ರಾಜ್ಯದಲ್ಲಿ ಕೊರೋನಾ ಮಹಾಮಾರಿ ಎರಡನೆಯ ಅಲೆ ಜೋರಾಗಿ ಅಪ್ಪಳಿಸಿರುವುದರಿಂದ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರು, (ಏ.17): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ.
ಹೌದು... ಇಂದು (ಶನಿವಾರ) ಮೂವರು ಸಚಿವರ ಸಭೆ ನಡೆದಿದ್ದು, ಸಭೆಯಲ್ಲಿ ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಸಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ ಮತ್ತು ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
undefined
ಕಲ್ಯಾಣ ಮಂಟಪವನ್ನು ಬುಕ್ ಮಾಡಲು ಆಯಾ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕಿಂಗ್ ಆಗಿದ್ರೆ ಸಮಸ್ಯೆ ಇಲ್ಲ. ಆದರೆ ಇಂದು ಸಂಜೆಯಿಂದ ಯಾರು ಛತ್ರ ಬುಕ್ ಮಾಡುತ್ತಾರೋ ಅಂತಹವರು ಜಿಲ್ಲಾಡಳಿತಗಳ ಅನುಮತಿ ಪಡೆದುಕೊಳ್ಳಬೇಕು. ಜನ ಪಾಲ್ಗೊಳ್ಳುವುದಕ್ಕೆ ನಿಗದಿತ ಸಂಖ್ಯೆಯ ಪಾಸ್ ವಿತರಣೆ ಮಾಡಲಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬರ್ತ್ಡೇ, ಧಾರ್ಮಿಕ ಕಾರ್ಯಕ್ರಮಗಳಿಗೂ ಇದು ಅನ್ವಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರಲ್ಲಿ ಕೋವಿಡ್ ಅಟ್ಟಹಾಸ : ನಿಮಿಷಕ್ಕೆ 7 ಜನರಿಗೆ ಸೋಂಕು
ಇದೇ ವೇಳೆ ಕಂದಾಯ ಸಚಿವ ಆರ್ ಅಶೋಕ ಅವರು ಮಾತನಾಡಿ, ಮದುವೆ ಮನೆಗಳಲ್ಲಿ ಜನರನ್ನು ನಿಯಂತ್ರಿಸದೆ ಇದ್ದರೆ ಮದುವೆ ಮನೆಯವರ ವಿರುದ್ಧ FIR ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಕೊವಿಡ್ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ನಿಗದಿತ ಸಂಖ್ಯೆ ಜನರಿಗೆ ಮಾತ್ರ ಸಮಾರಂಭದಲ್ಲಿ ಅವಕಾಶ. ಆಯೋಜಕರು ನಿಗದಿತ ಸಂಖ್ಯೆಯಲ್ಲಿ ಪಾಸ್ ವಿತರಿಸಬೇಕು ಎಂದರು.
ಒಂದು ವೇಳೆ ಹೆಚ್ಚುವರಿ ಪಾಸ್ ಕೊಟ್ಟಿದ್ದು ಕಂಡುಬಂದ್ರೆ ಅಂತಹ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸಚಿವ ಅಶೋಕ್ ಅವರು ಮದುವೆ ಮಾಡುವ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.
ಮದುವೆ ಸಮಾರಂಭಗಳಿಗೆ ಪಾಸ್ ಕಡ್ಡಾಯವಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಅವಕಾಶವಿದ್ದು, ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮದುವೆಗೆ ಮುನ್ನ ಸಮೀಪದ ಠಾಣೆಯಲ್ಲಿ ಪಾಸ್ ಪಡೆಯಬೇಕು ಎಂದು ತಿಳಿಸಿದರು.
ಜಾತ್ರೆಗಳು ರದ್ದು:
ಹಳ್ಳಿಗಳಲ್ಲಿ ಜಾತ್ರೆ ನಡೆಸುವುದನ್ನು ಜಿಲ್ಲಾಧಿಕಾರಿಗಳು ನಿಷೇಧಿಸಬೇಕು. ಒಂದು ತಿಂಗಳು ಮೊದಲೇ ನಿಷೇಧಿಸಿ ಆದೇಶ ಹೊರಡಿಸಬೇಕು. ಒಂದು ವೇಳೆ ಜಾತ್ರೆಗಳು ನಡೆದರೆ ಅದಕ್ಕೆ ಆಯಾ ಜಿಲ್ಲಾಧಿಕಾರಿಗಲೇ ಹೊಣೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.