ಮದ್ಯಪ್ರಿಯರಿಗೆ ಗುಡ್​ ನ್ಯೂಸ್​: ಏಪ್ರಿಲ್ 15ರಿಂದ ಸಿಗುತ್ತೆ ಎಣ್ಣೆ?

By Suvarna News  |  First Published Apr 13, 2020, 3:17 PM IST
ಲಾಕ್​ಡೌನ್​ನಿಂದಾಗಿ 22 ದಿನಗಳಿಂದ ರಾಜ್ಯದೆಲ್ಲೆಡೆ ಮಾಲ್, ಬಾರ್, ಪಬ್​ಗಳನ್ನು ಮುಚ್ಚಲಾಗಿದೆ. ಆದರೆ ಇದೀಗ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ 2ನೇ ಹಂತದ ಲಾಕ್‌ಡೌನ್‌ ವೇಳೆ ಸಿಹಿ ಸುದ್ದಿ ಕೊಡುವ ಸಾಧ್ಯತೆಯಿದೆ.

ಬೆಂಗಳೂರು (ಏ. 13): ಬಕಪಕ್ಷಿ ಕಾದು ಕುಳಿತಿರುವ ಕುಡುಕರಿಗೆ ಏಪ್ರಿಲ್ 15ರಿಂದ ಆರಂಭವಾಗಿವ 2ನೇ ಹಂತದ ಲಾಕ್‌ಡೌನ್‌ ವೇಳೆ ಎಣ್ಣೆ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.ಕರ್ನಾಟಕದಲ್ಲಿ ಲಾಕ್​ಡೌನ್​ ಏ. 30ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮತ್ತೆ ಎಣ್ಣೆ ಸಿಗಲ್ಲ ಎಂಬ ನಿರಾಸೆ ಮದ್ಯಪ್ರಿಯರಿದ್ದಾರೆ. ಈಗಾಗಲೇ ಹಲವು ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
"

ಸಿಎಂ ಸುದ್ದಿಗೋಷ್ಠಿ: ಹಾಳಾದ ಭತ್ತ ಬೆಳೆಗೆ 45 ಕೋಟಿ ರಿಲೀಸ್, ಮದ್ಯದ ಬಗ್ಗೆ ಮಾತು..

ಈ ಹಿನ್ನೆಲೆಯಲ್ಲಿ ಕುಡುಕರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿರುವ ಸರ್ಕಾರ ಏಪ್ರಿಲ್ 15ರಿಂದ ಮದ್ಯ ಮಾರಾಟಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಂಎಸ್​ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಈ ಬಗ್ಗೆ ಏಪ್ರಿಲ್ 14ರ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

2ನೇ ಹಂತದ ಲಾಕ್‌ಡೌನ್ ವಿಭಿನ್ನ: ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್..?

ಏಪ್ರಿಲ್ 14ರ ನಂತರ ಮದ್ಯ ಮಾರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿರುವ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಏಪ್ರಿಲ್ ‌ 15ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ, ಬುಧವಾರದಿಂದಲೇ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು. 

ಬಾರ್ ಓಪನ್ ಮಾಡಲು ಅವಕಾಶವಿಲ್ಲ. ಬದಲಿಗೆ ಸರ್ಕಾರದ MSIL ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಸಿಗುವ ಲಕ್ಷಣಗಳಿವೆ. ಒಂದು ಕಡೆ ಆತ್ಮಹತ್ಯೆ, ಮತ್ತೊಂದೆಡೆ ಬಾರ್‌ಗಳ ದರೋಡೆ ಹೀಗೆ ಕೊರೋನಾ ನಡುವೆ ಮದ್ಯ ಪ್ರಿಯರ ಹಾವಳಿ ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ. 

ಈಗಾಗಲೇ ರಾಜ್ಯದಲ್ಲಿ ಗುರುತಿಸಲಾಗಿರುವ ಕೊರೋನಾ ವೈರಸ್ ರೆಡ್ ಮತ್ತು ಆರೇಂಜ್ ಜಿಲ್ಲೆಗಳಲ್ಲಿ ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ MSILಗಳ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡಬಹುದು.
click me!