ಸಾರ್ವಜನಿಕವಾಗಿ ಆಚರಿಸಲ್ಪಡುವ ಹಬ್ಬಗಳಿಗೆ ರಾಜ್ಯ ಸರ್ಕಾರ ಕಡಿವಾಣ ..?

By Suvarna News  |  First Published Jul 18, 2020, 5:41 PM IST

ಹಿಂದೂ ಹಬ್ಬಗಳ ಆಚರಣೆಗೂ ಕೊರೋನಾ ಭೀತಿ ಶುರುವಾಗಿದ್ದು, ಈ ವರ್ಷ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕುಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.


ಬೆಂಗಳೂರು, (ಜುಲೈ.18): ಹಿಂದೂ ಧರ್ಮವು ವರ್ಷದಾದ್ಯಂತ ಅನೇಕ ಹಬ್ಬಗಳನ್ನು ಹೊಂದಿದೆ. ಇದೀಗ ಉಳಿರುವ ಹಬ್ಬಳಿಗೆ ಕೊರೋನಾ ಭೀತಿ ಶುರುವಾಗಿದೆ.

ಹೌದು... ಕೊರೋನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರಿ ಯಾವುದೇ ಆಚರಣೆ ಮಾಡುವುದು ಸರಿಯಲ್ಲ. ಹೀಗಾಗಿ ರಾಜ್ಯದಲ್ಲಿ ಈ ವರ್ಷ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

Tap to resize

Latest Videos

ಈ ಬಗ್ಗೆ ರಾಜ್ಯ ಸರ್ಕಾರ ಜನರ ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಮಾರ್ಗಸೂಚಿ ಪ್ರಕಟಿಸಲು ಪ್ಲಾನ್ ಮಾಡಿದೆ. ಕೇಂದ್ರ ಸರ್ಕಾರದ ಸಲಹೆಯಂತೆ ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆಗಳಿವೆ.

ದೇಸಿ ಕೊರೋನಾ ಲಸಿಕೆ ಮಾಡುತ್ತಾ ಕಮಾಲ್, ದುಬೈನಲ್ಲಿ IPL?ಜು.18ರ ಟಾಪ್ 10 ಸುದ್ದಿ!

ಮಠ, ದೇವಾಲಯಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಆಚರಣೆಯಲ್ಲೂ ವ್ಯತ್ಯಯ ಖಚಿತವಾಗಿದ್ದು, ಜನರ ಸೇರುವಿಕೆಗೆ ಕಡಿವಾಣ ಹಾಕಲು ಅನಿವಾರ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸುವ ಮುನ್ನ ಧಾರ್ಮಿಕ ಮುಖಂಡರೊಂದಿಗೂ ಸಹ ಚರ್ಚೆ ಮಾಡಲಿದೆಯಂತೆ. ಈ ಬಗ್ಗೆ ಸುವರ್ಣ ನ್ಯೂಸ್ ಗೆ ಮುಜರಾಯಿ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಮುಂಬರುವ ನಾಗರಪಂಚಮಿ, ವರಲಕ್ಷ್ಮೀ ವೃತ, ಕೃಷ್ಣಾಷ್ಟಮಿ, ಗಣೇಶೋತ್ಸವ ಹಬ್ಬದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಸಿದ್ಧತೆ ನಡೆದಿದ್ದು, ಹಬ್ಬ ಆಚರಣೆಗೆ ಅಡ್ಡಿ ಇಲ್ಲ. ಆದ್ರೆ,  ಅದ್ದೂರಿತನಕ್ಕೆ ಬ್ರೇಕ್ ಬೀಳುವುದು ಖಚಿತ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆಗಳಿವೆ.

ದಸರಾಗೂ ಭೀತಿ
ಹೌದು... ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ದಸರಾಗೂ ಕೊರೋನಾ ಭೀತಿ ಎದುರಾಗಿದೆ. ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲ್ಪಡುವ ದಸರಾವನ್ನ ಮನೆಯಲ್ಲೇ ಸರಳವಾಗಿ ಆಚರಿಸುವ ಸಂದಿಗ್ಧ ಪರಿಸ್ಥಿತಿ ಇದೆ. ಒಂದು ವೇಳೆ ಅಕ್ಟೋಬರ್ ವೇಳೆಗಾಗಲೇ ಕೊರೋನಾ ನಿಯಂತ್ರಣಕ್ಕೆ ಬಂದರೆ ದಸರಾಕ್ಕೆ ಆಚರಣೆಗೆ ಯಾವುದೇ ಅಡೆತಡೆಯಾಗುವುದಿಲ್ಲ. ಸದ್ಯದ ಪರಿಸ್ಥಿತಿ ಮುಮದೆ ಇದ್ದರೆ  ದಸರಾಕ್ಕೂ ಬ್ರೇಕ್ ಬೀಳುವುದು ಗ್ಯಾರಂಟಿ. 

click me!