
ಬೆಂಗಳೂರು: ಕಂಟ್ರಾಕ್ಟರ್ ಅಸೋಸಿಯೇಷನ್ ಭಾರೀ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಬಿಬಿಎಂಪಿಯಲ್ಲಿ ಇಟ್ಟಿರುವ 10% FDR ವಾಪಸ್ಸು ಕೊಡಲು ಒಪ್ಪಿಗೆ ಸೂಚಿಸಿದೆ. ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ ಕಂಟ್ರಾಕ್ಟರ್ FDR ವಾಪಸ್ಸು ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ಮಾಡಿದ್ದಾರೆ. ಈ ಹಿಂದೆ ಬಾಕಿ ಹಣ ಪಾವತಿಸುವಂತೆ ಸರ್ಕಾರವನ್ನ ಸಾಕಷ್ಟು ಬಾರಿ ಕಂಟ್ರಾಕ್ಟರ್ ಅಸೋಸಿಯೇಷನ್ ಒತ್ತಾಯಿಸಿತ್ತು. ವಿವಿಧ ಸಮಸ್ಯೆಗಳನ್ನ ಮುಂದಿಟ್ಟು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಅಸೋಸಿಯೇಷನ್ ಬರೆದಿತ್ತು. ಆದ್ರು ಕಂಟ್ರಾಕ್ಟರ್ ಅಸೋಸಿಯೇಷನ್ ಬೇಡಿಕೆಯನ್ನು ಸರ್ಕಾರ ಈಡೇರಿಸಿರಲಿಲ್ಲ. ಇದ್ರ ಬೆನ್ನಲ್ಲೇ ಸರ್ಕಾರದ ವಿರುದ್ದ ಕಂಟ್ರಾಕ್ಟರ್ ಅಸೋಸಿಯೇಷನ್. ಆಕ್ರೋಶ ವ್ಯಕ್ತಪಡಿಸಿತ್ತು.
ಹೀಗಾಗಿ ಸಂಜೆ 4.30 ಕ್ಕೆ ಕಂಟ್ರಾಕ್ಟರ್ ಅಸೋಸಿಯೇಷನ್ ಜೊತೆ ಡಿಸಿಎಂ ತಮ್ಮ ಸರ್ಕಾರಿ ನಿವಾಸದಲ್ಲಿ ಸಭೆ ಕರೆದಿದ್ದರು. ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಭೇಟಿಗೆ 4.30 ಕ್ಕೆ ಸಮಯ ನೀಡಿದ್ದ ಡಿಸಿಎಂ ಡಿಕೆಶಿ, ಒಂದುವರೆ ಗಂಟೆ ಕಳೆದರೂ ಸರ್ಕಾರಿ ನಿವಾಸಕ್ಕೆ ಆಗಮಿಸಿರಲಿಲ್ಲ. ಕೊನೆಗೂ ಸುಮಾರು 6 ಗಂಟೆಗೆ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಸಭೆಗೆ ಡಿಸಿಎಂ ಡಿಕೆಶಿವಕುಮಾರ್ ಆಗಮಿಸಿ ಸಭೆ ನಡೆಸಿದರು.
ಗುತ್ತಿಗೆದಾರರು ಏನ್ ಹೇಳಿದ್ರು ಅದನ್ನ ಮೊದಲು ನನಗೆ ಹೇಳಿ ಎಂದು ಡಿಕೆಶಿ ಮಾಧ್ಯಮದವರನ್ನು ಪ್ರಶ್ನಿಸಿದ್ರು, ಹೈಕಮಾಂಡ್‌ನ ಮೊದಲು ಹೋಗಿ ಭೇಟಿ ಮಾಡಲಿ. ನಾನು ಆದಷ್ಟು ಕ್ಲಿಯರ್ ಮಾಡಿದ್ದೇನೆ.ಯಡಿಯೂರಪ್ಪ ಕಾಲದಲ್ಲಿ,ಬೊಮ್ಮಾಯಿ ಕಾಲದಲ್ಲಿ ಬಜೆಟ್ ಇಲ್ಲದೇ ಕೆಲಸ ಕೊಟ್ಟಿದ್ದಾರೆ. ನಾನು ಆದಷ್ಟು ಕ್ಲೀಯರ್ ಮಾಡಿದ್ದೇನೆ. ಈಗ ಒಂದೊಂದು ಡಿಪಾರ್ಟ್ಮೆಂಟ್‌ನಲ್ಲಿ 50 ಕೋಟಿ 60 ಕೋಟಿ ಇದೆ. ರಾಜ್ಯದ ಉದ್ದಗಲಕ್ಕೂ ಗುತ್ತಿಗೆದಾರರು ಇದ್ದಾರೆ. ಪರ್ಸಂಟೇಜ್ ಬಗ್ಗೆ ಮಾತಾಡಿದ್ದಾರೆ. ಅದನ್ನ ಅಫೀಡವಿಟ್ ಫೈಲ್ ಮಾಡಿ ಕಂಪ್ಲೇಂಟ್ ಮಾಡೋಣ,ಇನ್ವೆಸ್ಟಿಗೇಷನ್ ಮಾಡೋಣ ಎಂದಿದ್ದೇನೆ. ಅದಕ್ಕೆ ಅವರು ನಾವ್ ಹಾಗೆ ಹೇಳಿಲ್ಲ ಎನ್ನುತ್ತಾರೆ. ಸರ್ಕಾರನ ಯಾರೂ ಹೆದರಿಸೊಕಾಗಲ್ಲ. ಅವರಿಗೆ ಏನ್ ಸಹಾಯ ಮಾಡಬೇಕೋ ಮಾಡ್ಕೊಂಡು ಬಂದಿದ್ದೇನೆ. ದೊಡ್ಡ ದೊಡ್ಡ ಕಂಟ್ರಾಕ್ಟರ್‌ಗೆ ಎರಡು ಎರಡು ಸಾವಿರ ಕೋಟಿ ಕೊಡಬೇಕು. ನಾನು ವಿರೋದ ಪಕ್ಷದಲ್ಲಿ ಇದ್ದಾಗ ಅವರಿಗೆ ಹೇಳಿದ್ದೆ. ದುಡ್ಡು ಇಲ್ಲ ನೀವ್ಯಾರು ಟೆಂಡರ್ ತಕೊಬೇಡಿ ಎಂದಿದ್ದೆ. ಬೇಕಾದರೆ ನೀವು ಟಿವಿ ಅವರು ಅದನ್ನ ರಿಪ್ಲೇ ಮಾಡಿ. 17 ಸಾವಿರ ಕೋಟಿ ಬಿಲ್ ನೀರಾವರಿ ಇಲಾಖೆಯಲ್ಲಿದೆ. 200 ಕೋಟಿ ಮಾತ್ರ ಹಣ ಇದೆ. ಯಾರಿಗೇ ಕೊಡಲಿ. ಅದಕ್ಕೆ ಒಂದು ಸಿಸ್ಟಮ್ ತರ್ತಿದ್ದೇನೆ.
ಸಭೆ ಬಳಿಕ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿ, ಡಿಸೆಂಬರ್ ತಿಂಗಳೊಳಗೆ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಇನ್ನೆರಡು ದಿನದಲ್ಲಿ ಸಿಎಂ ಜೊತೆ ಸಭೆ ಮಾಡುತ್ತೇನೆ ಎಂದಿದ್ದಾರೆ. ಇದ್ರ ಜೊತೆಗೆ ಪ್ಯಾಕೇಜ್ ಸಿಸ್ಟಮ್ ಇರುವ ಟೆಂಡರ್ ತೆಗೆಯುವ ಬಗ್ಗೆ ಸಿಎಂ ಜೊತೆ ಚರ್ಚಿಸುವ ಬಗ್ಗೆ ಹೇಳಿದ್ದಾರೆ. ನಾವು ಕಮೀಷನ್ ಬಗ್ಗೆ ಮಾತನಾಡಿಲ್ಲ. 80% ಕಮೀಷನ್ ಇದೆ ಅಂತ ಹೇಳುತ್ತಿದ್ದಾರೆ ಅಂತ ಡಿಸಿಎಂ ಕೇಳಿದ್ರು. ರಾಜಕೀಯ ಪ್ರೇರಿತ ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದೇವೆ. ಕೋರ್ಟ್ ಗೆ ಹೋಗಿ ಅಂತ ಸಿಎಂ ಹೇಳಿದ್ದಾರೆ. ನಾವು ಕೋರ್ಟಿಗೂ ಹೋಗಲ್ಲ ಎಲ್ಲಿಗೂ ಹೋಗಲ್ಲ ನಾವು ಇಲ್ಲಿಯೇ ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಮತ್ತು ಹೈಕಮಾಂಡ್ ನ್ನ ಭೇಟಿ ಮಾಡುತ್ತೇವೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ 50 ಲಕ್ಷದ ಪೇಮೆಂಟ್ ನೀಡುತ್ತೇನೆ ಎಂದಿದ್ದಾರೆ. 33 ಸಾವಿರ ಕೋಟಿ ಕೊಡಲಿಲ್ಲ ಅಂದ್ರೆ ಹೋರಾಟ ಮಾಡುವುದಾಗಿ ಡಿಸಿಎಂಗೆ ತಿಳಿಸಿದ್ದೇವೆ. ಜನವರಿಯಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಅಂತ ಡಿಸಿಎಂ ಹೇಳಿದ್ರು. ನಾವು ಡಿಸೆಂಬರ್ ಗೆ ಬಿಡುಗಡೆ ಮಾಡಿ ಅಂತ ಕೇಳಿದ್ವೀ ಒಪ್ಪಿದ್ದಾರೆ. ನೀರಾವರಿಯ 4 ನಿಗಮಗಳಿಗೆ ಸಂಬಂಧಪಟ್ಟ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ