ಪ್ರೊ.ಕೆಎಸ್ ಭಗವಾನ್ ಅವರ ವಿವಾದಿತ ಪುಸ್ತಕ ರಾಮಮಂದಿರ ಏಕೆ ಬೇಡ ಖರೀದಿ ಬಗ್ಗೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಜ.19): ಫ್ರೊ.ಕೆ.ಎಸ್ ಭಗವಾನ್ ಬರೆದ ರಾಮನ ಕುರಿತ ವಿವಾದಿತ ಕೃತಿ ಖರೀದಿಸಿಲ್ಲ. ರಾಮಮಂದಿರ ಏಕೆ ಬೇಡ ಕೃತಿ ಖರೀದಿಸಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸಮಾಜದ ಜನರ ಭಾವನೆಗೆ ಧಕ್ಕೆಯಾಗುವ ಪುಸ್ತಕ ಖರೀದಿಸಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. 2018ರಲ್ಲಿ ಭಗವಾನ್ ಅವರು ಬರೆದ ರಾಮಮಂದಿರ ಏಕೆ ಬೇಡ ಕೃತಿಗೆ ಆಯ್ಕೆ ಸಮಿತಿಯಿಂದ ಅನುಮೋದನೆ ದೊರೆತಿತ್ತು.
ಮೋದಿ ನಿರ್ಧಾರ ಮೆಚ್ಚಿದ್ದ ಭಗವಾನ್‌ರಿಂದ ರಾಮಮಂದಿರ ನಿಧಿ ಸಂಗ್ರಹಕ್ಕೆ ಬೆಂಬಲ
ಆರ್ಥಿಕ ಇಲಾಖೆಯಿಂದ ಅನುದಾನ ಸಿಗದೆ ಪುಸ್ತಕ ಖರೀದಿಸಿರಲಿಲ್ಲ ಎಂದು ಸುರೇಶ್ ಕುಮಾರ್ ಅವರು ತಿಳಿಸಿದ್ದು, ಪುಸ್ತಕ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಮಂಡಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.
ವಿವಾದಿತ ಕೃತಿ ಖರೀದಿ ಕುರಿತು ಫೇಸ್ಬುಕ್ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.