
ಬೆಂಗಳೂರು (ಜು.25) ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಐಷಾರಾಮಿ ಕಾರುಗಳು ಸಂಖ್ಯೆ ತುಸು ಹೆಚ್ಚೇ ಇದೆ. ಒಮ್ಮೆ ಕಾರು ಖರೀದಿಸಿದ ಬಳಿಕ ಐಷಾರಾಮಿ ಕಾರುಗಳಲ್ಲಿ ಝೂಮ್ ಆಗಿ ತಿರುಗಾಡುವ ಕೆಲವರು ತೆರಿಗೆ ಬಾಕಿ ಉಳಿಸಿಕೊಳ್ಳುತ್ತಾರೆ. ಒಂದು ಕಾರಿನ ತೆರಿಗೆಯಲ್ಲಿ ಹಲವು ಐಷಾರಾಮಿ ಕಾರುಗಳನ್ನು ಚಲಾಯಿಸುತ್ತಾರೆ. ಹೀಗೆ ತೆರಿಗೆ ಬಾಕಿ ಉಳಿಸಿಕೊಂಡು ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಕಾರು ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ಬಿಸಿ ಮುಟ್ಟಿಸುತ್ತಿದ್ದಾರೆ. ಸತತ ದಾಳಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಐಷಾರಾಮಿ ಕಾರು ಮಾಲೀಕನೊಬ್ಬ ತನ್ನ ಎರಡು ಕಾರಿಗೆ ಬಾಕಿ ಉಳಿಸಿಕೊಂಡಿದ್ದ ಬರೋಬ್ಬರಿ 98 ಲಕ್ಷ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ.
ಫೆರಾರಿ, ಮರ್ಸಿಡಿಸ್ ಬೆಂಜ್ ಕಾರಿನ ತೆರಿಗೆ ಪಾವತಿ
ಸೂಪರ್ ಕಾರು ಫೆರಾರಿ ಹಾಗೂ ಲಕ್ಷುರಿ ಕಾರು ಮರ್ಸಿಡಿಸ್ ಬೆಂಜ್ ಎರಡು ಕಾರುಗಳನಲ್ಲಿ ಓಡಾತುತ್ತಿದ್ದ ಶ್ರೀಮಂತ ಉದ್ಯಮಿ ತೆರಿಗೆ ಮಾತ್ರ ಬಾಕಿ ಉಳಿಸಿಕೊಂಡಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಇಷ್ಟೇ ಅಲ್ಲ ಕಾರು ಜಪ್ತಿ ಮಾಡುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಫೆರಾರಿ ಕಾರಿನ ಬಾಕಿ ಉಳಿಸಿಕೊಂಡಿದ್ದ 61,94,494 ರೂಪಾಯಿ ಹಾಗೂ ಮರ್ಸಿಡಿಸ್ ಬೆಂಜ್ ಕಾರಿನ ಬಾಕಿ ಉಳಿಸಿಕೊಂಡಿದ್ದ 37,03,444 ತೆರಿಗೆ ಪಾವತಿಸಿದ್ದಾರೆ.
ಜಪ್ತಿಗೆ ಮುಂದಾಗಿದ್ದ ಅಧಿಕಾರಿಗಳ ಬಳಿ ಸಮಯ ಪಡೆದುಕೊಂಡಿದ್ದ ಮಾಲೀಕ
98 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಬಾಕಿ ಉಳಿಸಿಕೊಂಡಿರುವ ಮೊತ್ತ ಹೆಚ್ಚಿದ್ದ ಕಾರಣ ಅಧಿಕಾರಿಗಳು ಎರಡು ಕಾರು ಜಪ್ತಿ ಮಾಡಲು ಮುಂದಾಗಿದ್ದರು. ಈ ವೇಳೆ ಒಂದು ದಿನ ಕಾಲಾವಕಾಶ ನೀಡುವಂತೆ ಮಾಲೀಕ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅಧಿಕಾರಿಗಳು ಒಂದು ದಿನದ ಕಾಲಾವಕಾಶ ನೀಡಿದ್ದರು. ಇದರಂತೆ ಮಾಲೀಕ ಎರಡು ಕಾರುಗಳ ಒಟ್ಟು 98,97,938 ರೂಪಾಯಿ ಪಾವತಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ