Mekedatu Padayatra: ತಾತ್ಕಲಿಕವಾಗಿ ಸ್ಥಗಿತಗೊಳಿಸಿದ ಕಾಂಗ್ರೆಸ್

By Suvarna NewsFirst Published Jan 13, 2022, 1:13 PM IST
Highlights

ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಮೇಕೆದಾಟು  ಯೋಜನೆ ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ಹಿಂಪಡೆದಿದ್ದಾರೆ. ತಾತ್ಕಲಿಕವಾಗಿ ಸ್ಥಗಿತಗೊಳಿಸಿದ್ದು, ಕೊರೋನಾ ಸೋಂಕು ತಗ್ಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಬೆಂಗಳೂರು(ಜ.13): ಹಲವು ವಿರೋಧಗಳ ನಂತರ ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ, ಬದ್ಧ, ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಕೈಬಿಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ  ಮನವಿ ಮಾಡಿಕೊಂಡಿದ್ದರು.

ಇದರ ಬೆನ್ನಲ್ಲೇ  ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಸದ್ಯದ ಮಟ್ಟಿಗೆ  ಹಿಂಪಡೆದಿದ್ದಾರೆ.  ನಮಗೆ ಜನರ ಹಿತ ಮುಖ್ಯ . ನಮ್ಮ ಪಾದಯಾತ್ರೆಯಿಂದ  ಕೊರೊನಾ ಉಲ್ಭಣ ಆಗಬಾರದು ಅನ್ನೋ ಭಾವನೆ ಇದೆ ಎಂದು ಕಾಂಗ್ರೆಸ್ ನಾಯಕರು ಕಾರಣ ನೀಡಿದ್ದಾರೆ. ಇಂದು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ಯಕ್ಕೆ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ ಕೊರೋನಾ ಸೋಂಕು ತಗ್ಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ.

 

ಜನರ ಆರೋಗ್ಯದ ಹಿತದೃಷ್ಟಿಯಿಂದ, ವಿರೋಧ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಕೈಬಿಟ್ಟು, ಒಗ್ಗಟ್ಟಿನಿಂದ ಸಾಂಕ್ರಾಮಿಕ ಎದುರಿಸಲು ಮತ್ತು ಮುಂಬರುವ ದಿನಗಳಲ್ಲಿ ಮೇಕೆದಾಟು ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯುವ ಕುರಿತಂತೆ ಮುಖ್ಯಮಂತ್ರಿ ಅವರಿಂದ ಮನವಿ; pic.twitter.com/QwYksRmXi0

— CM of Karnataka (@CMofKarnataka)

ಈ ಮೂಲಕ ಕಾಂಗ್ರೆಸ್ ನಾಯಕರ 11 ದಿನಗಳ ಮೇಕೆದಾಟು ಪಾದಯಾತ್ರೆ 5ನೇ ದಿನಕ್ಕೆ ಅಂತ್ಯವಾಗಿದೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಲಿದೆ.

Mekedatu Padayatra:'ಸುರೇಶ್‌ ತಳ್ಳಿದರೆ ಏನಂತೆ, ನಾನೆ ನಿನ್ನ ಹೆಗಲ ಮೇಲೆ ಕೈಹಾಕುವೆ' ಡಿಕೆಶಿ

ಈ ಬಗ್ಗೆ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯಿಸಿ ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಸಿದೆವು. ರಾಜ್ಯ ಸಭೆ ಸದಸ್ಯರು, ಸಂಸದರು, ಶಾಸಕರು, ಮಾಜಿ ಸಚಿವರು ಹಾಗೂ ಅಸಂಖ್ಯ ಕಾರ್ಯ ಕರ್ತರು ಯಶಸ್ಸು ತಂದಕೊಂಡರು. ಪಾದಯಾತ್ರೆ ತೀರ್ಮಾನಿಸಿದಾಗ 3ನೇ ಅಲೆ ಪ್ರಾರಂಭ ಆಗಿರಲಿಲ್ಲ. ಈಗ 3ನೇ ಅಲೆ ವೇಗವಾಗಿ ಹರಡುತ್ತಿದೆ. ವಿಧಾನಸಭಾ ಅಧಿವೇಶನ ನಡೆದಿದೆ. ನಮ್ಮ ತೀರ್ಮಾನ ದಂತೆ ಪಾದಯಾತ್ರೆ ಆರಂಭಿದೆವು. ಸಂಗಮದಿಂದ ರಾಮನಗರವರೆಗೆ ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ದೀವಿ. ಇಂದು ರಾಮನಗರದಿಂದ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಂಗಳೂರು ಸಾಗಬೇಕಿತ್ತು ಎಂದರು.

"

ನಿನ್ನ 15ಸಾವಿರಕ್ಕು ಹೆಚ್ಚು ಜನರಿಗೆ ಸೋಂಕು ತಗುಲಿದೆ. ಇದು ಯಾತ್ರೆಯಿಂದ ಆಗಿದ್ದಲ್ಲ. ಕಾಂಗ್ರೆಸ್ ಸುಧೀರ್ಘ ಇತಿಹಾಸ ಇರುವ ಹಳೇಯ ಪಕ್ಷ. ಜವಾಬ್ದಾರಿ ನಿಭಾಯಿಸುವ ಕರ್ತವ್ಯ ನಮಗಿದೆ. ಸೋಂಕು ವೇಗವಾಗಿ ಹರಡಲು ಕಾಂಗ್ರೆಸ್ ಅಲ್ಲ ಬಿಜೆಪಿ ಕಾರಣ.  ಮೂರನೆ ಅಲೆ ಪ್ರಾರಂಭವಾದ ಮೇಲೂ ಸಿಎಂ ಯಾವ ಸಭೆಗಳನ್ನು ನಿಲ್ಲಿಸಲಿಲ್ಲ. ವಿಧಾನ ಪರಿಷತ್ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭ ಕೂಡ ನಡೆಸಿದರು. ಸಿಎಂ ಆದಿಯಾಗಿ ಸಚಿವರು , ಶಾಸಕರು ಸೇರಿ 4 ಸಾವಿರ ಜನ ಸೇರಿದ್ದರು. ಸುಭಾಷ್ ಗುತ್ತೆದಾರ್,  ರೇಣುಕಾಚಾರ್ಯ ಹೋರಿ ಸ್ಪರ್ಧೆ, ಅರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಿತು. ನಿಸ್ಪಕ್ಷಪಾವಾಗಿ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಮೂಲಕ ನೋಟಿಸ್ , ಎಫ್ಐಆರ್ ದುರ್ಬಳಕೆ, ಇದು ನಮ್ಮ ಪಾದಯಾತ್ರೆ ನಿರ್ಬಂಧ ಹೇರಲು ಹುನ್ನಾರ.  ಜನಾಶೀರ್ವಾದ ನಮಗಿದೆ.

Congress Padayatra ಪಾದಯಾತ್ರೆ ನಿಲ್ಲಿಸಲು ಸರ್ಕಾರ ಆದೇಶ, ಡಿಕೆಶಿ ಮೌನ, ಅಬ್ಬರಿಸಿದ ಡಿಕೆ ಸುರೇಶ್

ಎಲ್ಲೆಡೆಯೂ ಕೊರೊನಾ ಹೆಚ್ಚಳ ಆಗುತ್ತಿದೆ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಪಾದಯಾತ್ರೆಯಿಂದ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ತೀರ್ಮಾನ ಕೈಗೊಂಡಿದ್ದೇವೆ. ಸರ್ಕಾರ ನಿರ್ಬಂಧ ಕಾರಣ ಅಲ್ಲದೆ ಸೋಂಕು ಉಲ್ಬಣಕ್ಕೆ ಕಾಂಗ್ರೆಸ್ ಕಾರಣವಾಗಬಾರದೆಂಬ ಉದ್ದೇಶದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಸೋಂಕು ಕಡಿಮೆ ಯಾದ ಮೇಲೆ ರಾಮನಗರದಿಂದಲೇ ಪಾದಯಾತ್ರೆ ಆರಂಭಗೊಳ್ಳಲಿದೆ. ಇಲ್ಲಿಂದ ಆರಂಭವಾಗಿ ಬೆಂಗಳೂರಲ್ಲಿ ಅಂತ್ಯಗೊಳ್ಳುತ್ತದೆ.  ಕಾಂಗ್ರೆಸ್ ಜನರ ಒಳಿತನ್ನು ಬಯಸುತ್ತದೆ. ಬೆಂಗಳೂರು ಸೇರಿ ನಾಡಿನ ಜನರಲ್ಲಿ  ಬೇರೆ ಅಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಪಾದಯಾತ್ರೆ ಮೊಟಕುಗೊಳಿಸುತ್ತಿದ್ದೇವೆ. ರಾಜ್ಯದ ಜನರಿಂದ ಪಾದಯಾತ್ರೆ ಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಯಾತ್ರೆ ಉದ್ದಕ್ಕೂ ಸ್ಪಂದನೆ ಜನರ ಆಶೀರ್ವಾದ ಇತ್ತು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"

ಡಿ.ಕೆ.ಶಿವಕುಮಾರ್ ಮಾತನಾಡಿ,  ಡಿಸಿಗೆ ಕೋವಿಡ್ ಲೆಟರ್ ಹೇಗೆ ಕೊಟ್ಟರು ಅಂತ ಪ್ರಶ್ನಿಸಿದೆ. ಗೋಡೆ ಮೇಲೆ ಅಂಟಿಸಿದ್ದರು. ಈಗ ಅವರೇ ಕಿತ್ತು ಕೊಂಡು ಹೋಗಿದ್ದಾರೆ. ಬಸವನಗುಡಿ ಕಾಲೇಜು ಮೈದಾನದ ಅನುಮತಿ ನಿರಾಕರಿಸಿದ್ದಾರೆ. ಜಿಲ್ಲಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ಸರ್ಕಾರಕ್ಕೂ ಯಾತ್ರೆ ನಡೆಯಬೇಕೆಂದು ಆಸೆ ಇದೆ. ಶಾಸಕರೊಂದಿಗೆ ಚರ್ಚೆ ಮಾಡಿ  ಜನರ ಭಾವನೆ ಅರಿತು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.  ನ್ಯಾಯಾಲಯದ ಆದೇಶ ಗೌರವ ನೀಡುತ್ತೇವೆ ನಮ್ಮ ದೇವರಾದ ಜನರ ಭಾವನೆ ಸ್ಪಂದಿಸುತ್ತೇವೆ. ಅವರೇ ಸೋಂಕಿತರ ಸಂಖ್ಯೆ ಹೆಚ್ಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಪತ್ರ, ಜಿಲ್ಲಾಧಿಕಾರಿ ಪತ್ರ, ವಾಹನ ಗಡಿಯಲ್ಲಿ ತಡೆದಿದ್ದಾರೆ. ಇಬ್ಬರೇ ನಡೆಯಲು ತೀರ್ಮಾನಿಸಿದ್ದೇವು. ಜೈಲು ಬೇಲಿಗೆಲ್ಲ ಹೆದರಲ್ಲ. ಜನರ ಆರೋಗ್ಯ ಕಾರಣದಿಂದ ಯಾತ್ರೆ ನಿಲ್ಲಿಸಿದ್ದೇವೆ. ಇಲ್ಲಿಂದಲೇ ಯಾತ್ರೆ ಮುಂದುವರೆಸುತ್ತೇವೆ. ಸರ್ಕಾರಕ್ಕೆ ಎಲ್ಲರೂ ಒಂದೇಯಾಗಿ ಕಾಣಲಿಲ್ಲ. ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳಬೇಕು. ತಮಿಳುನಾಡು ಜತೆಗೆ ಎರಡು ಪಕ್ಷಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

click me!