ರಾಜ್ಯದಲ್ಲಿ ಮತ್ತೆ ಕೊರೋನಾ ಅಬ್ಬರ ಶುರುವಾಗಿದ್ದು, ದಿನದಿಂದ ದಿನಕ್ಕೆ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ.
ಬೆಂಗಳೂರು, (ಮಾ.21): ಕರ್ನಾಟಕದಲ್ಲಿ ಕೊರೋನಾ ವೈರಸ್ 2ನೇ ಅಲೆಯ ವೇಗ ಹೆಚ್ಚಾಗುತ್ತಿದ್ದು, 4 ತಿಂಗಳ ನಂತರದಲ್ಲಿ ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆಯುತ್ತಿದೆ.
ಹೌದು.. ರಾಜ್ಯದಲ್ಲಿ ಕಳೆದ ತಿಂಗಳಲ್ಲಿ 200ರಿಂದ 300ರ ವರಗೆ ವರದಿಯಾಗುತ್ತಿದ್ದ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಇದೀಗ ದಿನಕ್ಕೆ 2 ಸಾವಿರ ಸಮೀಪಿಸುತ್ತಿದೆ.
undefined
ಇಂದು ( ಭಾನುವಾರ) 1715 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ 9,70,202ಕ್ಕೆ ಏರಿಕೆಯಾಗಿದ್ರೆ, ಒಟ್ಟು ಸಾವಿನ ಸಂಖ್ಯೆ 12434ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಲಾಕ್‌ಡೌನ್, ನೈಟ್ ಕರ್ಫ್ಯೂ ಬಿಟ್ಟು ಟಫ್ ರೂಲ್ಸ್ ತನ್ನಿ, ಆರೋಗ್ಯ ಸಚಿವರ ಸೂಚನೆ
24 ಗಂಟೆಗಳಲ್ಲಿ 1048 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 944256 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13493ಕ್ಕೇರಿದೆ.
ಬಾಗಲಕೋಟೆ 1, ಬಳ್ಳಾರಿ 11, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು 1039, ಬೀದರ್ 61, ಚಾಮರಾಜನಗರ 4, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 5, ಚಿತ್ರದುರ್ಗ 3, ದಕ್ಷಿಣ ಕನ್ನಡ 54, ದಾವಣಗೆರೆ 8, ಧಾರವಾಡ 24, ಗದಗ 5, ಹಾಸನ 40, ಹಾವೇರಿ 1, ಕಲಬುರಗಿ 41, ಕೊಡಗು 9, ಕೋಲಾರ 10, ಕೊಪ್ಪಳ 0, ಮಂಡ್ಯ 15, ಮೈಸೂರು 70, ರಾಯಚೂರು 6, ರಾಮನಗರ 1, ಶಿವಮೊಗ್ಗ 4, ತುಮಕೂರು 38, ಉಡುಪಿ 170, ಉತ್ತರ ಕನ್ನಡ 11, ವಿಜಯಪುರ 20, ಯಾದಗಿರಿ 3 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.