ಶಾಕ್ ನೀಡಲು ಸಿದ್ಧವಾಗಿದೆ ಸರ್ಕಾರ?

By Web DeskFirst Published Oct 4, 2018, 7:43 AM IST
Highlights

ಬಸ್ ದರ ಏರಿಕೆ ಪ್ರಸ್ತಾಪವನ್ನು ಕಳೆದ ಕೆಲ ದಿನಗಳ ಹಿಂದೆ ಕೈ ಬಿಟ್ಟಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ದರ ಏರಿಕೆಯ ಬಗ್ಗೆ ಪ್ರಸ್ತಾಪಿಸಿದ್ದು ಈ ಬಗ್ಗೆ ಗುರುವಾರ ನಿರ್ಧಾರ ಕೈಗೊಳ್ಳಲಿದೆ. 

ಮಂಡ್ಯ :  ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಲ್ಲಿಸಿದ್ದ ಬಸ್‌ ಪ್ರಯಾಣದರವನ್ನು ಶೇ.18ರಷ್ಟುಏರಿಸುವ ಪ್ರಸ್ತಾಪದ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಮ್ಮ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು ಅವರ ನಿರ್ಧಾರದಂತೆ ಪ್ರಯಾಣ ದರ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.

ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣದರವನ್ನು ಶೇ.18ರಷ್ಟುಹೆಚ್ಚಿಸಲು ತೀರ್ಮಾನಿಸಿದ್ದೆವು. ಈಗ ಆದಷ್ಟುಕಡಿಮೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಎಲ್ಲಾ ಸಂಗತಿಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದರು.

ಕೊನೇ ಕ್ಷಣದಲ್ಲಿ ರದ್ದಾಗಿತ್ತು:  ಈ ಹಿಂದೆ ಸೆ.17ರ ರಾತ್ರಿಯಿಂದಲೇ ಅನ್ವಯವಾಗುವಂತೆ ಬಸ್‌ ಪ್ರಯಾಣ ದರ ಏರಿಕೆಯನ್ನು ಶೇ.18ರಷ್ಟುಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿತ್ತು. ಈ ಪ್ರಸ್ತಾಪಕ್ಕೆ ಕೊನೇ ಕ್ಷಣದಲ್ಲಿ ಅಂದರೆ ಪ್ರಯಾಣ ದರ ಏರಿಕೆಗೆ ಅನುಮೋದನೆ ಸಿಕ್ಕ ಅರ್ಧಗಂಟೆಯಲ್ಲೇ ಅದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಡೆಹಿಡಿದಿದ್ದರು.

ಸಾರಿಗೆ ಇಲಾಖೆ .6 ಸಾವಿರ ಕೋಟಿ ನಷ್ಟವಾಗಿದ್ದು 1.20 ಲಕ್ಷ ನೌಕರರ ಭವಿಷ್ಯವೂ ಇಲಾಖೆ ಮೇಲೆ ಇದೆ. ಏ.1ರಿಂದ ಇಲ್ಲಿಯವರೆಗೂ 1 ಲೀಟರ್‌ ಪೆಟ್ರೋಲ್‌, ಡಿಸೇಲ್‌ಗೆ ಹೆಚ್ಚು ಕಡಮೆ .13.50 ಹೆಚ್ಚಾಗಿದೆ. ತೈಲದರ ಹೆಚ್ಚಳದಿಂದ ಸಾರಿಗೆ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಉತ್ತಮ ಸೇವೆ ಒದಗಿಸುತ್ತಿರುವ ಸಾರಿಗೆ ಇಲಾಖೆ, ನಷ್ಟದಿಂದ ಚೇತರಿಸಿಕೊಳ್ಳಲು ದರ ಹೆಚ್ಚಳ ಮಾಡುವುದೂ ಅನಿವಾರ್ಯವಾಗಿದೆ ಎಂದು ಹೇಳಿದರು.

click me!