ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ: ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್

By Suvarna NewsFirst Published Jun 19, 2021, 9:21 PM IST
Highlights

* ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್
* ಮದ್ಯ ಖರೀದಿಗೆ ಮತ್ತಷ್ಟು ಸಮಯಾವಕಾಶ
* ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ

ಬೆಂಗಳೂರು, (ಜೂನ್.19): ರಾಜ್ಯದ 16 ಜಿಲ್ಲೆಗಳಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆಗೆ ಬಿಎಸ್‌ವೈ ಸರ್ಕಾರ ತೀರ್ಮಾನಿಸಿದೆ.  

ರಾಜ್ಯದಲ್ಲಿ ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ.

ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಮದ್ಯ ಖರೀದಿ ಸಮಯ ಬೆಳಗ್ಗೆ 5ರಿಂದ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅದು ಕೇವಲ ಪಾರ್ಸೆಲ್ ಗೆ ಮಾತ್ರ.

ರಾಜ್ಯದಲ್ಲಿ ಮತ್ತಷ್ಟು ಲಾಕ್‌ಡೌನ್‌ ಸಡಿಲಿಕೆ, ಬಸ್ ಓಡಾಡುತ್ತಿವೆ, ಕಂಡೀಷನ್ಸ್ ಅಪ್ಲೈ

ಬಾರ್ ಗಳಲ್ಲಿ ಕುಳಿತು ಮದ್ಯ ಸೇವಿಸುವಂತಿಲ್ಲ ಎಂಬ ಶರತ್ತು ವಿಧಿಸಲಾಗಿದೆ. ಇನ್ನು ಎಸಿ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಸಂಜೆ 5 ಗಂಟೆಯವರೆಗೆ ಶೇ.50ರಷ್ಟು ಜನರನ್ನು ಒಳಗೊಂಡು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.

ಅನ್‌ಲಾಕ್‌ ಜಿಲ್ಲೆಗಳು
ರಾಯಚೂರು, ಕೊಪ್ಪಳ, ಕಲಬುರಗಿ, ರಾಮನಗರ, ಉತ್ತರ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ರಾಮನಗರ, ಹಾವೇರಿ,ಬೀದರ್, ಬೆಳಗಾವಿ, ಕೋಲಾರ, ಯಾದಗಿರಿ ಹಾಗೂ ಬಾಗಲಕೋಟೆ.

ನೈಟ್ ಕರ್ಫ್ಯೂ
• ಪ್ರತಿ ದಿನ ನೈಟ್‌ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ಇರುತ್ತದೆ.  
• ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.  
• ಬಸ್‌ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಿದೆ.

click me!