ಹುಬ್ಬಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಪಸ್ವರದ ಮಧ್ಯೆಯೇ ಇಲ್ಲೊಬ್ಬ ಗೃಹಿಣಿ, ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ಬೋರ್‌ವೆಲ್ ಕೊರೆಸಿದ್ದು, 5 ಇಂಚು ನೀರು ಬಂದಿದೆ. ಇದರಿಂದ ನೀರಾವರಿ ಮಾಡಲು ಮುಂದಾಗಿದ್ದಾರೆ.
ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಈರವ್ವ ಭರಮಪ್ಪ ಅಂಗಡಿ (52) ಬೋರ್‌ವೆಲ್ ಕೊರೆಸಿದ ಗೃಹಲಕ್ಷ್ಮಿ. ಈರವ್ವ ಹಾಗೂ ಪತಿ ಭರಮ್ಮಣ್ಣ ಅಂಗಡಿಗೆ 2.5 ಎಕರೆ ಜಮೀನಿದ್ದು, ಇಬ್ಬರು ಮಕ್ಕಳಿದ್ದಾರೆ. ಇವರದು ಖುಷ್ಕಿ ಜಮೀನಾಗಿದ್ದು ಮಳೆಯನ್ನೇ ಆಶ್ರಯಿಸಿದೆ. ಗೃಹಲಕ್ಷ್ಮಿಯಿಂದ ಬರುತ್ತಿದ್ದ ಹಣವನ್ನು ಮೊದಲ ಒಂದೆರಡು ಕಂತು (29 ಕಂತು ಬಂದಿದೆ) ಬಳಸಿಕೊಂಡಿದ್ದುಂಟು. ಆ ಬಳಿಕ ಕೂಡಿಟ್ಟಿದ್ದು ₹54,000 ಜಮೆ ಆಗಿದೆ. ₹50,000 ವ್ಯಯಿಸಿ 220 ಅಡಿ ಬೋರ್‌ವೆಲ್ ಕೊರೆಸಿದ್ದಾರೆ. 90 ಅಡಿಗೆ 5 ಇಂಚು ನೀರು ಸಹ ಬಂದಿದ್ದು ಸಂಭ್ರಮಿಸಿದ್ದಾರೆ. ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ₹4,000 ಉಳಿದಿದ್ದು, ಮೋಟಾರ್ ಅಳವಡಿಸಲು ₹80,000 ವೆಚ್ಚ ತಗುಲಿದೆ. ಇದಕ್ಕಾಗಿ ವಿವಿಧೆಡೆ ಸಾಲ ಮಾಡಿದ್ದಾರೆ.
07:57 AM (IST) May 12
07:56 AM (IST) May 12
07:36 AM (IST) May 12
Deve Gowda at Mango Mela ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಕಬ್ಬನ್ ಪಾರ್ಕ್‌ನಲ್ಲಿ ನಡೆದ ಮಾವು-ಹಲಸು ಮೇಳಕ್ಕೆ ವ್ಹೀಲ್ ಚೇರ್‌ನಲ್ಲಿ ಭೇಟಿ ನೀಡಿ, ಹಣ್ಣು ವೀಕ್ಷಿಸಿದರು. ರೈತರೊಬ್ಬರಿಂದ ಹಣ ಕೊಟ್ಟೇ ಹಲಸಿನ ಹಣ್ಣು ಖರೀದಿಸಿದರು ಬಳಿಕ ದೇವೇಗೌಡರ ಆ ಮಾತು ವೈರಲ್ ಆಗಿದೆ.
07:27 AM (IST) May 12
07:10 AM (IST) May 12
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ವೇಳೆ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಆರಂಭಿಸಿದೆ.
07:03 AM (IST) May 12
ಬೆಂಗಳೂರಿನ ಬಾಣಸವಾಡಿಯ ಐಒಸಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಹಳೆಯ ಫ್ಲೈಓವರ್ ಅನ್ನು ನೆಲಸಮಗೊಳಿಸಿ ₹436 ಕೋಟಿ ವೆಚ್ಚದಲ್ಲಿ ಹೊಸ ಸರ್ಕ್ಯುಲರ್ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ಕೆಲ ಪ್ರದೇಶಗಳಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಗುವ ನಿರೀಕ್ಷೆಯಿದೆ.