ಜಾನುವಾರು ಸಂರಕ್ಷಣೆ: ಪುಣ್ಯಕೋಟಿ ದತ್ತು ಯೋಜನೆಗೆ ಜು. 28 ಚಾಲನೆ

By Ravi Nayak  |  First Published Jul 23, 2022, 1:59 PM IST
  • ರಾಜ್ಯದ ಜಾನುವಾರುಗಳ ಸಂರಕ್ಷಣೆಗೆ ಪುಣ್ಯಕೋಟಿ ಯೋಜನೆ ಜಾರಿ.
  • ಮಹತ್ವಾಕಾಂಕ್ಷೆಯ ಯೋಜನೆಗೆ ಜುಲೈ 28 ರಂದು ಸಿಎಂ ಚಾಲನೆ.
  • ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸಾರಥ್ಯದಲ್ಲಿ ಮೆಗಾ ಯೋಜನೆ.

ವರದಿ: ಆನಂದ ಪರಮೇಶ್ವರ್ ಬೈದನಮನೆ

ಬೆಂಗಳೂರು (ಜು.23): "ಗೋಹತ್ಯೆ ನಿರ್ಬಂಧಕ ಕಾಯ್ದೆ"ಯನ್ನು ಜಾರಿ ಮಾಡುವ ಮೂಲಕ ಹೆಸರಾಗಿರುವ ರಾಜ್ಯದ ಪಶು ಸಂಗೋಪನಾ ಇಲಾಖೆ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ರಾಜ್ಯದಲ್ಲಿರುವ ಜಾನುವಾರುಗಳ ಸಂರಕ್ಷಣೆಯನ್ನು ಸಾರ್ವಜನಿಕರ ಸಹಕಾರದ ಮೂಲಕ ಕೈಗೆತ್ತಿಕೊಳ್ಳಲು ತೀರ್ಮಾನಿಸಿರುವ ಸಚಿವ ಪ್ರಭು ಚೌಹಾಣ್ ಜನಪ್ರಿಯ ಯೋಜನೆಗೆ ಚಾಲನೆ ನೀಡ್ತಿದ್ದಾರೆ. ಗೋಶಾಲೆಗಳಲ್ಲಿರುವ ಗೋವುಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ದತ್ತು ಪಡೆಯುವ "ಪುಣ್ಯಕೋಟಿ ದತ್ತು ಯೋಜನೆ"ಗೆ ಪ್ರಭು ಚೌಹಾಣ್ ಚಾಲನೆ ನೀಡಲಿದ್ದಾರೆ. 

Tap to resize

Latest Videos

ಗೋಹತ್ಯೆ(cow slaughter) ನಿಷೇಧದ ಬಳಿಕ ರಾಜ್ಯದಲ್ಲಿ ಹಲವು ಗೋಶಾಲೆಗಳ ಮೂಲಕ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ.  ಆದರೆ ಗೋವುಗಳ ರಕ್ಷಣೆ ಮತ್ತು ನಿರ್ವಹಣೆ ಕಷ್ಟವಾಗ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರ ಪಡೆಯಲು ಪಶು ಸಂಗೋಪನಾ ಇಲಾಖೆ(Animal Husbandry Department) ತೀರ್ಮಾನಿಸಿದೆ. ಅದಕ್ಕಾಗಿಯೇ ಪುಣ್ಯಕೋಟಿ ದತ್ತು ಯೋಜನೆ(Punyakoti dattu Yojane)ಯನ್ನು ಜಾರಿ ಮಾಡಲಾಗುತ್ತಿದೆ.  ಈ ಯೋಜನೆಯ ಮೂಲಕ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಗೋವುಗಳನ್ನು ಸಾರ್ವಜನಿಕರು ನೇರವಾಗಿ ದತ್ತು ಪಡೆಯಬಹುದು. ಸರ್ಕಾರ ಆರಂಭ ಮಾಡ್ತಿರುವ ವೆಬ್ ಸೈಟ್(Website) ಮೂಲಕ ನೊಂದಣಿ(Register) ಮಾಡಿಸಿಕೊಂಡು, ಗೋವುಗಳನ್ನು ದತ್ತು ಪಡೆಯಬಹುದು. ಇದಕ್ಕೆ ವಾರ್ಷಿಕ 11 ಸಾವಿರ ರೂಪಾಯಿ ಪಾವತಿ(Pay) ಮಾಡಬೇಕು. ಪಾವತಿ ಮಾಡಿ ಗೋವುಗಳನ್ನು ದತ್ತು ಪಡೆದುಕೊಂಡ ಬಳಿಕ ಗೋವುಗಳ ಕುರಿತು ಸಮರ್ಪಕ ಮಾಹಿತಿಯನ್ನು ದತ್ತು ಪಡೆದವರಿಗೆ ನೀಡಲಾಗುವುದು.

ಐಶಾರಾಮಿ ಕಾರಿನಲ್ಲಿ ಜಾನುವಾರು ಕಳವು: ಓರ್ವನ ಬಂಧನ

 ಗೋವಿನ ಬಗ್ಗೆ ಪ್ರೀತಿ ಮತ್ತು ಗೌರವ ಇರುವ ಜನರು ಈ ಯೋಜನೆಯ ಮೂಲಕ ಗೋವುಗಳನ್ನು ದತ್ತು ಪಡೆಯಲು ಅನುಕೂಲವಾಗಲಿದೆ. ಇದ್ರಿಂದ ಗೋಶಾಲೆಗಳಲ್ಲಿರುವ ಗೋವಿನ ನಿರ್ವಹಣೆಯೂ ಆಗಲಿದೆ. ಜೊತೆಗೆ ಗೋವಿನ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸರ್ಕಾರದೊಂದಿಗೆ ಕೈಜೋಡಿಸಿದ ಸಂತೃಪ್ತಿ ಸಹ ಪ್ರಾಣಿಪ್ರಿಯರದ್ದಾಗಲಿದೆ. 

ಇಂತಹ ಮಹತ್ವದ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommaii ಅವರು ಜುಲೈ 28 ರಂದು ಹಸಿರು ನಿಶಾನೆ ನೀಡಲಿದ್ದಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷವಾಗ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಪ್ರಿಯವಾದ  ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ದೊರೆಯಲಿದೆ ಅಂತ ಸಚಿವ ಪ್ರಭು ಚೌಹಾಣ್Prabhu Chawla) ತಿಳಿಸಿದ್ದಾರೆ. ಇದರ ಜೊತೆಗೆ ಸಚಿವ ಪ್ರಭು ಚೌಹಾಣ್ ಮತ್ತೊಂದು ಸಹಭಾಗಿತ್ವದ ಯೋಜನೆಗೂ ಚಾಲನೆ ನೀಡಿದ್ದಾರೆ. ಗೋವುಗಳ ರಕ್ಷಣೆಗೆ ಪ್ರತಿಯೊಬ್ಬ ಪ್ರಾಣಿಪ್ರಿಯರು(animal lovers) ದೇಣಿಗೆ(Donate) ನೀಡುವ ಯೋಜನೆಯನ್ನು ಸಹ ಆರಂಭ ಮಾಡ್ತಿದ್ದಾರೆ. ಸಾರ್ವಜನಿಕರು ಗೋಶಾಲೆಗಳಿಗೆ ಕನಿಷ್ಠ 10 ರೂಪಾಯಿಯಿಂದ ತಮ್ಮ ಶಕ್ತ್ಯಾನುಸಾರ ಆರ್ಥಿಕ ನೆರವು ನೀಡಲು ಅವಕಾಶ ನೀಡಲಾಗಿದೆ. ಪುಣ್ಯಕೋಟಿ ದತ್ತು ಪೋರ್ಟಲ್( https://punyakoti.karahvs.in/ ) ನಲ್ಲಿ ಈ ಕುರಿತು ಸೂಕ್ತ ಮಾಹಿತಿ ನೀಡಲಾಗಿದ್ದು, ಇದನ್ನು ಬಳಕೆ ಮಾಡಿಕೊಂಡು ಹಣವನ್ನು ನೀಡಬಹುದಾಗಿದೆ. ಇದ್ರಿಂದ ಗೋವುಗಳ ನಿರ್ವಹಣೆಗೆ ಅನುಕೂಲವಾಗಲಿದೆ. 

Chikkamagaluru; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ

ಅಲ್ಲದೇ ಜಾನುವಾರುಗಳಿಗೆ ಆಹಾರ ನೀಡುವ ಯೋಜನೆಯನ್ನು ಸಹ ಸಚಿವ ಪ್ರಭು ಚೌಹಾಣ್ ಆರಂಭ ಮಾಡಿದ್ದಾರೆ. ಈ ಯೋಜನೆ ಮೂಲಕ ಶುಭ ಸಂದರ್ಭಗಳಲ್ಲಿ ಸಾರ್ವಜನಿಕರು ಗೋವುಗಳಿಗೆ ಆಹಾರ ನೀಡಬಹುದು. ಇದಕ್ಕಾಗಿ ಪ್ರತಿವೊಂದಕ್ಕೆ 70 ರೂಪಾಯಿಗಳಂತೆ ವಂತಿಗೆ ನೀಡಬಹುದಾಗಿದೆ. ಈ ಹಣವನ್ನು ಜಾನುವಾರುಗಳಿಗೆ ಮೇವು ನೀಡಲು ಬಳಕೆ ಮಾಡಲಾಗುವುದ.  ಸರ್ಕಾರದ ಒಂದು ವರ್ಷದ ಸಾಧನೆ ಸಮಾವೇಶದ ಹಿನ್ನೆಲೆಯಲ್ಲಿ ಗೋವುಗಳ ರಕ್ಷಣೆ ಮತ್ತು ನಿರ್ವಹಣೆಗೆ ಸಚಿವ ಪ್ರಭು ಚೌಹಾಣ್ ಜಾರಿ ಮಾಡಿರುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಹುತೇಕ ಶಾಸಕರು, ವಿಧಾನಪರಿಷತ್ ಸದಸ್ಯರು., ಪ್ರಮುಖ ಕಂಪನಿಗಳು ಸಹ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

click me!