LIVE NOW
Published : Oct 01, 2026, 07:00 AM ISTUpdated : Oct 01, 2026, 08:21 AM IST

Karnataka News Live: ದಸರಾ ರಜೆ ನೀಡದ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ; ಶಿಕ್ಷಣ ಇಲಾಖೆಗೆ ಮನವಿ

ಸಾರಾಂಶ

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೆದರಿಕೆ ಹಾಕುವ ರಾಜಕಾರಣ ಮಾಡುತ್ತಿದ್ದಾರೆ. ಅವರು ಬ್ಲ್ಯಾಕ್‌ ಮೇಲರ್, ಬ್ಯಾಕ್ ಸ್ಟ್ಯಾಬರ್, ಬ್ಲ್ಯಾಕ್‌ ಮ್ಯಾಜಿಕ್ ಈ ‘3ಬಿ’ಗೆ ಖ್ಯಾತರು. ಇದೇ ಇವರ ಕೆಲಸ’ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರಿಗೆ ಐಟಿ ನೋಟಿಸ್‌ ಬಂದ ತಕ್ಷಣ ಹೋಗಿ ನರೇಂದ್ರ ಮೋದಿ, ಅಮಿತ್‌ ಶಾ ಜತೆ ಒಪ್ಪಂದ ಮಾಡಿಕೊಂಡು ಮೈತ್ರಿ ಮಾಡಿಕೊಂಡರು. ಆಗ ಕೊಟ್ಟ ನೋಟಿಸ್‌ ಎಲ್ಲಿ ಹೋಯಿತು? ಇವರು ಅಕ್ರಮ ಆಸ್ತಿ ತನಿಖೆ ಮಾಡಬೇಕಿದ್ದರೆ ಬಾಲಕೃಷ್ಣೇಗೌಡ ಅವರ ಆಸ್ತಿ ಒಂದೇ ವರ್ಷ 1,000 ಕೋಟಿ ರು. ಹೇಗೆ ಹೆಚ್ಚಾಯಿತು ಎಂಬುದನ್ನು ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಆದರೆ ಕುಮಾರಿಸ್ವಾಮಿ ನಮ್ಮದು ದರಿದ್ರ ಸರ್ಕಾರ. 2,500 ರು. ಮಾತ್ರ ನೀಡಿದ್ದಾರೆ ಎಂದು ಟೀಕಿಸುತ್ತಾರೆ. ಅವರಿಗೆ ತಾಕತ್‌ ಇದ್ದರೆ ಎಕರೆಗೆ 50 ಸಾವಿರ ಕೊಡಿಸಲಿ ಎಂದು ಸವಾಲು ಹಾಕಿದರು.

08:21 AM (IST) Oct 01

ದಸರಾ ರಜೆ ನೀಡದ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ; ಶಿಕ್ಷಣ ಇಲಾಖೆಗೆ ಮನವಿ

ದಸರಾ ರಜೆ ನೀಡದೆ ತರಗತಿ ನಡೆಸುತ್ತಿರುವ ಕೆಲವು ಖಾಸಗಿ ಶಾಲೆಗಳ ವಿರುದ್ಧ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

Read Full Story

08:04 AM (IST) Oct 01

ಮಾಜಿ ಸೈನಿಕ ಜಿ.ವೇಮಣ್ಣ ಅವರಿಗೆ 5 ಎಕರೆ ಭೂಮಿ ಕೊಡದ್ದಕ್ಕೆ ಹೈಕೋರ್ಟ್ ತೀವ್ರ ವಿಷಾದ

ದೇಶ ಸೇವೆ ಮಾಡಿದ ಮಾಜಿ ಸೈನಿಕ ಜಿ.ವೇಮಣ್ಣ ಅವರಿಗೆ 5 ಎಕರೆ ಜಮೀನು ನೀಡಲು ಸರ್ಕಾರದ ಬಳಿ ಭೂಮಿ ಇಲ್ಲದಿರುವುದಕ್ಕೆ ಹೈಕೋರ್ಟ್ ತೀವ್ರ ವಿಷಾದ ವ್ಯಕ್ತಪಡಿಸಿದೆ. ನಿಯಮಗಳ ತಿದ್ದುಪಡಿ ಅನ್ವಯ 5 ಎಕರೆ ಬದಲಿಗೆ ಕೇವಲ 2,400 ಚದರ ಅಡಿ ನಿವೇಶನವಷ್ಟೇ ಮಂಜೂರು ಮಾಡಲು ನ್ಯಾಯಾಲಯ ಆದೇಶಿಸಿದೆ.
Read Full Story

07:55 AM (IST) Oct 01

ಯಲಹಂಕ ಬಳಿಯಲ್ಲಿರೋ 3 ಎಕರೆ 12 ಗುಂಟೆ ಭೂಮಿ ಮಾಲೀಕತ್ವ ಯಾರದ್ದು? ಹೈಕೋರ್ಟ್ ತೀರ್ಪು

ಯಲಹಂಕ ವಾಯುಪಡೆ ನಿಲ್ದಾಣದ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣಕ್ಕಾಗಿ 1943ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ 3 ಎಕರೆ ಭೂಮಿ ರಕ್ಷಣಾ ಇಲಾಖೆಗೆ ಸೇರಿದ್ದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸರ್ವೇ ನಂಬರ್ ತಪ್ಪಾಗಿದ್ದನ್ನು ಬಳಸಿಕೊಂಡು ಖಾಸಗಿ ವ್ಯಕ್ತಿಯೊಬ್ಬರು ಈ ಜಾಗವನ್ನು ಕಬಳಿಸಲು ಯತ್ನಿಸಿದ್ದರು.

Read Full Story

07:51 AM (IST) Oct 01

ಇತಿಹಾಸದಲ್ಲೇ ಮೊದಲು, ಈ ಕ್ಷೇತ್ರಕ್ಕೆ ಹೊಸ ನೀತಿ, ₹4,000 ಕೋಟಿ ಹಣಕಾಸು ಬೆಂಬಲ! 5 ಲಕ್ಷ ಉದ್ಯೋಗ ಸೃಷ್ಟಿಗೆ ಮೆಗಾ ಪ್ಲ್ಯಾನ್ ಏನು?

ರಾಜ್ಯದಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆ ಮತ್ತು 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನೂತನ ಜವಳಿ ಮತ್ತು ಉಡುಪು ನೀತಿ 4.0 ಪ್ರಕಟಿಸಲಾಗಿದೆ. ಈ ನೀತಿಯ ಅನುಷ್ಠಾನಕ್ಕಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ 4000 ಕೋಟಿ ರೂ. ಹಣಕಾಸು ಬೆಂಬಲ ನೀಡಲಾಗುತ್ತಿದೆ. ಬೆಂಗಳೂರಿನ ಹೊರಗಡೆ ಕೈಗಾರಿಕೆಗಳ ವಿಸ್ತರಣೆ.

Read Full Story

07:41 AM (IST) Oct 01

Bengaluru - ಮಾರೇನಹಳ್ಳಿ ಜಂಕ್ಷನ್‌ನಲ್ಲಾಗ್ತಿರೋ ಟ್ರಾಫಿಕ್ ನಿಯಂತ್ರಣಕ್ಕೆ ಮೆಗಾ ಪ್ಲಾನ್?

ಮಾರೇನಹಳ್ಳಿ ಜಂಕ್ಷನ್ ಬಳಿ ಅಂಡರ್‌ಪಾಸ್ ನಿರ್ಮಾಣ ಮತ್ತು ಮಡಿವಾಳ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯ 300ಕ್ಕೂ ಅಧಿಕ ಪ್ರಮುಖ ಸ್ವತ್ತುಗಳನ್ನು ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.

Read Full Story

07:27 AM (IST) Oct 01

ಆಲಮಟ್ಟಿ ಡ್ಯಾಂ 524.256 ಮೀ.ಗೆ ಎತ್ತರ - 15 ಗ್ರಾಮ, 5,600 ಎಕರೆ ಭೂಮಿ ಮುಳುಗಡೆ ಆತಂಕ! ಎಂಬಿ ಪಾಟೀಲ್ ಮನವಿ ಏನು?

Almatti reservoir height increase ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುತ್ತಿರುವುದರಿಂದ ಬಬಲೇಶ್ವರ ಕ್ಷೇತ್ರದ 15 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂದು ಸಾವಿರ ಎಕರೆಗೆ ಪರಿಹಾರ ನೀಡುವಂತೆ ಸಚಿವ ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ.

Read Full Story

More Trending News