ಶೋಭಾ ಕರಂದ್ಲಾಜೆ ರಾಜಕಾರಣದಲ್ಲಿ ಬೆಂಕಿ ಹಚ್ಚೋದು ಬಿಟ್ಟು ಬೇರೇನೂ ಮಾಡಿಲ್ಲ:  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

By Ravi Janekal  |  First Published Oct 19, 2024, 3:32 PM IST

ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಮಹಿಳೆಯಾಗಿ ವೈಯಕ್ತಿಕ ಗೌರವ ಇದೆ. ಶೋಭಾ ಕರಂದ್ಲಾಜೆ ರಾಜಕಾರಣದಲ್ಲಿ  ಉರಿವ ಬೆಂಕಿಗೆ ತುಪ್ಪ ಸುರಿವ ಕೆಲಸ ಮಾಡುತ್ತಾ ಬಂದಿದ್ದಾರೆ. ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.


ಉಡುಪಿ (ಅ.19): ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಮಹಿಳೆಯಾಗಿ ವೈಯಕ್ತಿಕ ಗೌರವ ಇದೆ. ಶೋಭಾ ಕರಂದ್ಲಾಜೆ ರಾಜಕಾರಣದಲ್ಲಿ  ಉರಿವ ಬೆಂಕಿಗೆ ತುಪ್ಪ ಸುರಿವ ಕೆಲಸ ಮಾಡುತ್ತಾ ಬಂದಿದ್ದಾರೆ. ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

ಮುಡಾ ಹಗರಣದ ದಾಖಲೆ ಸುಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮೂಡಾ ಮೇಲೆ ರಾಜಕೀಯ ಪ್ರೇರಿಯ ಇಡಿ ರೈಡ್ ನಡೆಯುತ್ತಿದೆ. ರಾಜಭವನ, ರಾಜ್ಯಪಾಲರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

Tap to resize

Latest Videos

undefined

ಇನ್ನು ಪಂಚಮಸಾಲಿ ಲಿಂಗಾಯತ 2A ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯರ ಜೊತೆ ಮಾತುಕತೆಯಾಗಿದೆ ಸಿಎಂ, ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೀಗ ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಹಿತೆ ಜಾರಿಯಲ್ಲಿದೆ. ಮೀಸಲಾತಿ ವಿಚಾರವಾಗಿ ಸಭೆಯಲ್ಲಿ ನಡೆದ ವಿಚಾರ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.

ಮುಡಾ ಹಗರಣ: ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ, ಸಚಿವ ಜಾರಕಿಹೊಳಿ

ದ.ಕ ಸ್ಥಳೀಯಾಡಳಿತ ಉಪ ಚುನಾವಣೆಯಲ್ಲಿ ರಾಜು ಪೂಜಾರಿ ಪರ ಕೊನೆಯ ಹಂತದ ಪ್ರಚಾರ ತಯಾರಿ ನಡೆಯುತ್ತಿದೆ. ಪಕ್ಷ ಗಟ್ಟಿಗೊಳಿಸಲು ಕಾಂಗ್ರೆಸ್ ಗೆಲ್ಲುವ ಅಗತ್ಯವಿದೆ. ನಮ್ಮ ಅಭ್ಯರ್ಥಿ ಗೆಲ್ಲಿಸುವ ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಬಿಜೆಪಿಗೆ ಓವರ್ ಕಾನ್ಫಿಡೆನ್ಸ್ ಇದೆ. ಅವರು ಊಹಿಸೊದೆ ಬೇರೆ ಆಗೋದೆ ಬೇರೆ. ಓವರ್ ಕಾನ್ಫಿಡೆನ್ಸ್ ನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಜಿಲ್ಲೆಯ ಜನರು ನಮಗೆ ಗ್ಯಾರೆಂಟಿ ಮೇಲೆ ಭರವಸೆ ಇಟ್ಟಿದ್ದಾರೆ ಗೆಲ್ಲಿಸುತ್ತಾರೆ. ಪಂಚಾಯತ್ ಗೆ ಶಕ್ತಿ ತಂದುಕೊಟ್ಟಿದ್ದೇ ಕಾಂಗ್ರೆಸ್. ಉದ್ಯೋಗ ಖಾತ್ರಿ, ನರೇಗಾದಂತಹ ಹತ್ತಾರು ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಪಂಚಾಯತ್ ನ ಪರಿಕಲ್ಪನೆಯೇ ಕಾಂಗ್ರೆಸ್‌ನದ್ದು ಎಂದರು.

ಇನ್ನು ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಚರ್ಚೆಯಾಗಿದೆ. ಈಗ ಭರವಸೆ ಕೊಡಲ್ಲ, ನೀತಿ ಸಂಹಿತಿ ಜಾರಿಯಲ್ಲಿದೆ. ಅರಣ್ಯ ಮಂತ್ರಿ ಖಂಡ್ರೆಯವರ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದರು. ಇದೇ ವೇಳೆ ಕರಾವಳಿಗೆ ಕಾಂಗ್ರೆಸ್ ನಿಂದ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಬಿಡಿಗಾಸು ಅನುದಾನ ಇಲ್ಲ ನೀಡಿಲ್ಲ ಎಂಬ ಬಿಜೆಪಿ ಅರೋಪಕ್ಕೆ ತಿರುಗೇಟು ನೀಡಿದ ಸಚಿವೆ, ಕೇಂದ್ರದಿಂದಾಗುವ ಅನ್ಯಾಯದ ಬಗ್ಗೆ ಬಿಜೆಪಿ ಯಾಕೆ ಧ್ವನಿ ಎತ್ತುವುದಿಲ್ಲ? ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ತಲೆ ಇಲ್ವ? ದಾರಿ ತಪ್ಪಿಸಿ  ಗೂಬೆ ಕೂರಿಸೋ ಕೆಲಸ ಬಿಡಿ. ಬಿಜೆಪಿಗೆ ಆಪಾದನೆ ಮಾಡೋದು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು

click me!