ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ

By Suvarna NewsFirst Published Mar 21, 2021, 10:06 PM IST
Highlights

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದೆ. ದಿನೇ ದಿನೇ ಪಾಸಿಟಿವ್ ಕೇಸ್‌ಗಳ ಸಂಖ್ಯೆಯೂ ಏರಿತ್ತಿದೆ. ಇನ್ನು ಬಗ್ಗೆ ಸಚಿವ ಸುಧಾಕರ್ ಆರಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಮಾ.21): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಶುರುವಾಗಿದೆ. ಇದರಿಂದಾಗಿ ಮುಂದಿನ 45-90 ದಿನಗಳು ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸೂಕ್ತ ರೀತಿಯಲ್ಲಿ ಎದುರಿಸಬೇಕಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಎಚ್ಚರಿಸಿದ್ದಾರೆ. 

ಇಂದು (ಭಾನುವಾರ) ಸುದ್ದಿಗಾರರ ಜೊತೆ ಮಾತನಾಡಿರುವ ಅವರು,  ಮುಂದಿನ ದಿನಗಳು ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸೂಕ್ತ ರೀತಿಯಲ್ಲಿ ಎದುರಿಸಬೇಕಾಗಿದೆ . ಇದೇ ವರದಿಯನ್ನು ತಾಂತ್ರಿಕ ತಜ್ಞರ ಸಲಹಾ ಸಮಿತಿ ಕೂಡ ನೀಡಿದೆ. ಹೀಗಾಗಿ ಮೋಜು-ಮಸ್ತಿ, ಪಾರ್ಟಿ, ಸಭೆ-ಸಮಾರಂಭ ಅಂತ ಕೊರೋನಾ ರಿಯಾಯಿತಿ ನೀಡೋದಿಲ್ಲ. ಜನರು ನಿರ್ಲಕ್ಷ್ಯ ವಹಿಸಿದ್ರೇ.. ಆಪತ್ತು ಕಟ್ಟಿಟ್ಟ ಬುತ್ತಿ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿದರು.

ಕರ್ನಾಟಕದಲ್ಲಿ ಕೊರೋನಾ ವೈರಸ್ 2ನೇ ಅಲೆಯ ವೇಗ: ಹೊಸ ದಾಖಲೆ

ಕೋವಿಡ್ ಪ್ರಮಾಣ ಬೆಂಗಳೂರಿನಲ್ಲಿ ಸಾವಿರ ದಾಟಿದೆ, ರಾಜ್ಯದಲ್ಲಿ ನಿನ್ನೆ ಏಳು ಸಾವಾಗಿದೆ. ಇದರಿಂದಾಗಿ ಜನಸಾಮಾನ್ಯರ ನಡವಳಿಕೆ ಬದಲಾಗಬೇಕು. ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ರೆ ಅಪಾಯ. ಸೋಂಕು ಬಂದಾಗ ಲಸಿಕೆ ಕೊಡಬಹುದು, ಆದ್ರೆ ಇದೇ ರೀತಿ ಸೋಂಕು ಹೆಚ್ಚಾದ್ರೆ ಕಷ್ಟವಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್ ಸೋಂಕು ಹೆಚ್ಚಾದ್ರೆ ಸರ್ಕಾರ ಕೂಡ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ನೀವು ಸುರಕ್ಷಿತವಾಗಿದ್ರೆ ನಿಮ್ಮನ್ನ ನಂಬಿದವರು ಮನೆಯಲ್ಲಿ ಸುರಕ್ಷಿತವಾಗಿರ್ತಾರೆ. ಹಿರಿಯ ನಾಗರೀಕರಿಗೆ ಲಸಿಕೆ ಕೊಡಿಸೋ ಕೆಲಸ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಕೋವಿಡ್ ಎರಡನೇ ಅಲೆಯನ್ನು ತಡೆಯಬೇಕಿದೆ, ಯುವಕರ ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸಲಹೆ ನೀಡಿದ್ದಾರೆ. ಕೊರೋನಾ ನಿಯಂತ್ರಣ ಉದ್ದೇಶದಿಂದ ಆಲ್ ಪಾರ್ಟಿ ಮೀಟಿಂಗ್ ಕರೆಯಬೇಕು. ವಿಪಕ್ಷದವರೂ ಕೂಡ ಕೊರೋನಾ ನಿಯಂತ್ರಣಕ್ಕೆ ಸಲಹೆ ನೀಡಬೇಕು ಎಂದರು.

click me!