ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಂಬೂಸವಾರಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು 750 ಕೆ.ಜಿ. ತೂಕದ ಭವ್ಯ ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಲು ಕ್ಯಾಪ್ಟನ್ ಪ್ರಶಾಂತ ಆನೆ ಸಂಪೂರ್ಣ ಸಿದ್ಧವಾಗಿದ್ದು, ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಗೌರವ ಹಾಗೂ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಜಂಬೂಸವಾರಿಗೂ ಮುನ್ನ ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ತದನಂತರ ಸಂಜೆ 4:10 ರಿಂದ 4:35 ರವರೆಗೆ ಸಲ್ಲುವ ಮೀನಾ ಲಗ್ನದಲ್ಲಿ, 750 ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಅಧಿಕೃತ ಚಾಲನೆ ಸಿಗಲಿದೆ. ಈ ಶುಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಇತರ ಗಣ್ಯಾತಿಗಣ್ಯರು ಭಾಗವಹಿಸಿ ಪುಷ್ಪಾರ್ಚನೆ ಮಾಡಲಿದ್ದಾರೆ.
08:25 AM (IST) Oct 21
ಬಿಗ್‌ಬಾಸ್ ಮನೆಯಲ್ಲಿ ತನಗೆ ಹೆಂಡತಿ ಇಲ್ಲ ಎಂದಿದ್ದ ಜಗದೀಶ್ ಅವರ ಅಸಲಿ ಸತ್ಯವನ್ನು ಅವರ ಅಣ್ಣ ರಾಜು ಬಿಚ್ಚಿಟ್ಟಿದ್ದಾರೆ. ಜಗದೀಶ್ ಅವರ ಪತ್ನಿ ಇರೋದು ಎಲ್ಲಿ? ಇಬ್ಬರ ನಡುವೆ ನಡೆದಿದ್ದೇನು ಎಂಬುದರ ಮಾಹಿತಿಯನ್ನು ರಾಜು ರಿವೀಲ್ ಮಾಡಿದ್ದಾರೆ.
07:42 AM (IST) Oct 21
ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದು, 9 ವರ್ಷಗಳ ಬಳಿಕ ಅವರ ಕನಸು ನನಸಾಗಿದೆ. ನವರಾತ್ರಿ ಸಮಯದಲ್ಲಿ ರಾಯರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
07:16 AM (IST) Oct 21
ಮೈಸೂರು ದಸರಾದ ಜಂಬೂಸವಾರಿಗೂ ಮುನ್ನ ನಡೆಯುವ ನಂದಿ ಧ್ವಜ ಪೂಜೆಯ ಬಳಿಕ ಗಣ್ಯರಿಗೆ ವಿಶೇಷ ಉಡುಗೊರೆ ನೀಡಲು ಶಿಲ್ಪಿ ರಾಜೇಶ್ ಕುಟುಂಬ ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಆನೆಗೆ ಕುಂಕಿ ಆನೆಗಳಾದ ಕಾವೇರಿ ಮತ್ತು ರೂಪ ಬೆಂಗಾವಲಾಗಿ ಸಾಗುವ ಮೂಲಕ ಅದ್ದೂರಿ ಜಂಬೂಸವಾರಿಗೆ ಚಾಲನೆ ಸಿಗಲಿದೆ.