'ನೀವು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ..' ಭೂಮಿ ನೀಡಲ್ಲ ಎಂದ ರೈತರ ಮೇಲೆ ಡಿಕೆಶಿ ಗರಂ!

Published : Sep 04, 2025, 06:55 PM IST
DK shivakumar on farmer

ಸಾರಾಂಶ

ರಾಮನಗರದಲ್ಲಿ 9600 ಎಕರೆ ಭೂಸ್ವಾಧೀನ ವಿಚಾರದಲ್ಲಿ ರೈತರ ಪ್ರತಿಭಟನೆ ವೇಳೆ ಡಿಕೆ ಶಿವಕುಮಾರ್ ರೈತರ ಮೇಲೆ ಗರಂ ಆದ ಘಟನೆ ನಡೆದಿದೆ. 70% ಜನ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ರಾಮನಗರ (ಸೆ.4): ರಾಜ್ಯದಲ್ಲಿ ಭೂಸ್ವಾಧೀನ ವಿಷಯವು ಮತ್ತೆ ತೀವ್ರ ಚರ್ಚೆಗೆ ಗುರಿಯಾಗಿದೆ. ಉದ್ಯಮಕ್ಕಾಗಿ 9600 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೈತರ ಮೇಲೆ ಗರಂ ಆದ ಘಟನೆ ನಡೆದಿದೆ.

ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ, ನಾನು ನಿಮ್ಮ ಜಿಲ್ಲೆಯವನೇ, ನಾನೇನು ಹೊರಗಡೆಯಿಂದ ಬಂದಿಲ್ಲ, ಈ ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಸ್ವಾಧೀನವಾದಾಗ ಸಾವಿರಾರು ಎಕರೆ ಭೂಮಿ ಹೋಗಿದೆ. ಆಗಲೂ ನನ್ನ 12 ಎಕರೆ ಜಮೀನು ಸ್ವಾಧೀನವಾಗಿತ್ತು, ಆದರೆ ನಾನು ವಿರೋಧಿಸಲಿಲ್ಲ, ಭೂಮಿಯನ್ನು ಕೊಟ್ಟೆ ಎಂದು ತಮ್ಮ ಅನುಭವವನ್ನು ಹೇಳಿದರು.

ಪ್ರಸಕ್ತ 9600 ಎಕರೆ ಭೂಮಿಯ ಸ್ವಾಧೀನದಲ್ಲಿ 960 ಎಕರೆ ಭೂಮಿಯನ್ನು ರೈತರೇ ಸ್ವಯಂಪ್ರೇರಿತವಾಗಿ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಒತ್ತಡ ಇಲ್ಲ, ಇದು ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. 70% ಜನ ಈ ಯೋಜನೆಗೆ ಒಪ್ಪಿದ್ದಾರೆ, ಕೇವಲ 30% ಜನ ಒಪ್ಪಿಗೆ ನೀಡಿಲ್ಲ ಎಂದರು. ಈ ವೇಳೆ ರೈತರು 'ಭೂಮಿ ನೀಡಲ್ಲ, ಶಾಸಕರು ರೈತರ ಪರವಾಗಿಲ್ಲ' ಎಂದ ರೈತರು. ಈ ವೇಳೆ ರೈತರ ಮೇಲೆ ಡಿಸಿಎಂ ಡಿಕೆಶಿ ಗರಂ ಆಗಿ, 'ನೀವು ದಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕೆ ಆಗೋಲ್ಲ. ರೈತರು ಹೋರಾಟ ಮಾಡಿ ಆದ್ರೆ ರಾಜಕೀಯ ಮಾಡಬೇಡಿ. ಹಿಂದೆ ಭೂಮಿ ಸ್ವಾಧೀನ ಮಾಡಿದ್ರಲ್ಲ ಅವರೇನು ನಿಮ್ಮ ಪರವಾಗಿ ಇದ್ರಾ? ಶಾಸಕರು ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಅವರಿಗೆ ಅವಮಾನ ಮಾಡಬೇಡಿ. ರೈತರಿಗೆ ಅನ್ಯಾಯ ಆಗಬಾರದು ಅಂತ ಎಷ್ಟು ಸಭೆ ಮಾಡಿದ್ದೇವೆ ಗೊತ್ತಾ? ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲ. 70% ಜನ ಈ ಯೋಜನೆಗೆ ಒಪ್ಪಿದ್ದಾರೆ, 30% ಜನ ಒಪ್ಪಿಗೆ ನೀಡಿಲ್ಲ. ಇದನ್ನ ಡಿನೋಟಿಫೈ ಮಾಡಿ ಬಿಎಸ್ವೈ ತರ ನಾನು ಜೈಲಿಗೆ ಹೋಗಲ್ಲ. ನಿಮಗೆ ಏನು ಸಹಾಯ ಮಾಡಬೇಕೋ ಮಾಡ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಆಗುತ್ತೆ ಎಂದು ಡಿಕೆ ಶಿವಕುಮಾರ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ರೈತರಿಂದ ತೀವ್ರ ವಿರೋಧದ ನಡುವೆಯೂ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ನಿರ್ಧಾರ ಬದಲಿಸಲಿಲ್ಲ. ಈ ವಿವಾದವು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದುನೋಡಬೇಕಾಗಿದೆ. ಮುಂದುವರಿಯುವ ಸುದ್ದಿಗಾಗಿ ನಮ್ಮೊಂದಿಗೆ ಇರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌