ಕೊರೋನಾ ಲಸಿಕೆ : ಕರ್ನಾಟಕವೇ ನಂ.1

Kannadaprabha News   | Asianet News
Published : Jan 20, 2021, 07:12 AM IST
ಕೊರೋನಾ ಲಸಿಕೆ : ಕರ್ನಾಟಕವೇ ನಂ.1

ಸಾರಾಂಶ

ಈಗಾಗಲೇ ಕೊರೋನಾ ಲಸಿಕೆ ಹಂಚಿಕೆ ಕಾರ್ಯಕ್ರಮ ಆರಂಭಗೊಂಡಿದೆ. ಕೊರೋನಾ ಲಸಿಕೆ ಹಂಚಿಕೆಯಲ್ಲಿ ಕರ್ನಾಟವು ನಂ. 1 ಸ್ಥಾನವನ್ನು ಪಡೆದುಕೊಂಡಿದೆ.  

 ನವದೆಹಲಿ/ಬೆಂಗಳೂರು (ಜ.20):  ಕೊರೋನಾ ಪರೀಕ್ಷೆ ವಿಚಾರದಲ್ಲಿ ಮಾತ್ರವಲ್ಲ ಕೋವಿಡ್‌ ವ್ಯಾಕ್ಸಿನ್‌ ಹಂಚಿಕೆ ವಿಚಾರದಲ್ಲೂ ಕರ್ನಾಟಕವೇ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಕಲಬುರಗಿಯಲ್ಲೇ ಕೊರೋನಾಗೆ ಮೊದಲ ಸಾವು ದಾಖಲಾದ ಬಳಿಕ ಕಠಿಣ ನಿಯಮಾವಳಿಗಳ ಮೂಲಕ ಕೋವಿಡ್‌ ಅನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿತ್ತು. ಆ ಬಳಿಕ ತ್ವರಿತಗತಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲ್ಯಾಬ್‌ಗಳನ್ನು ಆರಂಭಿಸಿದ ಸರ್ಕಾರ ಕೋವಿಡ್‌ ಟೆಸ್ಟಿಂಗ್‌ ವಿಚಾರದಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವ ಮೂಲಕ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ದೇಶಾದ್ಯಂತ ಕೊರೋನಾ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ ನಾಲ್ಕು ದಿನವಷ್ಟೇ ಆಗಿದೆ. ಶನಿವಾರವಷ್ಟೇ ಲಸಿಕೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಷ್ಟರಲ್ಲೇ ಕರ್ನಾಟಕದಲ್ಲಿ 80,686 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

15,223 ಮಂದಿಗೆ ಲಸಿಕೆ: ರಾಜ್ಯದಲ್ಲಿ ಮಂಗಳವಾರ 15,223 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಲಸಿಕೆ ತೆಗೆದುಕೊಂಡ ಬಳಿಕ ಕೆಲವರಲ್ಲಿ ತಲೆಸುತ್ತು, ಜ್ವರ ಮುಂತಾದ ಸಣ್ಣಪುಟ್ಟಆರೋಗ್ಯ ವ್ಯತ್ಯಾಸ ಕಂಡುಬಂದಿದೆ.

ಕೊರೋನಾ ವ್ಯಾಕ್ಸಿನ್‌ ಬಗ್ಗೆ ವೈದ್ಯರಲ್ಲೇ ಅಸಮಾಧಾನ..! ...

ಮಂಗಳವಾರ ಒಟ್ಟು 356 ಕೇಂದ್ರಗಳಲ್ಲಿ 32,205 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 346 ಕೇಂದ್ರಗಳಲ್ಲಿ 15223 ಜನರಿಗೆ ಲಸಿಕೆ ನೀಡಿದ್ದು, ಉದ್ದೇಶಿತ ಗುರಿಯ ಶೇ.47ರಷ್ಟುಮಾತ್ರ ಮುಟ್ಟಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 4,310 (ಶೇ.84) ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಧಾರವಾಡ ಮತ್ತು ಕಲಬರಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.20ರಷ್ಟುಗುರಿ ಮುಟ್ಟಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 1,41,121 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಈ ಪೈಕಿ 80,686 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಆದರೂ ದೇಶದಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.

ಚಿಕ್ಕಮಗಳೂರು ಶೇ.70, ರಾಮನಗರ ಶೇ.62, ಬಳ್ಳಾರಿ ಶೇ.54, ಬಾಗಲಕೋಟೆ ಶೇ.37, ಬೆಳಗಾವಿ ಶೇ.51, ಬೆಂಗಳೂರು ಗ್ರಾಮಾಂತರ ಶೇ.42, ಬೆಂಗಳೂರು ನಗರ ಶೇ.34, ಬೀದರ್‌ ಶೇ.33, ಚಾಮರಾಜನಗರ ಶೇ.53, ಚಿತ್ರದುರ್ಗ ಶೇ.54, ದಕ್ಷಿಣ ಕನ್ನಡ ಶೇ.58, ದಾವಣಗೆರೆ ಶೇ.40, ಗದಗ ಶೇ.30, ಹಾಸನ ಶೇ.37, ಹಾವೇರಿ ಶೇ.48, ಕೊಡಗು ಮತ್ತು ಉಡುಪಿ ತಲಾ ಶೇ.59, ಕೊಪ್ಪಳ ಶೇ.43, ಮಂಡ್ಯ ಶೇ.48, ರಾಯಚೂರು ಶೇ.42, ಶಿವಮೊಗ್ಗ ಶೇ.51ರಷ್ಟುಗುರಿ ಸಾಧನೆ ಮಾಡಿವೆ.

ಯಾವ ರಾಜ್ಯದಲ್ಲಿ ಎಷ್ಟುಲಸಿಕೆ?

ರಾಜ್ಯ ರಾರ‍ಯಂಕ್‌ ವ್ಯಾಕ್ಸಿನ್‌ ಸಂಖ್ಯೆ

ಕರ್ನಾಟಕ 1 80,686

ತೆಲಂಗಾಣ 2 69,405

ಆಂಧ್ರಪ್ರದೇಶ 3 58,495

ಒಡಿಶಾ 4 55,138

ಪಶ್ಟಿಮ ಬಂಗಾಳ 5 42,093

ಬಿಹಾರ 6 42,085

ರಾಜಸ್ಥಾನ 7 30,761

ಮಹಾರಾಷ್ಟ್ರ 8 30,247

ತಮಿಳುನಾಡು 9 25,251

ಹರಾರ‍ಯಣ 10 24,944

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!