ದಾವಣಗೆರೆ: ‘ಕಾಲ.. ಕಾಲ... ಕಾಲ ಉತ್ತರ ಕೊಡುತ್ತದೆ’... ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ್ದಾರೆ. ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ತಮ್ಮ ದೆಹಲಿ ಪ್ರವಾಸ ಸಕ್ಸಸ್ಸಾ ಸರ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಅಷ್ಟೇ ಸಮಾಧಾನದಿಂದ, ಹುಬ್ಬೇರಿಸುತ್ತಾ, ಮಂದಸ್ಮಿತರಾಗಿ, ‘ಕಾಲ.. ಕಾಲ.. ಉತ್ತರ ಕೊಡುತ್ತದೆ’ ಎಂದರು. ದಿಲ್ಲಿ ಪ್ರವಾಸದಿಂದ ಬಂದ ಬಳಿಕ ತಮ್ಮ ಮೊಗದಲ್ಲಿ ಮೂಡಿರುವ ಖುಷಿಯನ್ನು ಹೊತ್ತೇ ಕಾರನ್ನೇರಿದರು.
ಈ ಮಧ್ಯೆ, ಸೂರಗೊಂಡನಕೊಪ್ಪದಲ್ಲಿ ಕೆಲವರಿಂದ ಕಪ್ಪು ಬಟ್ಟೆ ಪ್ರದರ್ಶನದ ಬಗ್ಗೆ ಕಿಡಿಕಾರಿದ ಡಿ.ಕೆ.ಶಿ, ಇದು ರಾಜಕೀಯ ಸಭೆಯಲ್ಲ, ಕಾಂಗ್ರೆಸ್ ಪಕ್ಷದ ಸಭೆಯೂ ಅಲ್ಲ. ಎಲ್ಲಾ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯ ಕೊಡಿಸಿದೆ. ಪರಿಶಿಷ್ಟ ಜಾತಿಯಲ್ಲಿ 6, 6, 5 ಮೀಸಲಾತಿ ಕೊಡಿಸಿದೆ. ಪಾಪ ಬಿಜೆಪಿಯವರಿಗೆ ಈ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು.
10:45 PM (IST) Feb 15
ತಟ್ಟೆ ಬಿದ್ದು ಅನ್ನ ಚೆಲ್ಲಿದ್ದಕ್ಕೆ ಬೈದ ಅಮ್ಮಾ, ತಾಯಿ ಬೈಗುಳಕ್ಕೆ ಬೇಸತ್ತ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕೆಲಸದಿಂದ ಮನೆಗೆ ಮರಳುವಾಗ ಮಗಳು ಶವವಾಗಿದ್ದಾಳೆ. ಮಗಳ ತಬ್ಬಿ ತಾಯಿ ರೋಧನೆ ಮುಗಿಲು ಮುಟ್ಟಿದೆ.
08:53 PM (IST) Feb 15
ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಇದೀಗ ಬೆಂಗಳೂರಿನ ಐತಿಹಾಸಿಕ ರೇಸ್ ಕೋರ್ಸ್ ಶೌರ್ಯ ಪರಂಪರೆ ಸಾಲಿಗೆ ಸೇರಿಕೊಳ್ಳುತ್ತಿದೆ. ಬ್ರಿಟೀಷರು ಆರಂಭಿಸಿದ ರೇಸ್ ಕೋರ್ಸ್ ಇದೀಗ ಅದಕ್ಕೂ ಹಿಂದಿನ ಇತಿಹಾಸ ಜೊತೆ ಸೇರಿಕೊಳ್ಳುತ್ತಿದೆ.
04:44 PM (IST) Feb 15
02:11 PM (IST) Feb 15
01:03 PM (IST) Feb 15
BJP MLA Byrati Basavaraj ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವರದಿ ಆಧರಿಸಿ 42ನೇ ಎಸಿಜೆಎಂ ನ್ಯಾಯಾಲಯವು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ.
12:44 PM (IST) Feb 15
ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ, ನಗರದಾದ್ಯಂತ ಬೀದಿ ನಾಯಿಗಳಿಗೆ ಆಹಾರ ನೀಡಲು 450 ಸ್ಥಳಗಳನ್ನು ಗುರುತಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಈ ಕ್ರಮ ಕೈಗೊಂಡಿದ್ದು, ಪ್ರಾಣಿ ಪ್ರಿಯರು ನಿಗದಿತ ಸ್ಥಳಗಳಲ್ಲೇ ಆಹಾರ ನೀಡಿ, ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಲಾಗಿದೆ.
12:01 PM (IST) Feb 15
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರಿನಲ್ಲಿ ಶಿವರಾತ್ರಿಯ ಸಂಭ್ರಮದ ನಡುವೆಯೇ ರಾಮಲಿಂಗೇಶ್ವರ ಹಾಗೂ ನಂದಿ ವಿಗ್ರಹಗಳನ್ನು ಭಗ್ನಗೊಳಿಸಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆಯ ವಿವರ ಇಲ್ಲಿದೆ.
11:33 AM (IST) Feb 15
BY Vijayendra Becoming CM in 2028 ಬೀಳಗಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರು 2028ಕ್ಕೆ ಬಿ.ವೈ.ವಿಜಯೇಂದ್ರ ರಾಜ್ಯದ ಮುಖ್ಯಮಂತ್ರಿಯಾಗುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
11:33 AM (IST) Feb 15
ಮಂಗಳೂರಿನ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್‌ವರೆಗಿನ ಚತುಷ್ಪಥ ರಸ್ತೆ ಅಭಿವೃದ್ದಿ ಕಾಮಗಾರಿ ಫೆ.15ರಿಂದ ನಾಲ್ಕು ತಿಂಗಳ ಕಾಲ ನಡೆಯಲಿದೆ. ಪರ್ಯಾಯ ಮಾರ್ಗಗಳು ಈ ರೀತಿಯಾಗಿದೆ.
11:07 AM (IST) Feb 15
Taggahalli Gram Panchayat: ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ, ಪ್ರಭಾರ ಪಿಡಿಒ ಅಧಿಕಾರಿಯೊಬ್ಬರು ಕೇವಲ ಮೂರು ದಿನಗಳಲ್ಲಿ 54 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ.
10:40 AM (IST) Feb 15
09:43 AM (IST) Feb 15
ಬೇಲೂರಿನ ಪ್ರಿಯಾಂಕಾ ನಾಪತ್ತೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಆತ್ಮಹ*ತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
09:03 AM (IST) Feb 15
ಬಿಜೆಪಿ ಹಿರಿಯ ನಾಯಕ ರಮೇಶ ಜಿಗಜಿಣಗಿ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಆಸೆಯನ್ನು ಪುನರುಚ್ಚರಿಸಿದ್ದಾರೆ. ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ತಮಗೆ ಅಸಮಾಧಾನವಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತವನ್ನು 'ಹೊಲಸು ಸರ್ಕಾರ' ಎಂದು ಟೀಕಿಸಿದರು.
08:38 AM (IST) Feb 15
08:24 AM (IST) Feb 15
ಹಂಪಿ ಉತ್ಸವದ ವಿಚಾರಗೋಷ್ಠಿಯಲ್ಲಿ, ವಿಜಯನಗರ ಸಾಮ್ರಾಜ್ಯದ ವೈಭವದ ಹಿಂದೆ ಮಹಿಳೆಯರ ಶೋಷಣೆ, ವೇಶ್ಯಾವಾಟಿಕೆ ಶ್ರಮಿಕರ ಇತಿಹಾಸವನ್ನು ಕಡೆಗಣಿಸಿದಂತಹ ಕರಾಳ ಸತ್ಯಗಳನ್ನು ವಿದ್ವಾಂಸರು ವಿಶ್ಲೇಷಿಸಿದರು. ರಾಜರ ಇತಿಹಾಸಕ್ಕೆ ಸೀಮಿತವಾಗದೆ, ಜನಪದ ನಾಯಕ ಕುಮಾರರಾಮನಂತಹ ಸಾಮಾನ್ಯರ ಕಥೆಗಳ ಮಹತ್ವ ಹೇಳಲಾಯ್ತು.
08:02 AM (IST) Feb 15
ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಸಾವಿರ ದಿನ-ಸಾವಿರ ಸಮಸ್ಯೆ' ಪೋಸ್ಟರ್ ಬಿಡುಗಡೆ ಮಾಡಿದರು.
07:40 AM (IST) Feb 15
ಹಾವೇರಿಯಲ್ಲಿ ನಡೆದ ಭೂ ಗ್ಯಾರಂಟಿ ಸಮಾವೇಶದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ 6.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕಾಂಗ್ರೆಸ್ ಸರ್ಕಾರದ 1000 ದಿನಗಳ ಪೂರೈಕೆ ಹಿನ್ನೆಲೆ ಗೊಟಗೋಡಿಯ ರಾಕ್ ಗಾರ್ಡನ್‌ನವರು ತಯಾರಿಸಿದ ಈ ಪ್ರತಿಮೆಯನ್ನು ಕಂಡು ಸಂತಸ