಮೀಜಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಾಜಿ ಅಸಮಾಧಾನ ವ್ಯಕ್ತಪಪಡಿಸಿದ್ದಾರೆ. ಕಾಂಗ್ರೆಸ್ ಒಳಗೆ ಈ ಗ್ಯಾರೆಂಟಿಗೆ ಒಮ್ಮತವಿಲ್ಲ ಎಂದಿದ್ದಾರೆ.
04:32 PM (IST) Feb 23
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಈ ಹೋರಾಟವನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವೀಕ್ಷಿಸುತ್ತಿದ್ದಾರೆ.ಟಿವಿ ಮೂಲಕ ಪಂದ್ಯ ವೀಕ್ಷಿಸಿದ್ದಾರೆ.
04:08 PM (IST) Feb 23
ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಕೇಂದ್ರ ಜಲಶಕ್ತಿ ಮಂತ್ರಿ ಸಿ ಆರ್ ಪಾಟೀಲ್ ಮತ್ತು ಅಧಿಕಾರಿಗಳ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಳೆದ ವಾರವಷ್ಟೇ ಜಲಶಕ್ತಿ ಸಚಿವ ರನ್ನು ಮಾಜಿ ಪ್ರಧಾನಿ ದೇವೇಗೌಡರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.
04:06 PM (IST) Feb 23
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿದೆ. ಆರಂಭದಲ್ಲಿ 2 ವಿಕೆಟ್ ಕಬಳಿಸಲು ಯಶಸ್ವಿಯಾದ ಭಾರತ ಮೇಲುಗೈ ಸಾಧಿಸಿತ್ತು.ಆದರೆ ರಿಜ್ವಾನ್ ಹಾಗೂ ಶಕೀಲ್ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿದೆ. ಸದ್ಯ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 75 ರನ್ ಸಿಡಿಸಿದೆ.
03:04 PM (IST) Feb 23
Minister HK Patil: ಸಿಎಂ ಬದಲಾವಣೆ ಕಪೋಲಕಲ್ಪಿತವಾದ ವಿಷಯ. ಇದ್ಯಾವುದಕ್ಕೂ ನಾನು ಪ್ರತಿಕ್ರಿಯಿಸಲ್ಲ ಎಂದು ಹೆಚ್‌ಕೆ ಪಾಟೀಲ್ ಹೇಳಿದ್ದಾರೆ. ಗೃಹ ಸಚಿವ ಪರಮೇಶ್ವರರಿಂದ ರಾಜೀನಾಮೆ ಇಂಗಿತ ವಿಚಾರಕ್ಕೆ, ನನಗೆ ಗೊತ್ತಿಲ್ಲ, ಅದರ ಬಗ್ಗೆ ಉತ್ತರ ಕೊಡಲ್ಲ. ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಬಳಿಕ ಜನ ಭಯದಿಂದ ಹೊರಬಂದಿದ್ದಾರೆ. ಕೆಟ್ಟ ರೀತಿಯಲ್ಲಿ ಸಾಲ ವಸೂಲಿ ಮಾಡೋ ಪ್ರಯತ್ನ ಮಾಡೋರಿಗೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಸಚಿವರು ಹೇಳಿದರು.
02:33 PM (IST) Feb 23
Raichur News: ಪತ್ನಿ ಪೋಷಕರು ಜಮೀನು ನೀಡದ್ದಕ್ಕೆ ವ್ಯಕ್ತಿಯೋರ್ವ ಮನಬಂದಂತೆ ಚಾಕುವಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ರಾಯಚೂರು ತಾಲೂಕಿನ ಶಕ್ತಿನಗರದ ಕೆಪಿಸಿ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆಯನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ವರ್ಷದ ರೇಖಾ ಗಂಡ ಸೂಗಪ್ಪನಿಂದ ಹಲ್ಲೆಗೊಳಗಾದ ಮಹಿಳೆ. ಘಟನೆ ಬಳಿಕ ಪತಿ ಪರಾರಿಯಾಗಿದ್ದು, ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
02:26 PM (IST) Feb 23
Bengaluru Techie Death: ಟೆಕ್ಕಿಯೊಬ್ಬರು ಬೆಳಗ್ಗೆ ಎಂದಿನಂತೆ ಕಾರಿನಲ್ಲಿ ಆಫೀಸಿಗೆ ಹೋಗುವಾಗ ದಿಢೀರನೇ ಹೃದಯಾಘಾತ ಆಗಿದ್ದು, ಕೂಡಲೇ ಟ್ರಾಫಿಕ್‌ಜಾಮ್‌ನಲ್ಲಿಯೂ ಕಾರನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಆದರೆ, ಕಾರನ್ನು ಇಳಿದು ಬೇರೆಯವರ ಸಹಾಯ ಕೋರುವ ಮೊದಲೇ ಹೃದಯಸ್ತಂಬನಕ್ಕೆ ಟೆಕ್ಕಿ ಸಾವಿಗೀಡಾಗಿದ್ದಾನೆ. ಟ್ರಾಫಿಕ ಇರುವ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಲು ಬಂದ ಪೊಲೀಸರಿಗೆ ಕಾರಿನಲ್ಲಿದ್ದವರು ಸತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
02:07 PM (IST) Feb 23
ICC Champions Trophy, 2025 INDvsPAK ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ
01:37 PM (IST) Feb 23
01:28 PM (IST) Feb 23
Bengaluru Traffic Jam: Nelamangala Toll: ನೆಲಮಂಗಲ ಟೋಲ್ ಯಿಂದ ಬೆಂಗಳೂರು ನಗರ ಪ್ರವೇಶಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಜ್ಯಪಾಲರು ಕುಣಿಗಲ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿರೋ ಹಿನ್ನೆಲೆ ಪೊಲೀಸರು ವಾಹನಗಳನ್ನು ತಡೆದಿರೋ ಕಾರಣ ಟ್ರಾಫಿಕ್ ಉಂಟಾಗಿದೆ. ಉರಿ ಬಿಸಿಲಿನಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ.
01:05 PM (IST) Feb 23
Bengaluru News
12:44 PM (IST) Feb 23
12:29 PM (IST) Feb 23
Chitradurga Renukaswamy Son Naming Ceremony: ಚಿತ್ರದುರ್ಗದ ರೇಣುಕಾಸ್ವಾಮಿ ಮಗನಿಗೆ "ಶಶಿಧರ್ ಸ್ವಾಮಿ" ಎಂದು ನಾಮಕಾರಣ ಮಾಡಲಾಗಿದೆ. ರೇಣುಕಾಸ್ವಾಮಿ ಸಹೋದರಿ ಸುಚೇತಾ ಅವರು, ಮಗುವಿಗೆ ಜೇನುತುಪ್ಪ ತಿನ್ನಿಸಿ, ಕಿವಿಯಲ್ಲಿ ಹೆಸರು ಹೇಳಿ ನಾಮಕರಣ ಶಾಸ್ತ್ರ ನೆರವೇರಿಸಿದರು. ನಂತರ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ, ಸೊಂಟಕ್ಕೆ ಬೆಳ್ಳಿ ಉಡುದಾರ ಹಾಕಿ ತೊಟ್ಟಲಿಗೆ ಹಾಕಲಾಯ್ತು. ತೊಟ್ಟಿಲು ಶಾಸ್ತ್ರದಲ್ಲಿ ಕುಟುಂಬಸ್ಥರು, ಸಂಬಂಧಿಕರು ಭಾಗಿಯಾಗಿದ್ದರು.
ಇದನ್ನೂ ಓದಿ: ದರ್ಶನ್ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್;ಒಂದಾದ ಅಣ್ಣ-ತಮ್ಮ,ತಾಯಿ-ಮಗ
11:59 AM (IST) Feb 23
Bengaluru News: ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದಲ್ಲಿಂದು ಭಾರತದ ಗೆಲುವಿಗಾಗಿ ವಂದೇ ಮಾತರಂ ಸಂಘಟನೆಯಿಂದ ಪೂಜೆ ಸಲ್ಲಿಕೆ ಮಾಡಲಾಗಿದೆ. 101 ತೆಂಗಿನಕಾಯಿ ಒಡೆಯುವ ಮೂಲಕ ಗೆಲುವಿಗಾಗಿ ದೇವರಲ್ಲಿ ಪಾರ್ಥನೆ ಸಲ್ಲಿಸಲಾಗಿದೆ. ಪ್ರತಿ ಮ್ಯಾಚ್ ವೇಳೆಯಲ್ಲೂ ವಿಶೇಷ ಪೂಜೆ ಸಲ್ಲಿಸುತ್ತೇವೆ. ಭಾರತ ತಂಡಕ್ಕೆ ಯಾವುದೇ ದೃಷ್ಟಿ ಬಿದ್ದಿದ್ರು ಹೋಗಬೇಕು ಅಂತ ಪೂಜೆ ಸಲ್ಲಿಸುತ್ತೇವೆ. ಪಾಕಿಸ್ತಾನ ನಮ್ಮ ಬದ್ದವೈರಿ ತಂಡ. ಪಾಕಿಸ್ತಾನವನ್ನ ಭಾರತ ತಂಡ ಸೋಲಿಸಬೇಕು ಅಂತ ಪೂಜೆ ಸಲ್ಲಿಸುತ್ತಿದ್ದೇವೆ. 101 ತೆಂಗಿನಕಾಯಿ, ನಿಂಬೆಹಣ್ಣು ಒಡೆಯುವ ಮೂಲಕ ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ಕ್ರಿಕೆಟ್ ಪ್ರೇಮಿ ಶಿವಕುಮಾರ್ ನಾಯ್ಕ್ ಹೇಳಿದ್ದಾರೆ.
11:37 AM (IST) Feb 23
11:01 AM (IST) Feb 23
Former Minister B Sriramulu Padayatra And Ballary Politics
10:28 AM (IST) Feb 23
Kalaburgi: ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ವೈದ್ಯರು ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ, ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ಫೆಬ್ರವರಿ 5 ರಂದು ಭಾಗ್ಯಶ್ರೀ ಎಂಬವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಬಟ್ಟೆ ಉಂಡೆ ಹಾಗು ಹತ್ತಿ ಹೊಟ್ಟೆ ಒಳಗೆ ಬಿಟ್ಟು ಹೊಲಿಗೆ ಹಾಕಲಾಗಿದೆ. ಒಂದು ವಾರದ ಬಳಿಕ ಹೊಟ್ಟೆ ಮಹಿಳೆ ಬಂದಾಗ ಸ್ಕ್ಯಾನಿಂಗ್ ವೇಳೆ ವೈದ್ಯರ ಯಡವಟ್ಟು ಬೆಳಕಿಗೆ ಬಂದಿದೆ. ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರದಲ್ಲಿ ಮಹಿಳೆ ಮರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೊಟ್ಟೆಯಲ್ಲಿದ್ದ ಬಟ್ಟೆ ಉಂಡೆ ಹಾಗೂ ಹತ್ತಿ ತೆಗೆಯಲಾಗಿದೆ. ಜಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಮಹಿಳೆಯ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ.
09:37 AM (IST) Feb 23
09:30 AM (IST) Feb 23
Bengaluru News: ಯುವಕನೋರ್ವ ಪ್ರಿಯತಮೆಯ ಕಾರು ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಬಳಿ ನಡೆದಿದೆ. ಪಾಗಲ್ ಪ್ರೇಮಿ ರಾಹುಲ್ ಎಂಬಾತ ಎರಡು ಕಾರ್ ಹಾಗೂ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಪಾಗಲ್ ಪ್ರೇಮಿ ರಾಹುಲ್ ಪ್ರೀತಿಯನ್ನಯುವತಿ ನಿರಾಕರಿಸಿದ್ದಳು. ಇದರಿಂದ ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ. ಘಟನೆ ಸಂಬಂದ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
09:30 AM (IST) Feb 23
Mangaluru Deadly Accident: ಮಂಗಳೂರು ಹೊರವಲಯದ ಕುಳಾಯಿ ಎಂಬಲ್ಲಿ ಮೂವರು ಪಾದಚಾರಿಗಳ ಮೇಲೆ ಕಾರ್ ಹರಿದಿದ್ದು, ಓರ್ವ ಸಾವನ್ನಪ್ಪಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರಿನ ದೀಪುಗೌಡ (50) ಮೃತ ವ್ಯಕ್ತಿ. ಕೊಪ್ಪಳ ಜಿಲ್ಲೆಯ ಕರಟಗಿಯ ಪ್ರದೀಪ್ ಕೊಲ್ಕಾರ್ (35) ಹಾಗೂ ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್(37) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಕುಳಾಯಿಯ ಶಂಕರ ಭವನ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಾಹೆ 66 ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ KA-19-AA-0746 ನಂಬರ್‌ನ ಪಿಕಪ್ ವಾಹನ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಮುಂದಕ್ಕೆ ರಸ್ತೆಯ ಎಡ ಬದಿಗೆ ತಳ್ಳಲ್ಪಟ್ಟು ಅಪಘಾತ ಸಂಭವಿಸಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
09:23 AM (IST) Feb 23
08:53 AM (IST) Feb 23
ಸೂಪರ್ ಸ್ಟಾರ್‌ಗಳಿಂದ ಕೂಡಿರುವ ಭಾರತ ತಂಡ ಸಹಜವಾಗಿಯೇ ಗೆಲ್ಲುವ ಫೇವರಿಟ್ ಎನಿಸಿದರೆ, ತನ್ನ ವೇಗದ ಬೌಲಿಂಗ್ ಪಡೆಯ ಮೇಲೆ ಅತಿಯಾಗಿ ಅವಲಂಬಿತಗೊಂಡಿರುವ ಪಾಕಿಸ್ತಾನ, ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಲು ಹಪಹಪಿಸುತ್ತಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಆದರೂ ಒಬ್ಬ ಎಡಗೈ ಸ್ಪಿನ್ನರ್ ಬದಲು ವಾಷಿಂಗ್ಟನ್‌ಗೆ ಸ್ಥಾನ ಸಿಗಬಹುದು. ಇನ್ನು ಪಾಕಿಸ್ತಾನ ಗಾಯಾಳು ಫಖರ್ ಜಮಾನ್ ಬದಲಿಗೆ ಇಮಾಮ್ ಉಲ್-ಹಕ್‌ರನ್ನು ಆಡಿಸಲಿದೆ.
08:23 AM (IST) Feb 23
Bengaluru Congress Leader Murder: ತಡರಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ನಡೆದಿದೆ. ಹೈದರ್ ಅಲಿ ಕೊಲೆಯಾದ ಕೈ ಮುಖಂಡ. ಅಶೋಕನಗರದ ಗರುಡ ಮಾಲ್ ಬಳಿ ಲೈವ್ ಬ್ಯಾಂಡ್ ನಿಂದ ಹೊರ ಬರ್ತಿದ್ದಂತೆ ಅಡ್ಡಗಟ್ಟಿದ ಬೈಕ್‌ನಲ್ಲಿ ಬಂದ ಹಂತಕರ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕೊಲೆಯಾದ ಹೈದರ್ ಅಲಿ ಜೊತೆಯಲ್ಲಿದ್ದ ಸ್ನೇಹಿತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯದ ಮಡುವಲ್ಲಿ ಬಿದ್ದ ಹೈದರ್ ಅಲಿಯನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ ಆನೆಪಾಳ್ಯ ನಿವಾಸಿ ಹೈದರ್ ಅಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೃತ ಹೈದರ್ ಅಲಿ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಜೊತೆಯಲ್ಲಿ ಗುರುತಿಸಿಕೊಂಡಿದ್ದರು.
08:06 AM (IST) Feb 23
Belagavi News: ಮರಾಠಿ ಬರಲ್ಲ, ಕನ್ನಡದಲ್ಲಿ ಮಾತಾಡಿ’ ಎಂದು ಹೇಳಿದ ಕಾರಣಕ್ಕೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಪುಂಡರು ಮಾಡಿದ ಹಲ್ಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪುಂಡಾಟಿಕೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ ನಿರ್ವಾಹಕನ ವಿರುದ್ಧ ಮರಾಠಿಗರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
07:54 AM (IST) Feb 23
DCM DK Shivakumar Messgae: ನಾನು ಗಟ್ಟಿಯಾಗಿದ್ದು, ನಾನು ಎಲ್ಲೂ ಬಿಟ್ಟು ಹೋಗುವುದಿಲ್ಲ. ಇನ್ನೂ ಏಳೆಂಟು ವರ್ಷ ರಾಜಕೀಯದಲ್ಲಿರುತ್ತೇನೆ. ನಾನು ಮುಂದೆ ಚುನಾವಣೆಗೆ ಸ್ಪರ್ಧಿಸಿದಾಗ, ನನ್ನ ನಾಯಕತ್ವದಲ್ಲಿ ಚುನಾವಣೆ ನಡೆದಾಗ ನನ್ನ ಹೆಸರಿನ ಘೋಷಣೆಗಳನ್ನು ಕೂಗಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರಿ ನೌಕರರಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆಯ ಚರ್ಚೆ ನಡೆಯುತ್ತಿರುವಾಗಲೇ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
07:39 AM (IST) Feb 23
Former Minister Kumar Bangarappa: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬೇಡಿಕೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತ ನಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.