ಶಿವಮೊಗ್ಗ: ಅನ್ಯಕೋಮಿನ ಇಬ್ಬರು ವ್ಯಕ್ತಿಗಳಿಂದ ನನಗೆ ಕರೆ ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಅ.17 ರಂದು ರಾತ್ರಿ 8.49ಕ್ಕೆ ನಾನು ಕುಟುಂಬದವರ ಜೊತೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ 7019994981 ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ಅಂದೇ ರಾತ್ರಿ 10.49ಕ್ಕೆ ಮತ್ತೊಬ್ಬ ವ್ಯಕ್ತಿ 9823658527 ಸಂಖ್ಯೆಯಿಂದ ಕರೆ ಮಾಡಿ, ನೀವು ಜಮೀರ್ ಅಹಮದ್ ಅವರ ಬಗ್ಗೆ ಏನೇನೋ ಮಾತನಾಡಿದ್ದೀರಿ ಎಂದು ಆರೋಪಿಸುತ್ತಾ ವೈಯಕ್ತಿಕವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ತೊಂದರೆಯಾಗಿದೆ. ಇಬ್ಬರನ್ನು ತಕ್ಷಣ ಬಂಧಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
07:50 AM (IST) Oct 20
HD Kumaraswamy 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
07:48 AM (IST) Oct 20
07:35 AM (IST) Oct 20
ಯುವಶಕ್ತಿ ಜಾಗೃತಿ, ವ್ಯಸನಮುಕ್ತ ಸಮಾಜ ಹಾಗೂ ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಇಳಕಲ್ಲಿನ ಈರಣ್ಣ ಕುಂದರಗಿಮಠ ಅವರು ಕೊಪ್ಪಳದಿಂದ ಮೈಸೂರಿಗೆ ಕೈಬಿಟ್ಟು ಬೈಕ್ ಓಡಿಸುವ ಸಾಹಸ ಯಾನ ಕೈಗೊಂಡಿದ್ದಾರೆ. ಗವಿಮಠದ ಶ್ರೀಗಳು ಚಾಲನೆ ನೀಡಿದ ಈ 460 ಕಿ.ಮೀ. ಯಾನವು ಯುವಜನರಲ್ಲಿ ಸಕಾರಾತ್ಮಕ ಸಂದೇಶ ಸಾರುವ ಗುರಿ.
07:33 AM (IST) Oct 20
ಬೆಂಗಳೂರು ಮತ್ತು ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ. 16 ಬೋಗಿಗಳ ಈ ರೈಲು 1118 ಕಿ.ಮೀ ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಲಿದೆ. ಈ ರೈಲಿನ ಟಿಕೆಟ್ ದರ ಎಷ್ಟು ಎಂಬುದರ ಮಾಹಿತಿ ಹೊರ ಬಂದಿದೆ.
07:20 AM (IST) Oct 20
ಕಬ್ಬು ಬೆಳೆಗಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿದ್ದ ಹೋರಾಟವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ನವೆಂಬರ್ 26ರೊಳಗೆ ಬೇಡಿಕೆ ಈಡೇರದಿದ್ದರೆ, ನವೆಂಬರ್ 27ರಂದು ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
07:15 AM (IST) Oct 20
07:08 AM (IST) Oct 20
ಕರ್ನಾಟಕದ ವಾಯುಯಾನ ಸಂಪರ್ಕವನ್ನು ಗಟ್ಟಿಗೊಳಿಸಲು ಚಿಕ್ಕಮಗಳೂರು, ಹಂಪಿ ಮತ್ತು ಮಡಿಕೇರಿಯಲ್ಲಿ ಏರ್‌ಸ್ಟ್ರಿಪ್ ಹಾಗೂ ಹೆಲಿಪೋರ್ಟ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.