ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು!

By Suvarna NewsFirst Published May 3, 2020, 7:16 AM IST
Highlights

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು| ಆನ್‌ಲೈನ್‌ ಶಾಪಿಂಗ್‌ಗೂ ಕೇಂದ್ರ ಸರ್ಕಾರದ ಸಮ್ಮತಿ| ಕೆಂಪು ವಲಯದಲ್ಲಿ ಮಾತ್ರ ನಿರ್ಬಂಧ ಮುಂದುವರಿಕೆ

ನವದೆಹಲಿಮೇ.03): ಕಳೆದ 40 ದಿನಗಳಿಂದ ಕ್ಷೌರದಂಗಡಿ ತೆರೆಯದ ಕಾರಣ ಹೇರ್‌ ಕಟಿಂಗ್‌ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೆಂಪು ವಲಯವನ್ನು ಹೊರತುಪಡಿಸಿ ಹಸಿರು ಹಾಗೂ ಕಿತ್ತಳೆ ವಲಯದಲ್ಲಿ ಮೇ 4 ಅಂದರೆ ಸೋಮವಾರದಿಂದ ಕ್ಷೌರದಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ.

ಈ ವಲಯಗಳಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ- ಕಾಮರ್ಸ್‌ ಕಂಪನಿಗಳು ಎಲ್ಲ ಬಗೆಯ ವಸ್ತುಗಳನ್ನು ಪೂರೈಸಲು ನಿಶಾನೆ ತೋರಿದೆ. ಇದರಿಂದಾಗಿ ಎಲೆಕ್ಟ್ರಾನಿಕ್‌ ಉಪಕರಣ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಕಾಯುತ್ತಿರುವವರು ನಿರಾಳರಾಗುವಂತಾಗಿದೆ.

ಲಾಕ್‌ಡೌನ್‌ 3.0 ದೊಡ್ಡ ಸವಾಲು: ಆದರೆ, ಸವಾಲು ಎದುರಿಸಲು ರಾಜ್ಯ ಸರ್ಕಾರ ಸಿದ್ಧ!

ಕೆಂಪು ವಲಯದಲ್ಲಿ ಬಾರ್ಬರ್‌ ಶಾಪ್‌ ಹಾಗೂ ಸಲೂನ್‌ಗಳು ತೆರೆಯುವಂತಿಲ್ಲ. ಅದೇ ರೀತಿ ಇ-ಕಾಮರ್ಸ್‌ ಕಂಪನನಿಗಳು ಅವಶ್ಯವಲ್ಲದ ವಸ್ತುಗಳನ್ನು ಬಿಟ್ಟು ಬೇರೆ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಶನಿವಾರ ಸ್ಪಷ್ಟನೆ ನೀಡಿದೆ.

ಹಸಿರು, ಕಿತ್ತಳೆ ಹಾಗೂ ಕೆಂಪು ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇರುತ್ತದೆ. ಆದರೆ ಅದು ಒಂಟಿ ಅಂಗಡಿಯಾಗಿರಬೇಕು. ಮಾರುಕಟ್ಟೆಅಥವಾ ಮಾಲ್‌ಗಳಲ್ಲಿ ಇರಬಾರದು. ಗ್ರಾಹಕರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಐದಕ್ಕಿಂತ ಹೆಚ್ಚು ಜನರು ಅಂಗಡಿಯಲ್ಲಿ ಇರಕೂಡದು. ಕೊರೋನಾ ಕಾಣಿಸಿಕೊಂಡ ಕಾರಣಕ್ಕೆ ಹೆಚ್ಚಿನ ನಿರ್ಬಂಧ ಹೇರಲಾಗಿರುವ ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಮದ್ಯಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.

click me!