ನಿರ್ಮಲಾ ಸೀತಾರಾಮನ್ ಭೇಟಿಯಾದ ಆರಗ ಜ್ಞಾನೇಂದ್ರ: ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ

By BK AshwinFirst Published Aug 18, 2022, 7:23 PM IST
Highlights

ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕುರಿತು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. 

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕುರಿತು ಚರ್ಚೆ
ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಿದ ಬಳಿಕ ಗೃಹ ಸಚಿವ ಜ್ಞಾನೇಂದ್ರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಅಡಿಕೆ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಈ ಹಿನ್ನೆಲೆ ಉತ್ಪಾದನಾ ವೆಚ್ಚ ಸ್ಥಿರೀಕರಿಸಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅಡಿಕೆಯ ಉತ್ಪಾದನಾ ವೆಚ್ಚ ಆಧರಿಸಿ ಆಮದು ಸುಂಕ ನಿಗದಿ ಮಾಡಲಾಗುತ್ತಿತ್ತು. ಆದರೆ, ಸದ್ಯ ಉತ್ಪಾದನಾ ವೆಚ್ಚವೇ ಹೆಚ್ಚಾಗಿರುವುದರಿಂದ ಹೊಸ ಉತ್ಪಾದನಾ ವೆಚ್ಚಕ್ಕೆ ಸರಿಯಾಗಿ ಆಮದು ಸುಂಕ ನಿಗದಿ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದರ ಜತೆಗೆ, ಡ್ರೈ ಫ್ರೂಟ್ಸ್ ಹೆಸರಲ್ಲಿ ಅಡಿಕೆ ಆಮದು ಆಗುತ್ತಿದೆ. ಈ ಹಿನ್ನೆಲೆ  ಅಕ್ರಮ ಅಡಿಕೆ ಆಮದು ಮೇಲೆ ಕಣ್ಣಿಡಬೇಕು. ಹೀಗಾಗಿ ಬಂದರುಗಳಲ್ಲಿ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಅಳವಡಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದೂ ಸಹ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.  

ಫಸಲಿಗೆ ಬಂದ ಅಡಿಕೆಗೆ ಕನ್ನ: ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಕದಿಯುತ್ತಿರುವ ಕಳ್ಳರು

ಈ ಸಂಬಂಧ ಅಧಿಕಾರಿಗಳನ್ನ ಕರೆದು ನಮ್ಮ ಬೇಡಿಕೆಗಳ ಬಗ್ಗೆ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚನೆ ಕೊಟ್ಟಿದ್ದಾರೆ. ಹಾಗೂ, ರಾಜ್ಯದ ಬೇಡಿಕೆಗಳಿಗೆ ಕೇಂದ್ರದ ಸಚಿವರು ಸ್ಪಂದಿಸಿದ್ದಾರೆ. ಇದರಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಬೆಳೆಯ ಬೆಲೆ ಇಳಿಕೆಯಾಗದಂತೆ ಕೇಂದ್ರ ನೋಡಿಕೊಳ್ಳುವ ಭರವಸೆ ಇದೆ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಬಳಿಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

Crime News: ಜಮೀನಿಗೆ ನುಗ್ಗಿ 200 ಅಡಿಕೆ ಸಸಿ ಕತ್ತರಿಸಿ ಹಾಕಿದ ದುಷ್ಕರ್ಮಿಗಳು; ರೈತ ಮಹಿಳೆ ಕಂಗಾಲು

ಅಡಿಕೆ ರಾಜ್ಯ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಮಲೆನಾಡು ಭಾಗದಲ್ಲಿ ಹೆಚ್ಚು ಅಡಿಕೆಯನ್ನು ಬೆಳೆಯಲಾಗುತ್ತದೆ. ಸದ್ಯ, ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಈ ಹಿನ್ನೆಲೆ ಅಕ್ರಮವಾಗಿಯೂ ಅಡಿಕೆಯನ್ನು ಮಾರಾಟ ಮಾಡಲಾಗುತ್ತಿರುವ ಆರೋಪಗಳೂ ಕೇಳಿಬಂದಿದೆ. ಅಡಿಕೆ ಕಳ್ಳತನದಂತಹ ಪ್ರಕರಣಗಳು ಸಹ ಆಗಾಗ್ಗೆ ವರದಿಯಾಗುತ್ತಿರುತ್ತದೆ. 
 

click me!