* ರಾಜ್ಯದಲ್ಲಿ ಕೊರೋನಾ ಕೇಸ್ ಗಣನೀಯ ಇಳಿಕೆ
* ಎರಡನೇ ಹಂತದ ಅಲ್ ಲಾಕ್ ಗೆ ಸರ್ಕಾರದ ಚಿಂತನೆ
* ಶನಿವಾರ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಿಎಂ ಸಭೆ
* ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ ತೀರ್ಮಾನ
ಬೆಂಗಳೂರು(ಜೂ. 17) ಎರಡನೇ ಹಂತದ ಅನ್ ಲಾಕ್ ಮಾಡುವ ಬಗ್ಗೆ ಶನಿವಾರ ಸಚಿವರ ಮತ್ತು ಅಧಿಕಾರಿಗಳ ಜೊತೆ ಸಭೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಶನಿವಾರ ಸಂಜೆ ಕೋವಿಡ್ ಉಸ್ತುವಾರಿ ಹೊತ್ತಿರುವ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲು ಸರ್ಕಾರದ ನಿರ್ಧಾರ ಮಾಡಿಕೊಂಡಿದೆ.
undefined
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಯಾವಾಗ ಸಿಗುತ್ತದೆ?
ಪಾಸಿಟಿವಿಟಿ ರೇಟ್ 5 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆಗೆ ಸರ್ಕಾರ ಚಿಂತನೆ ಮಾಡಿಕೊಂಡಿದೆ. ಜೊತೆಗೆ 11 ಜಿಲ್ಲೆಗಳಿಗೆ ವಿಧಿಸಿರುವ ನಿರ್ಬಂಧ ಮುಂದುವರೆಸಬೇಕಾ ಬೇಡ್ವಾ ಎಂಬುದರ ಬಗ್ಗೆ ಚರ್ಚೆಯಾಗಲಿದೆ.
11 ಜಿಲ್ಲೆಗಳಲ್ಲಿ ಕೋವಿಡ್ ಕೇಸ್ ಕಡಿಮೆಯಾದ್ರೂ ಪಾಸಿಟಿವಿಟಿ ರೇಟ್ 5 ಕ್ಕಿಂತ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಈಗಿರುವ ನಿಯಮಗಳನ್ನು ಮುಂದುವರಿಸ ಬೇಕಾ? ಎಂಬುದರ ಬಗ್ಗೆ ಚರ್ಚೆಯಾಗಲಿದೆ. ಎರಡನೇ ಹಂತದ ಅನ್ ಲಾಕ್ ನಲ್ಲಿ ಯಾವುದೆಲ್ಲ ಸೆಕ್ಟರ್ ಗಳಿಗೆ ವಿನಾಯ್ತಿ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಸದ್ಯ ಎರಡು ಗಂಟೆಯತನಕ ವಿರುವ ವಿನಾಯಿತಿ ಸಮಯವನ್ನ ಸಂಜೆತನಕವೂ ವಿಸ್ತರಿಸುವ ಸಾಧ್ಯತೆ ಇದೆ. ಒಂದು ವೇಳೆ ಶನಿವಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ.. ಸೋಮವಾರ ನಡೆಯುವ ಸಚಿವ ಸಂಪುಟದಲ್ಲಿ ಅನ್ ಲಾಕ್ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.