
ಬೆಂಗಳೂರು (ಅ.7): ರಾಜ್ಯದ 69 ಮಂದಿ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಕಳೆದ 3 ವರ್ಷದಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯದ ಅಡಿ 7.40 ಕೋಟಿ ರು. ವೆಚ್ಚ ಮರುಪಾವತಿ ಪಡೆದಿರುವುದು ಬಹಿರಂಗಗೊಂಡಿದೆ. ಈ ಪೈಕಿ ಬೇಲೂರು ಶಾಸಕ ಎಚ್.ಕೆ.ಸುರೇಶ್ ಹಾಗೂ ಕುಟುಂಬದವರಿಗೆ ಅತಿ ಹೆಚ್ಚು ಎಂದರೆ ₹98,78,325 ವೈದ್ಯಕೀಯ ವೆಚ್ಚ ಮರು ಪಾವತಿ ನೀಡಲಾಗಿದೆ.
ಕೆ.ಹರೀಶ್‌ಗೌಡ ಮತ್ತು ಕುಟುಂಬದವರಿಗೆ ₹85,91,139, ಕುಣಿಗಲ್ ಶಾಶಕ ಎಚ್.ಡಿ. ರಂಗನಾಥ್ ಹಾಗೂ ಕುಟುಂಬಕ್ಕೆ ₹85,22,761 ನೀಡಲಾಗಿದೆ. ಅತ್ಯಂತ ಕಡಿಮೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಿರುವವರ ಪೈಕಿ ನಿಖಿಲ್ ಉಮೇಶ್ ಕತ್ತಿ ಹಾಗೂ ಕುಟುಂಬದವರು ಕೇವಲ ₹2349 ಪಡೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ವಿಧಾನಸಭೆ ಸಚಿವಾಲಯ ಉತ್ತರಿಸಿದ್ದು, 2023ರ ಮೇ 20 ರಿಂದ 2026ರ ಸೆ.30 ರವರೆಗೆ ಪಡೆದಿರುವ ಚಿಕಿತ್ಸೆ ವೆಚ್ಚ ಮರುಪಾವತಿ ವಿವರ ನೀಡಿದೆ.
ಶಾಮನೂರು ಶಿವಶಂಕರಪ್ಪ ಅವರಿಗೆ ₹69.78 ಲಕ್ಷ ಮರುಪಾವತಿ ಮಾಡಲಾಗಿದೆ. ಮಾಜಿ ಸಿಎಂ ಬೊಮ್ಮಾಯಿ- ₹10.45 ಲಕ್ಷ, ಎಸ್. ಸುರೇಶ್ ಕುಮಾರ್ ₹22.26 ಲಕ್ಷ, ಆರಗ ಜ್ಞಾನೇಂದ್ರ -₹10.21 ಲಕ್ಷ, ಲಕ್ಷ್ಮಣ ಸವದಿ-₹4.86 ಲಕ್ಷ, ಕೆ.ಗೋಪಾಲಯ್ಯ-₹21.05 ಲಕ್ಷ, ಎಚ್.ಡಿ ರೇವಣ್ಣ-₹13.02 ಲಕ್ಷ, ಡಾ। ಅಶ್ವತ್ಥ ನಾರಾಯಣ- ₹4.58 ಲಕ್ಷ ಮರುಪಾವತಿ ಪಡೆದಿದ್ದಾರೆ.
ಸ್ಪರ್ಶ್ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಶರಣ್ ಪಾಟೀಲ್ ಅವರ ಮಾವ ಕೂಡ ಆಗಿರುವ ಶಿವಶಂಕರಪ್ಪ ಅವರ ಚಿಕಿತ್ಸಾ ವೆಚ್ಚ ಮರುಪಾವತಿ ವಿವರ ಕುತೂಹಲಕ್ಕೆ ಕಾರಣವಾಗಿದೆ. ಉಳಿದಂತೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎಂ.ವೆಂಕಟೇಶ್, ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯುವುದು ನಿಯಮ ಬಾಹಿರವಲ್ಲ ಹಾಗೂ ಇದಕ್ಕೆ ಯಾವುದೇ ಮಿತಿ ಇಲ್ಲ. ಆದರೆ ಶಾಸಕರು ಕೋಟಿಗಟ್ಟಲೆ ಆಸ್ತಿ ಘೋಷಣೆ ಮಾಡಿಕೊಳ್ಳುತ್ತಾರೆ. ಪ್ರತಿ 5 ವರ್ಷಕ್ಕೊಮ್ಮೆ ಆಸ್ತಿ ದುಪ್ಪಟ್ಟಾಗುತ್ತದೆ. ಅವರ ಜತೆ ಕುಟುಂಬ ಸದಸ್ಯರಿಗೂ ಸಾರ್ವಜನಿಕರ ತೆರಿಗೆ ಹಣದ ಮೂಲಕ ಚಿಕಿತ್ಸೆ ವೆಚ್ಚ ಭರಿಸುವುದು ಸರಿಯಲ್ಲ. ಸಾರ್ವಜನಿಕರ ಹಣ ವ್ಯರ್ಥವಾಗುವುದನ್ನು ತಡೆಯಲು ಶಾಸಕರಿಗೆ ಗ್ರೂಪ್ ವಿಮೆ ಮಾಡಿಸಲಿ ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ