
ಬೆಂಗಳೂರು: ಶಿಕ್ಷಣ ಇಲಾಖೆಯು 2017-18ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್‌ನ ಹೆಚ್ಚುವರಿ, ಕಡ್ಡಾಯ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳ ಪರಿಷ್ಕೃತ ವೇಳಾಪಟ್ಟಿಪ್ರಕಟಿಸಿದೆ.
ವರ್ಗಾವಣೆಯಲ್ಲಿ 2017-18ನೇ ಸಾಲಿಗಿಂತ 2018-19ನೇ ಸಾಲಿನಲ್ಲಿನ ದಾಖಲಾತಿ ಹೆಚ್ಚಾದ ಶಾಲೆಗಳಲ್ಲಿ ದಾಖಲಾತಿ ಪರಿಗಣಿಸಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದಿ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲಾಗುತ್ತದೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಸೆ.22ರಂದು ಶಾಲಾವಾರು ಖಾಲಿ ಹುದ್ದೆಗಳ ಮತ್ತು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಮತ್ತು ಎಲ್ಲಾ ತಾಲೂಕುಗಳ ಬಿಇಒಗಳ ಕಚೇರಿಯಲ್ಲಿ ತಾತ್ಕಾಲಿಕ ಪಟ್ಟಿಪ್ರಕಟಣೆ.
ಸೆ.22ರಿಂದ 24 ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ, ಸೆ.25- ಆಕ್ಷೇಪಣೆಗಳ ಪುರಸ್ಕರಿಸುವುದು ಮತ್ತು ತಿರಸ್ಕರಿಸುವುದು. ಸೆ.26- ಖಾಲಿ ಹುದ್ದೆಗಳ ಅಂತಿಮ ಪಟ್ಟಿಪ್ರಕಟ. ಸೆ.27,28 ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಕೌನ್ಸೆಲಿಂಗ್, ಸೆ.29 ಶಿಕ್ಷಕರ ಮಾಹಿತಿಯನ್ನು ಟಿಡಿಎಸ್‌ನಲ್ಲಿ ಅಳವಡಿಸಿ ಪ್ರಾಥಮಿಕಿ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸುವುದು.
ಕಡ್ಡಾಯ ವರ್ಗಾವಣೆ: ಸೆ.29ರಿಂದ ಆ.4- ‘ಎ’ ವಲಯದಲ್ಲಿ ಕನಿಷ್ಠ 10 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಶಿಕ್ಷಕರ ಪಟ್ಟಿಪ್ರಕಟ. ಅ.5ರಂದು ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಪಟ್ಟಿಪ್ರಕಟ. ಅ.13ರಿಂದ15- ‘ಎ’ ವಲಯದಿಂದ ‘ಸಿ’ ವಲಯದ ಕೌನ್ಸೆಲಿಂಗ್. ಅ.16- ಕ್ರಿಮಿನಲ್ ಪ್ರಕರಣ ಶಿಕ್ಷಕರ ವರ್ಗಾವಣೆ ನಡೆಸಲಾಗುತ್ತದೆ.
ಕೋರಿಕೆ ವರ್ಗಾವಣೆ ಪ್ರಕ್ರಿಯೆಯು ಸೆ.30ರಿಂದ ಅ.11ರೊಳಗೆ ನಡೆಸಲಾಗುವುದು. ಪರಸ್ಪರ ವರ್ಗಾವಣೆಯು ಅ.16ರಿಂದ ನ.4ರ ಅವಧಿಯಲ್ಲಿ ನಡೆಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್ ಆದೇಶ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ