ಕರಾವಳಿ ಜಿಲ್ಲೆಗಳಿಗೆ MO-4, ಕೆಂಪುಮುಕ್ತಿ ಹಾಗೂ ಉಮಾ ತಳಿಯ ಬಿತ್ತನೆ ಭತ್ತದ ಬೀಜ ಪೂರೈಕೆ

By Sathish Kumar KH  |  First Published Jul 22, 2024, 9:04 PM IST

ಕರಾವಳಿ ಜಿಲ್ಲೆಗಳಲ್ಲಿ ಬೆಳೆಯುವಂತಹ MO-4,  ಸಹ್ಯಾದ್ರಿ ಕೆಂಪು ಮುಕ್ತಿ ಹಾಗೂ ಉಮಾ ತಳಿಯ 2,648 ಕ್ವಿಂಟಾಲ್‌ಗಿಂತ ಅಧಿಕ ಭತ್ತದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ.


ಬೆಂಗಳೂರು (ಜು.22): ರಾಜ್ಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ 2022ರಲ್ಲಿ ಉತ್ಪಾದಿಸಿರುವ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತದ ತಳಿ 40 ವರ್ಷಗಳ ಹಿಂದೆ ಕೇರಳ ರಾಜ್ಯದಿಂದ ಪರಿಚಯಸಲ್ಪಟ್ಟ MO-4 ಗಿಂತಲೂ ಹೆಚ್ಚು ಇಳುವರಿ ಹಾಗೂ ರೋಗನಿರೋಧಕ ಸಾಮರ್ಥ್ಯ ಹೊಂದಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸದಸ್ಯ ಗುರುರಾಜ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ, ಬರ ಪರಿಸ್ಥಿತಿಯಿಂದ ಉತ್ಪಾದನೆ ಕೊರತೆಯಾದರೂ ಸಹ ಕರಾವಳಿಗೆ ಜಿಲ್ಲೆಗಳಿಗೆ 1492 ಕ್ವಿಂಟಾಲ್ MO-4 ಬಿತ್ತನೆ ಬೀಜ ಪೂರೈಸಿದೆ. ಜೊತೆಗೆ ರಾಜ್ಯ ಬೀಜ ನಿಗಮ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗದ ಮೂಲಕ 959.96ಕ್ವಿಂಟಾಲ್ ಪ್ರಮಾಣೀಕೃತ ಬಿತ್ತನೆ ಬೀಜ ಪೂರೈಸಿದೆ. ಹೀಗಾಗಿ, ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಮಾಹಿತಿ ಒದಗಿಸಿದರು.

Latest Videos

undefined

ರೈತರಿಗೆ ಕಳೆದೊಂದು ವರ್ಷದಲ್ಲಿ 1,970 ಕೋಟಿ ರೂ. ಬೆಳೆ ವಿಮೆ ಪರಿಹಾರ ಕೊಡಿಸಿದ್ದೇವೆ: ಕೃಷಿ ಸಚಿವ ಚಲುವರಾಯಸ್ವಾಮಿ

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ 1492.21 ಕ್ವಿಂಟಾಲ್ ಪ್ರಮಾಣಿತ MO-4 ಭತ್ತದ ಬಿತ್ತನೆ ಬೀಜ ಪೂರೈಸಲಾಗಿದೆ. ಇದರ ಜೊತೆಗೆ ಸ್ಥಳೀಯವಾಗಿ ಉತ್ಪಾದಿತ ಸಹ್ಯಾದ್ರಿ ಕೆಂಪುಮುಕ್ತಿ 730 ಕ್ವಿಂಟಾಲ್ ಹಾಗೂ 196.50 ಕ್ವಿಂಟಾಲ್ ಉಮಾ ತಳಿ 229.50 ಕ್ವಿಂಟಾಲ್ ಜ್ಯೋತಿ ತಳಿ ಬಿತ್ತನೆ ಬೀಜಗಳನ್ನು ನೀಡಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಒಟ್ಟು 2,648 ಕ್ವಿಂಟಾಲ್‌ಗಿಂತ ಅಧಿಕ ಬಿತ್ತನೆ ಬೀಜಗಳನ್ನು ಕರ್ನಾಟಕ ರಾಜ್ಯ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.

ಸದರಿ ಸಾಲಿನಲ್ಲಿ ಕರಾವಳಿ ಜಿಲ್ಲೆಗಳಿಗೆ ಸುಮಾರು 2,400 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ಬೀಡಿಕೆ ಇತ್ತು. ಇದರಲ್ಲಿ 1492.21 ಕ್ವಿಂಟಾಲ್ MO-4 ಹಾಗೂ 959.96 ಕ್ವಿಂಟಾಲ್ ಸಹ್ಯಾದ್ರಿ ಕೆಂಪುಮುಕ್ತಿ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. ಈ ಮೂಲ ನಿಗದಿತ ಬೇಡಿಕೆಗಿಂತ ಹೆಚ್ಚುವರಿ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗಿದೆ. ಈ ಮೂಲಕ ಕೃಷಿ ಇಲಾಖೆಯು ರಾಜ್ಯದ ರೈತರಿಗೆ ಕೃಷಿ ಕಾರ್ಯಗಳಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ಸೂಕ್ತ ಅವಧಿಯಲ್ಲಿ ಪೂರೈಕೆ ಮಾಡಿದೆ ಎಂದು  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದರು.

click me!