ಕೆಎಂಎಫ್‌ನಿಂದ ಹೊಸ ದಾಖಲೆ: ದಸರಾ ಹಬ್ಬದಲ್ಲಿ 400 ಮೆಟ್ರಿಕ್‌ ಟನ್‌ ಸ್ವೀಟ್ಸ್‌ ಮಾರಾಟ

Published : Nov 09, 2023, 10:39 AM ISTUpdated : Nov 09, 2023, 10:41 AM IST
ಕೆಎಂಎಫ್‌ನಿಂದ ಹೊಸ ದಾಖಲೆ: ದಸರಾ ಹಬ್ಬದಲ್ಲಿ 400 ಮೆಟ್ರಿಕ್‌ ಟನ್‌ ಸ್ವೀಟ್ಸ್‌ ಮಾರಾಟ

ಸಾರಾಂಶ

ಕರ್ನಾಟಕದ ಹೆಮ್ಮೆಯ ಉದ್ಯಮವಾದ ಕರ್ನಾಟಕ ಹಾಲು ಒಕ್ಕೂಟದಿಂದ (KMF) ದಸರಾ ಹಬ್ಬದಲ್ಲಿ 400 ಮೆ.ಟನ್ ಸಿಹಿ ಪದಾರ್ಥ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ.

ಬೆಂಗಳೂರು (ನ.09): ಕರ್ನಾಟಕ ಸರ್ಕಾರಿ ಸಹಭಾಗಿತ್ವದ ಹೆಮ್ಮೆಯ ಉದ್ಯಮಗಳಲ್ಲಿ ಒಂದಾಗಿರುವ ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್‌) ದಸರಾ ಹಬ್ಬದಲ್ಲಿ 400 ಮೆಟ್ರಿಕ್‌ ಟನ್‌ಗೂ ಅಧಿಕ ಸಿಹಿ ಪದಾರ್ಥಗಳನ್ನು ಮಾರಾಟ ಮಾಡಲಾಗಿದೆ.

ಹೌದು, ರಾಜ್ಯದ ಹೆಮ್ಮೆಯ ಉದ್ಯಮವಾದ ಕೆಎಂಎಫ್‌ನಿಂದ ದಸರಾ ಹಬ್ಬದಲ್ಲಿ ದಾಖಲೆ ಮಟ್ಟದಲ್ಲಿ ಸಿಹಿ ಪದಾರ್ಥಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಕೆಎಂಎಫ್ ಸಿಹಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದಸರಾ ಹಬ್ಬದ ಸಮಯದಲ್ಲಿ ಹಾಲು ಒಕ್ಕೂಟದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಹಿ ಮಾರಾಟ ಮಾಡಲಾಗಿದೆ. ಅತಿ ಹೆಚ್ಚು ಸಿಹಿ ತಿನಿಸು ಮಾರಾಟ ಮಾಡಿ ನೂತನ‌ ದಾಖಲೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದುಪ್ಪಟ್ಟು ಅಂದರೆ 400 ಮೆಟ್ರಿಕ್ ಟನ್ ಸಿಹಿ ಮಾರಾಟ ಮಾಡಲಾಗಿದೆ.

ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸಿಕ್ತು ಕಂತೆ ಕಂತೆ ಡಾಲರ್‌ ನೋಟುಗಳು!

ಕೆಎಂಎಪ್‌ನ ಮೈಸೂರು ಪಾಕ್, ಧಾರವಾಡ ಪೇಡ ಸೇರಿದಂತೆ, ಗುಲಾಬ್‌ ಜಾಮೂನ್‌, ರಸಗುಲ್ಲಾ, ಹಲ್ವಾ, ಬಿಸ್ಕತ್ಸ್‌ ಸೇರಿದಂತೆ ನಾನಾ ಬಗೆಯ ಸಿಹಿ ತಿನಿಸುಗಳ ಮಾರಾಟದಲ್ಲಿ ಭಾರಿ ಹೆಚ್ಚಳವಾಗಿದೆ. ಪ್ರತಿವರ್ಷ 180ರಿಂದ 200 ಮೆಟ್ರಿಕ್ ಟನ್ ಸಿಹಿ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಈ ಬಾರಿ 400 ಮೆಟ್ರಿಕ್ ಟನ್ ಸಿಹಿ ಮಾರಾಟ ಮಾಡುವ ಮೂಲಕ ಕೆಎಂಎಫ್‌ ಹೊಸ ಮೈಲಿಗಲ್ಲಿನ ಇತಿಹಾಸ ಸೃಷ್ಟಿಸಿದೆ. ಇದರ ಬೆನ್ನಲ್ಲೆ ಬೇಸಿಗೆಗೆ ಹೊಸ ಉತ್ಪನ್ನಗಳನ್ನು ದಾಸ್ತಾನು ಮಾಡಲು ಚಿಂತನೆ ಮಾಡಿದೆ. ಜೊತೆಗೆ, ಹಾಲಿನ ಉತ್ಪಾದನೆ ಪ್ರಮಾಣದಲ್ಲೂ ಏರಿಕೆಯಾಗಿದ್ದು ಗ್ರಾಹಕರಿಗೆ ಉತ್ತಮ ಸಿಹಿ ತಿನಿಸುಗಳನ್ನು ಮಾರಾಟ ಮಾಡಲು ಕೆಎಂಎಫ್ ಸೂಕ್ತ ಸಿದ್ಧತೆಯನ್ನು ಮಾಡಿಕೊಂಡಿದೆ.

ದೀಪಾವಳಿ ಹಬ್ಬಕ್ಕೂ ಕೊಡುಗೆ ಕೊಟ್ಟ ಕೆಎಂಎಫ್: ದೀಪಾವಳಿಗೆ ನಂದಿನಿ ವತಿಯಿಂದ ಬಂಪರ್ ಕೊಡುಗೆ. ಸ್ವೀಟ್ಸ್ ಪ್ಯಾಕ್ ಗಳ ಬಲ್ಕ್ ಆರ್ಡರ್ ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ರಿಯಾಯಿತಿ ಕುರಿತು ಮಾಹಿತಿಗಾಗಿ ಸುನೀಲ್ ಕುಮಾರ್ - 9513998879 ಲಕ್ಷ್ಮೀನಾರಾಯಣ - 7411654033 ಇವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಲಾಗಿದೆ.

ಬೆಂಗಳೂರು (ನ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಪೊಲೀಸ್‌ ಇಲಾಖೆಯ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ಕೊಳಚೆ ನೀರು ನುಗ್ಗಿತ್ತು. ಇದರಿಂದ ನೂರಾರು ಬಂದೂಕುಗಳು, ತೋಪುಗಳು ಹಾಗೂ ಹೊಸ ಮಾದರಿಯ ಗನ್‌ಗಳು ನೀರಲ್ಲಿ ತೇಲಾಡುತ್ತಿದ್ದವು. ಇನ್ನು ಕೆಸರುಯುಕ್ತ ನೀರು ಶಸ್ತ್ರಾಗಾರದೊಳಗೆ ನುಗ್ಗಿದ್ದರಿಂದ ಬಂದೂಕಿನೊಳಗೆ ಮಣ್ಣು ನುಗ್ಗಿತ್ತು. ಹೀಗಾಗಿ, ಬಂದೂಕುಗಳನ್ನು ನೀರಿನಲ್ಲಿ ತೊಳೆದು ಸಂತೆಯಲ್ಲಿ ಮಾರಾಟಕ್ಕಿಡುವಂತೆ ಟಾರ್ಪಾಲಿನ ಮೇಲೆ ಒಣಗಿ ಹಾಕಲಾಗಿದೆ.

ಬೆಂಗಳೂರು ಪೊಲೀಸ್‌ ಇಲಾಖೆಯಿಂದ ಶಸ್ತ್ರಾಸ್ತ್ರಗಳ ಸಂತೆ : ಇವು ಮಾರಾಟಕ್ಕಲ್ಲ, ಒಣಗಿಸೋದಕ್ಕೆ ಮಾತ್ರ!

210ಕ್ಕೂ ಅಧಿಕ ಬಂದೂಕುಗಳಿಗೆ ಹಾನಿ: ಶಸ್ತ್ರಾಗಾರ ಸಂಗ್ರಹ ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್, ಎಕೆ47, 9 ಎಂಎಂ ಪಿಸ್ತೂಲ್,  ಪಂಪ್ ಆ್ಯಕ್ಷನ್ ಗನ್‌ಗಳು ಸೇರಿದಂತೆ ಒಟ್ಟು 210 ಶಸ್ತ್ರಾಸ್ತ್ರಗಳಿಗೆ ಹಾನಿಯುಂಟಾಗಿತ್ತು. ಜೊತೆಗೆ, ಮಳೆಯಲ್ಲಿ ತೇಲಿಹೋಗ್ತಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರೇ ಹಿಡಿದುಕೊಂಡು ರಕ್ಷಣೆ ಮಾಡಿದ್ದರು. ಹೀಗಾಗಿ, ಮಳೆಯಲ್ಲಿ ಸಂಪೂರ್ಣವಾಗಿ ಒದ್ದೆಯಾಗಿದ್ದ ವೆಪನ್‌ಗಳನ್ನು ಪೊಲೀಸರು ಸ್ವಚ್ಛಗೊಳಸಿ ಒಣಗಿಸಲು ಹಾಕಿದ್ದಾರೆ. ಇನ್ನು ಕೆಲವು ಬಂದೂಕಿನ ಒಳಗೆ ಮಣ್ಣು ಸೇರಿಕೊಂಡಿದ್ದು, ಎಲ್ಲವನ್ನು ನೀರಿನಲ್ಲಿ ಶುಚಿಗೊಳಿಸಿದ ಸಿಎಆರ್ ಸಿಬ್ಬಂದಿ ಬಿಸಿಲಲ್ಲಿ ಒಣಗಿಸುತ್ತಿದ್ದಾರೆ. ಇನ್ನು ಬಂದೂಕುಗಳನ್ನು ಒಣಗಿಸಲು ಹಾಕಿರುವ ದೃಶ್ಯಗಳನ್ನು ನೋಡಿದರೆ ಸೌತ್‌ ಸೂಡಾನ್‌, ಅಪ್ಘಾನಿಸ್ತಾನ ಸೇರಿದಂತೆ ಕೆಲವು ದೇಶಗಳಲ್ಲಿ ಬಂದೂಕನ್ನು ಮಾರುವ ಸಂತೆಗಳ ಮಾದರಿಯಲ್ಲಿ ಕಂಡುಬಂದಿದೆ. ಹೀಗಾಗಿ ಬೆಂಗಳೂರು ಪೊಲೀಸರು ಬಂದೂಕಿನ ಸಂತೆಯನ್ನು ಇಟ್ಟುಕೊಂಡಿದ್ದರೂ, ಅವು ಒಣಗಿಸಲು ಮಾತ್ರ ಮಾರಾಟಕ್ಕಲ್ಲ ಎಂದು ಹೇಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!