
ಶಿವಮೊಗ್ಗ (ಮಾ.29): ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗಿದೆ. ರಾಜಕೀಯ ನಾಯಕರುಗಳು ಸರ್ಕಾರಿ ಕಾರುಗಳನ್ನು ನಿಂತ ಸ್ಥಳದಲ್ಲಿಯೇ ತೊರೆದು ಖಾಸಗಿ ಕಾರುಗಳನ್ನು ಏರಿ ಪ್ರಯಾಣ ಮಾಡಿದ್ದರೆ, ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಕೂಡ ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಶಿವಮೊಗ್ಗದಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶವಮೊಗ್ಗದ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಿಐ ಅಂಜನ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಚುನಾವಣೆ ನಡೆಯುವ ರಾಜ್ಯದಲ್ಲಿ ಚುನಾವಣೆ ಎಷ್ಟು ಪ್ರಮುಖವೋ, ಚುನಾವಣೆ ನೀತಿ ಸಂಹಿತೆಯೂ ಅಷ್ಟೇ ಪ್ರಮುಖ. ನೀತಿ ಸಂಹಿತೆಯ ಸಮಯದಲ್ಲಿ ಚುನಾವಣಾ ಆಯೋಗದೊಂದಿಗೆ ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 2400 ವಿಚಕ್ಷಣ ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿ ತಾಲೂಕಾ ಹಂತಗಳಲ್ಲೂ ಗರಿಷ್ಠ ಮಟ್ಟದ ತಪಾಸಣೆ ಮಾಡಲಾಗುತ್ತದೆ.
ಕಳೆದ ಮೂರು ಅವಧಿಯ ಸಿಎಂಗಳ ಕೊನೆಯ ಕಾರ್ಯಕ್ರಮ ರದ್ದು: ವಿಶೇಷತೆಗೆ ಸಾಕ್ಷಿಯಾದ ಕೊಪ್ಪಳ..!
ಮಠಕ್ಕೆ ಶಿಫ್ಟ್ ಆದ ಅಡಿಗೆ: ಇನ್ನೊಂದೆಡೆ ನೀತಿ ಸಂಹಿತೆ ಜಾರಿಯಾಗ್ತಿದ್ದಂತೆ ಕಾರ್ಯಕ್ರಮಕ್ಕೆ ತಯಾರಾಗಿದ್ದ ಅಡಿಗೆ ಮಠಕ್ಕೆ ಶಿಫ್ಟ್ ಆಗಿದೆ. ಡಿಜಿಟಲ್ ಸಮಾವೇಶಕ್ಕಾಗಿ ಗೋಧಿ ಹುಗ್ಗಿ ಹಾಗ ಅನ್ನಸಾರು ಸಿದ್ಧವಾಗಿತ್ತು ಗದಗ ನಗರದ ಅಂಬೇಡ್ಕರ್ ಭವನದಲ್ಲಿ ಡಿಜಿಟಲ್ ಸಮಾವೇಶ ಆಯೋಜನೆಯಾಗಿತ್ತು.
ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು..!
ಸಮಾವೇಶಕ್ಕೆ ಆಗಮಿಸಿದ್ದ ನೂರಾರು ಕಾರ್ಯಕರ್ತರಿಗೆ ಭೋಜನ ಸಿದ್ಧವಾಗಿತ್ತು. ಈ ವೇಳೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಊರ ಮಠಕ್ಕೆ ಇದನ್ನು ರವಾನೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ