
ಬೆಂಗಳೂರು, (ಮೇ.05): 40% ಕಮಿಷನ್ ಹಾಗೂ ಅಕ್ರಮ ನೇಮಕಾತಿ ಗದ್ದಲದ ಮಧ್ಯೆ ಕರ್ನಾಟಕ ಸರ್ಕಾರ ಆಡಳಿತ ಯಂತ್ರ'ಕ್ಕೆ ಮೇಜರ್ ಸರ್ಜರಿ ಮಾಡಿದೆ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು(ಗುರುವಾರ) ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರನ್ನ ವರ್ಗಾವಣೆ ಮಾಡಲಾಗಿದ್ದು, ಓರ್ವ ಐಎಎಸ್ ಅಧಿಕಾರಿಗೆ ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ. ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ ನೇಮಕಗೊಂಡಿದ್ದಾರೆ.
ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಕ್ಯಾ.ಡಾ.ರಾಜೇಂದ್ರ, ಕೆಆರ್ಐಡಿಎಲ್ ಎಂಡಿ ಆಗಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಗಿ ನಿತೇಶ್ ಪಾಟೀಲ್, ಧಾರವಾಡ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ವರ್ಗಾವಣೆಯಾಗಿದ್ದಾರೆ.
ಮೇಜರ್ ಸರ್ಜರಿ, 16 IAS ಅಧಿಕಾರಿಗಳ ವರ್ಗಾವಣೆ
ಕೆಎಸ್ಆರ್ಟಿಸಿ ನಿರ್ದೇಶಕರಾಗಿ ಡಾ. ನವೀನ್ ಭಟ್, ಬಾಗಲಕೋಟೆ ಜಿಲ್ಲಾಧಿಕಾರಿ ಭೂ ಬಾಲನ್ ಟಿ., ಇಡಿಸಿಎಸ್ ನಿರ್ದೇಶಕರಾಗಿ ಡಾ.ದಿನೇಶ್ ಸಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್, ಕೆಯುಐಡಿಎಫ್ಸಿ ಎಂಡಿಯಾಗಿ ಶಿಲ್ಪಾ ಎಂ, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಪ್ರಸನ್ನ ಹೆಚ್, ಕಲಬುರಗಿ ಜಿ.ಪಂ. ಸಿಇಒ ಆಗಿ ಡಾ.ಗಿರೀಶ್ ದಿಲೀಪ್ ಬಾಡೋಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ
ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta) ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ರನ್ನು (Tushar Girinath) ನೇಮಕ ಮಾಡಿದೆ.
ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ಗೌರವ್ ಗುಪ್ತಾ ವರ್ಗಾವಣೆ ಹೊಂದಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಟಿಕೆ ಅನಿಲ್ ಕುಮಾರ್ಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.
2022 ಏಪ್ರಿಲ್ 18ರಂದು ಕರ್ನಾಟಕ ಸರ್ಕಾರ 16 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದೀಗ ಒಂದು ತಿಂಗಳೊಳಗೆ ಮತ್ತೆ ವರ್ಗಾವಣೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ