ಕರುನಾಡಲ್ಲಿ ಕೊರೋನಾ ಕುಣಿತ: ಇಲ್ಲಿದೆ ಮಂಗಳವಾರದ ಅಂಕಿ-ಅಂಶ

By Suvarna News  |  First Published Jul 7, 2020, 8:45 PM IST

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಕೇಸ್ ಎಷ್ಟು? ಎಷ್ಟು ಸಾವು? ಎಷ್ಟು ಡಿಸ್ಚಾರ್ಜ್? ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳ ಪತ್ತೆಯಾಗಿ ಎನ್ನುವ ಅಂಕಿ-ಅಂಶ ಈ ಕೆಳಗಿನಂತಿದೆ ನೋಡಿ.


ಬೆಂಗಳೂರು, (ಜುಲೈ.07): ರಾಜ್ಯದಲ್ಲಿ ಕೊರೋನಾ ವೈರಸ್ ರಣಕೇಕೆ ಮೃದಂಗ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 1498 ಮಂದಿ ಕೊರೋನಾ ಅಟ್ಯಾಕ್ ಆಗಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ. ಅದರಲ್ಲೂ ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 800 ಪ್ರಕರಣಗಳು ಪತ್ತೆಯಾಗಿವೆ.

Tap to resize

Latest Videos

undefined

'ಎಲ್ಲರಿಗೂ ಕೊರೋನಾ ಬರಬಹುದು, ಭಯ ಪಡಬೇಡಿ'

ಇನ್ನು ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 15 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾಗೆ ಉಸಿರು ಚೆಲ್ಲಿದವರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ.

 ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಮಂಗಳವಾರ 571 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 11098ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 15297 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 45, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 5, ಶಿವಮೊಗ್ಗ 33, ಮಂಡ್ಯ29, ಉಡುಪಿ ಮತ್ತು ಹಾಸನ ತಲಾ 28, ಬಾಗಲಕೋಟೆ 26, ರಾಯಚೂರು 23, ವಿಜಯಪುರ 22, ಬೆಳಗಾವಿ 23, ತುಮಕೂರು16, ಕೊಡಗು14, ಯಾದಗಿರಿ10, ದಾವಣಗೆರೆ 06, ಕೋಲಾರ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಕೊಪ್ಪಳ ತಲಾ 6, ಗದಗ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 1 ಕೇಸ್ ಪತ್ತೆಯಾಗಿದೆ.

ಕೋವಿಡ್19 ಮಾಹಿತಿ: 7ನೇ ಜುಲೈ 2020

ಒಟ್ಟು ಪ್ರಕರಣಗಳು: 26,815
ಮೃತಪಟ್ಟವರು: 416
ಗುಣಮುಖರಾದವರು: 11,098
ಹೊಸ ಪ್ರಕರಣಗಳು: 1498

ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ. pic.twitter.com/E8PrMNhkVw

— CM of Karnataka (@CMofKarnataka)
click me!