ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದ ವಿವಿಧ ಮಾದರಿಯ ಬಂದೂಕುಗಳ ಸಂತೆಯನ್ನು ಆಯೋಜಿಸದಂತೆ ಕಾಣುತ್ತಿದೆ. ಆದ್ರೆ, ಬಂದೂಕು ಮಾರಾಟಕ್ಕಲ್ಲ..
ಬೆಂಗಳೂರು (ನ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಪೊಲೀಸ್ ಇಲಾಖೆಯ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ಕೊಳಚೆ ನೀರು ನುಗ್ಗಿತ್ತು. ಇದರಿಂದ ನೂರಾರು ಬಂದೂಕುಗಳು, ತೋಪುಗಳು ಹಾಗೂ ಹೊಸ ಮಾದರಿಯ ಗನ್‌ಗಳು ನೀರಲ್ಲಿ ತೇಲಾಡುತ್ತಿದ್ದವು. ಇನ್ನು ಕೆಸರುಯುಕ್ತ ನೀರು ಶಸ್ತ್ರಾಗಾರದೊಳಗೆ ನುಗ್ಗಿದ್ದರಿಂದ ಬಂದೂಕಿನೊಳಗೆ ಮಣ್ಣು ನುಗ್ಗಿತ್ತು. ಹೀಗಾಗಿ, ಬಂದೂಕುಗಳನ್ನು ನೀರಿನಲ್ಲಿ ತೊಳೆದು ಸಂತೆಯಲ್ಲಿ ಮಾರಾಟಕ್ಕಿಡುವಂತೆ ಟಾರ್ಪಾಲಿನ ಮೇಲೆ ಒಣಗಿ ಹಾಕಲಾಗಿದೆ.
ಬೆಂಗಳೂರಿನ ಪೊಲೀಸರು ಬಟ್ಟೆ ಒಣಗಿಸುವಂತೆ ನೂರಾರು ವೆಪನ್‌ಗಳನ್ನು ಬಯಲಿನಲ್ಲಿ ಒಣಗಿಸಲಿಕ್ಕೆ ಹಾಕಿದ್ದಾರೆ. ಸಂತೆಯಲ್ಲಿ ಮಾರಾಟ ಮಾಡುವ ರೀತಿಯಲ್ಲಿಟ್ಟಿದ್ದಾರೆ ಬಂದೂಕುಗಳು ಕಂಡುಬರುತ್ತವೆ. ಆದರೆ, ಇವ್ಯಾವ ಬಂದೂಕುಗಳು ಕೂಡ ನಕಲಿಯಲ್ಲ, ಒಂದೇ ಏಟಿಗೆ ಉಸಿರುವ ನಿಲ್ಲಿಸುವ ಅಪಾಯಕಾರಿ ಬಂದೂಕುಗಳು ಆಗಿವೆ. ಇನ್ನು ಸೋಮವಾರ ಬೆಂಗಳೂರಲ್ಲಿ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ಮಣ್ಣು ಮಿಶ್ರಿತ ನೀರು ನುಗ್ಗಿತ್ತು.
ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸಿಕ್ತು ಕಂತೆ ಕಂತೆ ಡಾಲರ್ ನೋಟುಗಳು!
210ಕ್ಕೂ ಅಧಿಕ ಬಂದೂಕುಗಳಿಗೆ ಹಾನಿ: ಶಸ್ತ್ರಾಗಾರ ಸಂಗ್ರಹ ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್, ಎಕೆ47, 9 ಎಂಎಂ ಪಿಸ್ತೂಲ್, ಪಂಪ್ ಆ್ಯಕ್ಷನ್ ಗನ್‌ಗಳು ಸೇರಿದಂತೆ ಒಟ್ಟು 210 ಶಸ್ತ್ರಾಸ್ತ್ರಗಳಿಗೆ ಹಾನಿಯುಂಟಾಗಿತ್ತು. ಜೊತೆಗೆ, ಮಳೆಯಲ್ಲಿ ತೇಲಿಹೋಗ್ತಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರೇ ಹಿಡಿದುಕೊಂಡು ರಕ್ಷಣೆ ಮಾಡಿದ್ದರು. ಹೀಗಾಗಿ, ಮಳೆಯಲ್ಲಿ ಸಂಪೂರ್ಣವಾಗಿ ಒದ್ದೆಯಾಗಿದ್ದ ವೆಪನ್‌ಗಳನ್ನು ಪೊಲೀಸರು ಸ್ವಚ್ಛಗೊಳಸಿ ಒಣಗಿಸಲು ಹಾಕಿದ್ದಾರೆ. ಇನ್ನು ಕೆಲವು ಬಂದೂಕಿನ ಒಳಗೆ ಮಣ್ಣು ಸೇರಿಕೊಂಡಿದ್ದು, ಎಲ್ಲವನ್ನು ನೀರಿನಲ್ಲಿ ಶುಚಿಗೊಳಿಸಿದ ಸಿಎಆರ್ ಸಿಬ್ಬಂದಿ ಬಿಸಿಲಲ್ಲಿ ಒಣಗಿಸುತ್ತಿದ್ದಾರೆ. ಇನ್ನು ಬಂದೂಕುಗಳನ್ನು ಒಣಗಿಸಲು ಹಾಕಿರುವ ದೃಶ್ಯಗಳನ್ನು ನೋಡಿದರೆ ಸೌತ್ ಸೂಡಾನ್, ಅಪ್ಘಾನಿಸ್ತಾನ ಸೇರಿದಂತೆ ಕೆಲವು ದೇಶಗಳಲ್ಲಿ ಬಂದೂಕನ್ನು ಮಾರುವ ಸಂತೆಗಳ ಮಾದರಿಯಲ್ಲಿ ಕಂಡುಬಂದಿದೆ. ಹೀಗಾಗಿ ಬೆಂಗಳೂರು ಪೊಲೀಸರು ಬಂದೂಕಿನ ಸಂತೆಯನ್ನು ಇಟ್ಟುಕೊಂಡಿದ್ದರೂ, ಅವು ಒಣಗಿಸಲು ಮಾತ್ರ ಮಾರಾಟಕ್ಕಲ್ಲ ಎಂದು ಹೇಳಬಹುದು.