ಕರ್ನಾಟಕದಲ್ಲಿ ಟ್ಯಾಕ್ಸಿಗಳ ದರ ಸುಲಿಗೆಗೆ ಬ್ರೇಕ್, ಮೀಟರ್ ಕಡ್ಡಾಯಕ್ಕೆ ಮುಂದಾದ ಸಾರಿಗೆ ಇಲಾಖೆ

Published : Sep 07, 2026, 10:59 AM IST
Cabs

ಸಾರಾಂಶ

ಬೆಂಗಳೂರಿನಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಟ್ಯಾಕ್ಸಿ ಮಾಲೀಕರು ನಡೆಸುತ್ತಿದ್ದ ಮನಸೋಇಚ್ಛೆ ದರ ವಸೂಲಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ನಿಯಮವು ಹೊಸ ವಾಹನ ನೋಂದಣಿ ಮತ್ತು ಹಳೆಯ ವಾಹನಗಳ ಎಫ್‌ಸಿ ನವೀಕರಣಕ್ಕೂ ಅನ್ವಯವಾಗಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಕಡೆಗಳಲ್ಲಿರುವ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು ಹಾಗೂ ಕೆಲ ಟ್ಯಾಕ್ಸಿ ಮಾಲೀಕರು ಪ್ರಯಾಣಿಕರಿಂದ ಮನಸೋಇಚ್ಛೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಸಂಚರಿಸುವ ಎಲ್ಲಾ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸಾರಿಗೆ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಬೆಳಗಿನ ಜಾವ, ಪೀಕ್ ಅವರ್ ಹಾಗೂ ಬೇಡಿಕೆಗೆ ತಕ್ಕಂತೆ ಅಗ್ರಿಗೇಟರ್ ಕಂಪನಿಗಳು ಮತ್ತು ವಾಹನ ಸವಾರರು ಅನಿಯಮಿತ ದರ ವಸೂಲಿ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಅನ್ಯಾಯವನ್ನು ತಡೆಯಲು ಸಾರಿಗೆ ಇಲಾಖೆಯು 'ಒನ್ ಸಿಟಿ, ಒನ್ ಫೇರ್' (ಒಂದೇ ನಗರ, ಒಂದೇ ದರ) ನಿಯಮವನ್ನು ಜಾರಿಗೆ ತಂದಿತ್ತಾದರೂ, ಅದನ್ನು ಯಾವುದೇ ಕಂಪನಿಗಳು ಸರಿಯಾಗಿ ಪಾಲಿಸದೆ ನಿಯಮ ಉಲ್ಲಂಘಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಈಗ ಸಾರಿಗೆ ಇಲಾಖೆಯು ಕಟ್ಟುನಿಟ್ಟಿನ ನಿಯಮ ರೂಪಿಸಿದೆ.

ಸುತ್ತೋಲೆಯ ಪ್ರಮುಖ ಮುಖ್ಯಾಂಶಗಳು:

ಎಫ್‌ಸಿ ಮತ್ತು ನವೀಕರಣಕ್ಕೆ ಮೀಟರ್ ಕಡ್ಡಾಯ: ನೂತನ ಕ್ಯಾಬ್‌ಗಳ ನೋಂದಣಿ (Registration) ಹಾಗೂ ಹಳೆಯ ಕ್ಯಾಬ್‌ಗಳ ಎಫ್‌ಸಿ (Fitness Certificate - FC) ನವೀಕರಣ ಮಾಡಬೇಕಿದ್ದರೂ ಫೇರ್ ಮೀಟರ್ ಇರುವುದು ಇನ್ಮುಂದೆ ಕಡ್ಡಾಯವಾಗಿದೆ. ಮೀಟರ್ ಇಲ್ಲದಿದ್ದರೆ ಎಫ್‌ಸಿ ನವೀಕರಿಸದಿರಲು ನಿರ್ಧರಿಸಲಾಗಿದೆ.

ಎಲ್ಲಾ ಟ್ಯಾಕ್ಸಿಗಳಿಗೂ ಅನ್ವಯ: ಆಪ್ ಆಧಾರಿತ (App-based) ಅಗ್ರಿಗೇಟರ್ ಕ್ಯಾಬ್‌ಗಳು, ಕಾಂಟ್ರಾಕ್ಟ್ ಕ್ಯಾರೇಜ್‌ಗಳು ಮತ್ತು ಸ್ವತಂತ್ರ ಮೋಟಾರ್ ಕ್ಯಾಬ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಟ್ಯಾಕ್ಸಿಗಳಿಗೂ ಈ ನಿಯಮ ಅನ್ವಯಿಸಲಿದೆ.

ಕಾನೂನು ನಿಯಮಗಳ ಉಲ್ಲೇಖ:

ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 (ನಿಯಮ 129) ರ ಪ್ರಕಾರ ಒಪ್ಪಂದದ ಸಾಗಣೆ ವಾಹನಗಳಲ್ಲಿ ಟ್ಯಾಕ್ಸಿ ಮೀಟರ್ ಅಳವಡಿಸುವುದು ಕಡ್ಡಾಯ.

ಕರ್ನಾಟಕ ಆನ್ ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು, 2016 (ನಿಯಮ 7D) ರ ಪ್ರಕಾರ ಆಪ್ ಆಧಾರಿತ ರೈಡ್ ಅಗ್ರಿಗೇಟರ್ ವಾಹನಗಳಲ್ಲಿ ಡಿಜಿಟಲ್ ಫೇರ್ ಮೀಟರ್ ಇರುವುದು ಕಡ್ಡಾಯವಾಗಿದೆ.

ರಾಜ್ಯದಲ್ಲಿ ಸರ್ಕಾರ ನಿಗದಿಪಡಿಸಿದ ದರಗಳಲ್ಲೇ ಸಾರಿಗೆ ಸೇವೆ ನೀಡಬೇಕಿದ್ದು, ಅಗತ್ಯ ಮೀಟರ್‌ಗಳಿಲ್ಲದೆ ಅನಧಿಕೃತವಾಗಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ತಕ್ಷಣವೇ ಜಪ್ತಿ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ, ಜಂಟಿ, ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (RTO) ಸಾರಿಗೆ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!
Karnataka News Live: ಕರ್ನಾಟಕದಲ್ಲಿ ಟ್ಯಾಕ್ಸಿಗಳ ದರ ಸುಲಿಗೆಗೆ ಬ್ರೇಕ್, ಮೀಟರ್ ಕಡ್ಡಾಯಕ್ಕೆ ಮುಂದಾದ ಸಾರಿಗೆ ಇಲಾಖೆ