ವೈರಸ್‌ ತಡೆಗೆ 4ಸಿ ಸೂತ್ರ: ಅಳವಡಿಸ್ಕೊಂಡ್ರೆ ಸೋಂಕು ನಿಗ್ರಹ ಸಾಧ್ಯ!

Published : Jul 08, 2020, 07:15 AM ISTUpdated : Jul 08, 2020, 08:25 AM IST
ವೈರಸ್‌ ತಡೆಗೆ 4ಸಿ ಸೂತ್ರ:  ಅಳವಡಿಸ್ಕೊಂಡ್ರೆ ಸೋಂಕು ನಿಗ್ರಹ ಸಾಧ್ಯ!

ಸಾರಾಂಶ

ವೈರಸ್‌ ತಡೆಗೆ 4ಸಿ ಸೂತ್ರ!|  ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸೋಂಕು ನಿಗ್ರಹ ಸಾಧ್ಯ| ಇದು ಭಯಾನಕ ವೈರಸ್ಸಲ್ಲ: ವೈದ್ಯ ಶಿಕ್ಷಣ ಸಚಿವ ಸುಧಾಕರ್‌| 

ಬಬೆಂಗಳೂರು(ಜು.08): ಕೊರೋನಾ ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರೂ ಜೀವನದಲ್ಲಿ ಆತ್ಮವಿಶ್ವಾಸ (ಕಾನ್ಫಿಡೆನ್ಸ್‌), ಸಹಭಾಗಿತ್ವ (ಕೊಲ್ಯಾಬ್ರೇಷನ್‌), ಸಂವಹನ (ಕಮ್ಯುನಿಕೇಷನ್‌) ಮತ್ತು ಅನುಕಂಪ (ಕಂಪ್ಯಾಷನ್‌) ಎಂಬ ಈ ‘4ಸಿ’ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದುbr ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಸಲಹೆ ಮಾಡಿದ್ದಾರೆ.

‘ಕೊರೋನಾಗಿಂತಲೂ ಭಯಾನಕವಾದ ವೈರಸ್‌ಗಳು ಈ ಹಿಂದೆ ಬಂದು ಹೋಗಿವೆ. ಇದು ಅಂತಹ ಭಯಾನಕ ವೈರಸ್‌ ಅಲ್ಲ. ಕೊರೋನಾ ವಿರುದ್ಧ ಜಯಿಸುವ ಆತ್ಮವಿಶ್ವಾಸ ಎಲ್ಲರಲ್ಲೂ ಬರಬೇಕು. ಎರಡನೆಯದು ಕೇವಲ ಸರ್ಕಾರ ಮಾತ್ರ ಈ ಸೋಂಕಿನ ವಿರುದ್ಧ ಹೋರಾಡಿದರೆ ಸಾಲದು. ಸರ್ಕಾರದ ಜೊತೆ, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕರೂ ಸಹಭಾಗಿಗಳಾಗಬೇಕು. ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌ನಂತಹ ಸಂಸ್ಥೆಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಅಂತಹವರು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು. ಹೊಸಬರು ಜವಾಬ್ದಾರಿ ತೆಗೆದುಕೊಂಡರೆ ಮೂರು ತಿಂಗಳಿಂದ ನಿರಂತರ ಕಾರ್ಯನಿರ್ವಹಿಸುತ್ತಿರುವವರಿಗೆ ವೈದ್ಯರಿಗೆ ವಿಶ್ರಾಂತಿ ನೀಡಲು ಸಹಕಾರಿಯಾಗಲಿದೆ’ ಎಂದರು.

ಚೇತರಿಕೆ ಪ್ರಮಾಣ ಶೇ. 72, ಕೊರೋನಾ ಗೆದ್ದ ರಾಷ್ಟ್ರ ರಾಜಧಾನಿ ರಹಸ್ಯ

‘ಸ್ವಯಂ ಸೇವಕ’ರಿಗೆ ಆ್ಯಪ್‌:

ಕೊರೋನಾ ಸೋಂಕು ನಿಯಂತ್ರಣಕ್ಕೆ ಸ್ವಯಂ ಸೇವೆ ಸಲ್ಲಿಸಲು ಸಾರ್ವಜನಿಕರು ಮುಂದೆ ಬರಬೇಕು. ಅಂತಹವರ ನೋಂದಣಿಗೆ ಬುಧವಾರ ಆ್ಯಪ್‌ವೊಂದನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಸ್ವಯಂ ಸೇವೆಗೆ ಬರುವವರು ಆ್ಯಪ್‌ನಲ್ಲಿ ತಮ್ಮ ದೂರವಾಣಿ, ಶೈಕ್ಷಣಿಕ ಅರ್ಹತೆ, ಅನುಭವ ನೋಂದಾಯಿಸಿಕೊಳ್ಳಬೇಕು. ಅದರ ಆಧಾರದ ಮೇಲೆ ಅವರ ಸೇವೆಯನ್ನು ಸರ್ಕಾರ ಬಳಸಿಕೊಳ್ಳಲಿದೆ ಎಂದರು.

ಕರುನಾಡಲ್ಲಿ ಕೊರೋನಾ ಕುಣಿತ: ಇಲ್ಲಿದೆ ಮಂಗಳವಾರದ ಅಂಕಿ-ಅಂಶ

ಕೋವಿಡ್‌ ಬೆಡ್‌: ಇಂದು ಖಾಸಗಿ ಆಸ್ಪತ್ರೆಗಳಿಗೆ ಸಭೆ

ಬೆಂಗಳೂರು: ಕೋವಿಡ್‌ ಚಿಕಿತ್ಸೆಗೆ ತಮ್ಮ ಆಸ್ಪತ್ರೆಗಳಲ್ಲಿನ ಶೇ.50ರಷ್ಟುಹಾಸಿಗೆಗಳನ್ನು ಮೀಸಲಿಡುವಂತೆ ಸರ್ಕಾರ ಸೂಚಿಸಿದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿದ್ದರೂ ಈ ವರೆಗೆ ಎಷ್ಟುಹಾಸಿಗೆ ಮೀಸಲಿಟ್ಟಿದ್ದೇವೆ ಎಂಬ ನಿಖರ ಮಾಹಿತಿ ನೀಡಿಲ್ಲ. ಹಾಗಾಗಿ ಈ ಸಂಬಂಧ ಬುಧವಾರ ಮತ್ತೊಮ್ಮೆ ಸಭೆ ನಡೆಸಲಿದ್ದೇವೆ ಎಂದು ಕೆ. ಸುಧಾಕರ್‌ ಹೇಳಿದರು.

‘ಮುಖ್ಯಮಂತ್ರಿಗಳ ಸೂಚನೆಯಂತೆ ಬುಧವಾರ ಸಂಜೆ 4.30ಕ್ಕೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಯಲಿದೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ವಹಿಸಲಾಗಿತ್ತು. ಆದರೆ, ಅವರಿಗೆ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಾಗಾಗಿ ನಾನು ಮತ್ತು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇವೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್