ಲೋಡ್‌ ಶೆಡ್ಡಿಂಗ್‌ ಆರಂಭ, ಕತ್ತಲೆಯಲ್ಲಿ ಮುಳುಗಲಿದೆ ಕರ್ನಾಟಕ: ಗೃಹ ಸಚಿವ ಪರಮೇಶ್ವರ್‌

By Sathish Kumar KH  |  First Published Aug 15, 2023, 12:18 PM IST

ರಾಜ್ಯದಲ್ಲಿ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಕಡಿಮೆಯಾಗಿದ್ದು, ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ವಿದ್ಯುತ್‌ ಪೂರೈಕೆ ಮ್ಯಾನೇಜ್‌ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.


ತುಮಕೂರು (ಆ.15): ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯ ಸೇರಿದಂತೆ ವಿವಿಧೆಡೆ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ವಿದ್ಯುತ್‌ ಪೂರೈಕೆಯನ್ನು ಮ್ಯಾನೇಜ್‌ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ, ಮಾಧ್ಯಮಗಳೊಂದಿಗೆ ನಡೆಸಿದ ಸುದ್ದೊಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಕೆಲವು ಕಡೆ ಲೋಡ್ ಶೆಡ್ಡಿಂಗ್ ಮಾಡಿ ಮ್ಯಾನೇಜ್ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. ಮುಂದುವರೆದು, ರಾಜ್ಯದ 5 ರಿಂದ 11 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ನಮ್ಮ  ಜಿಲ್ಲೆಯಲ್ಲಿ ಶೇ.35 ಬಿತ್ತನೆಯಾಗಿದೆ.  ಅಂಕಿ ಅಂಶ ತರಿಸಿಕೊಂಡು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುತ್ತೇವೆ ಎಂದು ಸುಳಿವು ನೀಡಿದರು.

Tap to resize

Latest Videos

ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯ ದಿನಾಚರಣೆ ಭಾಷಣದ ಹೈಲೆಟ್ಸ್‌..! ಮೆಟ್ರೋ ವಿಸ್ತರಣೆ, ನೈತಿಕ ಪೊಲೀಸ್‌ಗಿರಿ ಕಡಿವಾಣ

ಎಚ್‌ಎಎಲ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ: ರಾಜ್ಯದಲ್ಲಿ ದೇಶದಲ್ಲಿ ಅನೇಕ ಘಟನಾವಳಿಗಳು ನಡೆದಿವೆ. ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು, ಸಂವಿಧಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಇದು ಈ ಸ್ವತಂತ್ರ ದಿನಾಚರಣೆ ಭಾಗವಾಗಿ ಕಾಣುತ್ತಿದೆ. ಸ್ಥಳೀಯರಿಗೆ ಎಚ್.ಎ.ಎಲ್ ನಲ್ಲಿ ಉದ್ಯೋಗ ಆದ್ಯತೆ‌ ನೀಡುವಂತೆ ಸೂಚನೆ ನೀಡಿದ್ದೇನೆ. ನೇಮಕಾತಿ ಪರೀಕ್ಷೆಯಲ್ಲಿ ಹಗರಣ ಸಾಬೀತಾದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದಿತ್ತು. ಆದ್ದರಿಂದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯ್ತು ಎಂದು ಮಾಹಿತಿ ನೀಡಿದರು.

ತುಮಕೂರು ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಒಕ್ಕೂರಲ ಒತ್ತಾಯ: ಅಂತರಾಷ್ಟ್ರೀಯ ಮಟ್ಟದ‌ ವಿಮಾನ ನಿಲ್ದಾಣ ಮಾಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಚೆನ್ನೈ- ಮುಂಬೈ ಇಂಡ್ರಸ್ಟ್ರೀಯಲ್ ಕಾರಿಡಾರ್ ಗೆ ರೈತರು ಭೂಮಿ ಕಳೆದುಕೊಳ್ಳುವ ವಿಚಾರವಾಗಿ ಮಾತನಾಡಿ, ಅಭಿವೃದ್ದಿ ಮಾಡೊದು ಒಂದು‌ ಭಾಗ, ರೈತರು ಭೂಮಿ ಕಳೆದುಕೊಳ್ಳುವುದು ಮತ್ತೊಂದು ಭಾಗವಾಗಿದೆ. ರೈತರಿಗೆ ಸಮರ್ಪಕವಾದ ಪರಿಹಾರ ನೀಡಲಾಗುವುದು.  ತುಮಕೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಜಿಲ್ಲೆಯ ಶಾಸಕರು ಸಿಎಂಗೆ ಒತ್ತಡ ಹೇರಿದ್ದೇವೆ. ಕೊಬ್ಬರಿಗೆ ರಾಜ್ಯ ಸರ್ಕಾರ 1,250 ಬೆಂಬಲ‌ ಘೋಷಣೆ ಮಾಡಿದ್ದೇವೆ. ಖರೀದಿ ಬೆಲೆ 11 ಸಾವಿರದವರೆಗೂ ಇದೆ. ಹೀಗಾಗಿ ಕೊಬ್ಬರಿ  ಬೆಂಬಲ‌ಬೆಲೆ 13 ಸಾವಿರದವರೆಗೂ ಆಗುತ್ತೆದೆ. ಕೇಂದ್ರ ಸರ್ಕಾರ 3,500  ನೀಡಿದ್ರೆ,‌ ರೈತರಿಗೆ ಅನುಕೂಲ ಆಗುತ್ತದೆ. ಅವರು ಮನಸು ಮಾಡಬೇಕು ಎಂದರು. 

77ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯಪಾಲರ ಸಂದೇಶ: 5 ಗ್ಯಾರಂಟಿ ಬಗ್ಗೆ ಶ್ಲಾಘನೆ

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ಬಂದಿದೆ: ಮಂಗಳೂರಿನಲ್ಲಿ ಆಂಟಿ ಕಮ್ಯೂನಲ್ ವಿಂಗ್ ಸ್ಥಾಪನೆ ಮಾಡಲಾಗಿದೆ. ಮಂಗಳೂರಿನಲ್ಲಿ ಈ ಬಗ್ಗೆ ತೀವ್ರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸ್ಥಾಪನೆ ಮಾಡಿದ್ದೇವೆ. ನೈತಿಕ ಪೊಲೀಸ್ ಗಿರಿ ಅಲ್ಲಿ ಹೆಚ್ಚಿತ್ತು. ಈಗ ನೈತಿಕ‌ ಪೊಲೀಸ್ ಗಿರಿ ನಿಯಂತ್ರಣಕ್ಕೆ ಬಂದಿದೆ. ಅಗತ್ಯ ಬಿದ್ದರೆ ವಿಸ್ತರಣೆ ಮಾಡುತ್ತೇವೆ. ಈಗ ನೈತಿಕ ಪೊಲೀಸ್ ಗಿರಿ ತುಮಕೂರಿನಲ್ಲಿ ಇಲ್ಲ ಎಂದು ಮಾಹಿತಿ ನೀಡಿದರು. 

click me!