High Court of Karnataka: ಕೆನಡಾ ಪೌರತ್ವ ಮಗುವನ್ನ ಸುಪರ್ದಿಗೆ ಕೇಳಿದ್ದಕ್ಕೆ ದಂಡ

By Kannadaprabha NewsFirst Published Jan 14, 2022, 7:00 AM IST
Highlights

*  ಹಲವು ವಿಷಯ ಮುಚ್ಚಿಟ್ಟು ಮಗು ಸುಪರ್ದಿಗೆ ಕೇಳಿದ್ದ ಮಹಿಳೆಗೆ ದಂಡ
*  50 ಸಾವಿರ ದಂಡ ವಿಧಿಸಿದ ಹೈಕೋರ್ಟ್‌
*  ಕೆನಡಾ ಪೌರತ್ವ ಪಡೆದಿರುವ ಮಗು ಸುಪರ್ದಿಗಾಗಿ ಅರ್ಜಿ
 

ಬೆಂಗಳೂರು(ಜ.14):  ಕೆನಡಾ ಪೌರತ್ವ(Citizenship of Canada) ಹೊಂದಿರುವ ಮಗುವಿನ ಸುಪರ್ದಿ ವಿಚಾರ ತೀರ್ಮಾನಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌(High Court of Karnataka), ನ್ಯಾಯಾಲಯಕ್ಕೆ ಅನೇಕ ಅಂಶಗಳನ್ನು ಮರೆಮಾಚಿದ ಕಾರಣಕ್ಕಾಗಿ ಮಗಳ ಸುಪರ್ದಿಗೆ ಕೋರಿದ್ದ ಮಹಿಳೆಗೆ(Woman) 50 ಸಾವಿರ ದಂಡ(Fine) ವಿಧಿಸಿದೆ.

ಮಗಳ ಸುಪರ್ದಿ ವಿಚಾರವಾಗಿ ಬೆಂಗಳೂರಿನ(Bengaluru) ಭೂಪಸಂದ್ರದಲ್ಲಿ ವಾಸವಿರುವ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಮಹಿಳೆಯು ದಂಡದ ಹಣವನ್ನು ನಾಲ್ಕು ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದರೆ ಮಹಿಳೆ ವಿರುದ್ಧ ಪ್ರಾಧಿಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು ಎಂದು ತಿಳಿಸಿದೆ.

Rape Case: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ: ರಾಘವೇಶ್ವರಶ್ರೀಗೆ ಹೈಕೋರ್ಟ್‌ಲ್ಲೂ ಜಯ

ಪ್ರಕರಣದ ವಿವರ:

ಬಳ್ಳಾರಿ(Ballari) ಮೂಲದ ರವಿ ಮತ್ತು ರಾಯಚೂರಿನ(Raichur) ಗೀತಾ 2008ರ ನ.30ರಂದು ಮದುವೆಯಾಗಿದ್ದರು. ಕೆಲ ಕಾಲ ನಂತರ ದಂಪತಿ ಕೆನಡಾಕ್ಕೆ(Canada) ತೆರಳಿ ಅಲ್ಲಿಯೇ ವಾಸವಿದ್ದರು. ದಂಪತಿಗೆ 2011ರ ಡಿ.11ರಂದು ಹೆಣ್ಣು ಮಗು ಜನಿಸಿತ್ತು. ನಂತರ ಮನಸ್ತಾಪಗಳಿಂದ ದಾಂಪತ್ಯ ಮುರಿದುಬಿದ್ದಿತ್ತು. 2018ರ ಆಗಸ್ಟ್‌ನಲ್ಲಿ ಮಗುವಿನೊಂದಿಗೆ ಭಾರತಕ್ಕೆ(India) ಮರಳಿದ್ದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಸ್ಥಳೀಯ ಕೌಟುಂಬಿಕ ನ್ಯಾಯಾಲಯಕ್ಕೆ(Family Court) ಅರ್ಜಿ ಸಲ್ಲಿಸಿ, ಮಗಳನ್ನು ತನ್ನ ಸುಪರ್ದಿಗೆ ವಹಿಸಿ ಆದೇಶಿಸುವಂತೆ ಕೋರಿದ್ದರು.

ಮಗು ಕೆನಡಾ ಪೌರತ್ವ ಪಡೆದಿದೆ. ಆದ ಕಾರಣ ಮಗುವಿನ ಸುಪರ್ದಿ ವಿಚಾರವನ್ನು ತೀರ್ಮಾನಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಬೆಂಗಳೂರಿನ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಗೀತಾ ಅವರ ಅರ್ಜಿ ವಜಾಗೊಳಿಸಿ 2018ರ ಫೆ.4ರಂದು ಆದೇಶಿಸಿತ್ತು. ಇದರಿಂದ ಗೀತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ಎಲ್ಲ ವಿವರಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್‌, ಗೀತಾ ಸುಖಾಸುಮ್ಮನೆ ಅರ್ಜಿ ಸಲ್ಲಿಸಿ ಕೋರ್ಟ್‌ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟು ದಂಡ ವಿಧಿಸಿದೆ.

ಹಲವು ವಿಷಯ ಬಚ್ಚಿಟ್ಟಿದ್ದೇ ದಂಡ ವಿಧಿಸಲು ಕಾರಣ

ಗೀತಾ ಅವರು ಪತಿ ರವಿ ಅವರನ್ನು ತ್ಯಜಿಸಿ 2016ರಿಂದ ವಿವಾಹಿತ ಪುರುಷನೊಂದಿಗೆ ಪ್ರತ್ಯೇಕ ವಾಸ ಇರುವುದು, ವಿಚ್ಛೇದನ(Divorce) ಮತ್ತು ಮಗುವಿನ ಸುಪರ್ದಿಗೆ ಕೋರಿ ಕೆನಡಾ ಸುಪ್ರೀಂ ಕೋರ್ಟ್‌ನಲ್ಲಿ(Supreme Court of Canada) ಅರ್ಜಿ ಸಲ್ಲಿಸಿರುವ ಅಂಶ ಸೇರಿದಂತೆ ಹಲವು ಅಂಶಗಳ ಬಗ್ಗೆ ನ್ಯಾಯಾಲಯದ ಮರೆ ಮಾಚಿದ್ದಾರೆ. ಅವರ ಈ ನಡೆ ನ್ಯಾಯಾಲಯದ ಮೇಲಿನ ದಾಳಿಯಾಗಿದ್ದು, ದಂಡ ವಿಧಿಸಲು ಸೂಕ್ತ ಪ್ರಕರಣ ಇದಾಗಿದೆ ಎಂದು ಹೈಕೋರ್ಟ್‌ ಕಟುವಾಗಿ ನುಡಿದೆ.

Uttara Kannada: ಕೃಷಿ ಜಾಗ ಖರೀದಿಗೆ ಸೆಲೆಕ್ಟ್ ಫೌಂಡೇಷನ್‌ಗೆ ಅನುಮತಿ

ಮಗುವಿನ ಪಾಲನೆ ತಾಯಿಯ ಹಕ್ಕುಎಂದ ಹೈಕೋರ್ಟ್‌, ತಂದೆಗೆ 50 ಸಾವಿರ ರು. ದಂಡ!

ಬೆಂಗಳೂರು: ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮಗುವಿನ ಪಾಲನೆ ಪೋಷಣೆಯು ತಾಯಿ ಹಕ್ಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಮಗುವಿನ ಸುಪರ್ದಿಗೆ ಕೋರಿದ್ದ ತಂದೆಯೊಬ್ಬರಿಗೆ 50 ಸಾವಿರ ರು. ದಂಡ ವಿಧಿಸಿದೆ. ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸಲು ಪತ್ನಿಗೆ ಆದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಜಿ.ಕೆ.ಮೊಹಮ್ಮದ್‌ ಮುಷ್ತಾಕ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಈ ಆದೇಶ ನೀಡಿದ್ದರು. 

ಅಲ್ಲದೆ, ನ್ಯಾಯಾಲಯದ ವಿಧಿಸಿರುವ ದಂಡ ಮೊತ್ತವನ್ನು ಒಂದು ತಿಂಗಳ ಒಳಗೆ ಪತ್ನಿಗೆ ನೀಡಬೇಕು. ತಪ್ಪಿದರೆ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ. ಹಾಗೆಯೇ, ಪತಿ-ಪತ್ನಿ ಪರಸ್ಪರ ದಾಖಲಿಸಿರುವ ಎಂಟು ಪ್ರಕರಣಗಳನ್ನು ಮುಂದಿನ 9 ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು. ಆ ಕುರಿತ ವರದಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಲುಪಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶಿಸಿತ್ತು.  
 

click me!