
ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧೆಡೆ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿ ಒಟ್ಟು ₹31.11 ಕೋಟಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1.ಎಸ್.ಎಲ್.ರಾಜಣ್ಣ (ಕೆಎಚ್‌ಬಿ, ನಗರ ಯೋಜನೆ ಹೆಚ್ಚುವರಿ ನಿರ್ದೇಶಕ, ಕಾವೇರಿ ಭವನ ಬೆಂಗಳೂರು):
5 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 3 ಎಕರೆ ಕೃಷಿ ಜಮೀನು, ₹40 ಸಾವಿರ, ₹70 ಲಕ್ಷ ಮೌಲ್ಯದ ಚಿನ್ನಾಭರಣ, ₹17 ಲಕ್ಷ ಮೌಲ್ಯದ ವಾಹನ, ₹20 ಲಕ್ಷ ಬ್ಯಾಂಕ್ ಉಳಿತಾಯ ಸೇರಿ ಒಟ್ಟು ₹4.97 ಕೋಟಿ ಮೌಲ್ಯದ ಆಸ್ತಿ.
2. ಎಂ.ಬಿ.ಉದಯ ಕುಮಾರ್ (ಸಹಾಯಕ ಕಾರ್ಯಪಾಲಕ ಅಭಿಯಂತರ, ಬೆಸ್ಕಾಂ, ಸಿ-07 ಉಪ ವಿಭಾಗ, ಯಲಹಂಕ ಬೆಂಗಳೂರು):
4 ಕಡೆ ದಾಳಿ, 10 ನಿವೇಶನ, 1 ವಾಸದ ಮನೆ, 1 ಎಕರೆ ಕೃಷಿ ಜಮೀನು, ₹1.83 ಲಕ್ಷ, ₹30.29 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹33 ಲಕ್ಷ ಮೌಲ್ಯದ ವಾಹನ, ₹21 ಲಕ್ಷ ಬ್ಯಾಂಕ್ ಠೇವಣಿ, ₹1.80 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತು ಸೇರಿ ಒಟ್ಟು ₹3.54 ಕೋಟಿ ಮೌಲ್ಯದ ಆಸ್ತಿ.
3.ಪಿ.ಎನ್.ಹರ್ಷವರ್ಧನ (ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ):
4 ಕಡೆ ದಾಳಿ, 4 ನಿವೇಶನ, 2 ವಾಸದ ಮನೆ, ₹3 ಸಾವಿರ, ₹30 ಲಕ್ಷ ಮೌಲ್ಯದ ಚಿನ್ನ, ₹25 ಲಕ್ಷ ಮೌಲ್ಯದ ವಾಹನ, ₹25 ಲಕ್ಷ ಮೌಲ್ಯದ ಬೆಲೆಬಾಳುವ ಇತರೆ ವಸ್ತು ಸೇರಿ ಒಟ್ಟು ₹4.85 ಕೋಟಿ ಮೌಲ್ಯದ ಆಸ್ತಿ.
4.ಸಿದ್ದೇಶ್ವರ ಎನ್.ಹೆಬ್ಬಾಳ (ಮುಖ್ಯ ತಾಂತ್ರಿಕ ಅಭಿಯಂತರ, ಎನ್‌ಡಬ್ಲ್ಯೂಕೆಆರ್‌ಟಿಸಿ, ಹುಬ್ಬಳ್ಳಿ)
3 ಕಡೆ ದಾಳಿ, 1 ನಿವೇಶನ, 2 ವಾಸದ ಮನೆ, ₹37 ಲಕ್ಷ ನಗದು, ₹1.23 ಕೋಟಿ ಮೌಲ್ಯದ ಚಿನ್ನಾಭರಣಗಳು, ₹30.16 ಲಕ್ಷ ಮೌಲ್ಯದ ವಾಹನಗಳು, ₹20.14 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹3.76 ಕೋಟಿ ಮೌಲ್ಯದ ಆಸ್ತಿ.
5.ಸಣ್ಣ ಕೆಂಚಪ್ಪ (ಅಧೀಕ್ಷಕ ಅಭಿಯಂತರ, ಕೆಆರ್‌ಡಿಎಲ್, ಬೆಳಗಾವಿ):
5 ಕಡೆ ದಾಳಿ, 3 ವಾಸದ ಮನೆ, 31 ಎಕರೆ ಕೃಷಿ ಜಮೀನು, ₹1.67 ಲಕ್ಷ ನಗದು, ₹54.29 ಲಕ್ಷ ಮೌಲ್ಯದ ಚಿನ್ನ, ₹20.60 ಲಕ್ಷ ಮೌಲ್ಯದ ವಾಹನ, ₹20.60 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹2.97 ಕೋಟಿ ಮೌಲ್ಯದ ಆಸ್ತಿ.
6.ಎಲ್.ಎ.ಕೃಷ್ಣ ನಾಯಕ್ (ಕಾರ್ಯದರ್ಶಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ):
4 ಕಡೆ ದಾಳಿ, 7 ನಿವೇಶನ, 3 ವಾಸದ ಮನೆ, 2 ಎಕರೆ ಕೃಷಿ ಜಮೀನು, ₹6.96 ಲಕ್ಷ ನಗದು, ₹43.23 ಲಕ್ಷ ಮೌಲ್ಯದ ಚಿನ್ನ, ₹33.75 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು ₹2.70 ಕೋಟಿ ಮೌಲ್ಯದ ಆಸ್ತಿ.
7. ಮಾಣಿಕ್ ಎಸ್.ಕನಕಟ್ಟೆ (ಅಧೀಕ್ಷಕ ಅಭಿಯಂತರ, ಲೋಕೋಪಯೋಗಿ ಇಲಾಖೆ, ಕಲಬುರಗಿ):
5 ಕಡೆ ದಾಳಿ, 5 ನಿವೇಶನಗಳು, 3 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, ₹70 ಲಕ್ಷ ಮೌಲ್ಯದ ಕೃಷಿ ಜಮೀನು, ₹1.26 ಲಕ್ಷ ನಗದು, ₹37.92 ಲಕ್ಷ ಮೌಲ್ಯದ ಚಿನ್ನ, ₹49.15 ಲಕ್ಷ ಮೌಲ್ಯದ ವಾಹನ, ₹50 ಲಕ್ಷ ಬ್ಯಾಂಕ್ ಉಳಿತಾಯ, ₹16 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹4.68 ಕೋಟಿ ಮೌಲ್ಯದ ಆಸ್ತಿ.
8.ಕೆ.ಎಸ್.ಮೋಹನ್ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ, ಜಿಂಕೆವನ, ಚಿಕ್ಕಮಗಳೂರು ಜಿಲ್ಲೆ):
5 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು, ₹1.19 ಲಕ್ಷ ನಗದು, ₹5.16 ಲಕ್ಷ ಮೌಲ್ಯದ ಚಿನ್ನ, ₹5 ಲಕ್ಷ ಮೌಲ್ಯದ ವಾಹನ, ₹5 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹3.62 ಕೋಟಿ ಮೌಲ್ಯದ ಆಸ್ತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ