ಕರ್ನಾಟಕ ಸರ್ಕಾರವು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಾಯುವ ಹಕ್ಕನ್ನು ನೀಡುವ ಆದೇಶ ಹೊರಡಿಸಿದೆ. ಈ ಆದೇಶವು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ರೋಗಿಗಳ ಘನತೆಯಿಂದ ಮರಣವನ್ನು ಖಚಿತಪಡಿಸುತ್ತದೆ.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ. ಅದರ ಅಡಿಯಲ್ಲಿ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ, ಆರೋಗ್ಯದಲ್ಲಿ ಗುಣಮುಖ ಆಗದಿರುವ ವ್ಯಕ್ತಿಗಳಿಗೆ ಸಾಯುವ ಹಕ್ಕು ನೀಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿ ಮಾಡುತ್ತಾ, ಈ ಆದೇಶ ರೋಗಿಗಳ ಘನತೆಯಿಂದ ಮರಣವನ್ನು ಖಚಿತಪಡಿಸಲು ಪರಿಹಾರ ಕಲ್ಪಿಸುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ.
ಆದೇಶದ ಪ್ರಮುಖ ಅಂಶಗಳು:
ಈ ಆದೇಶವು ಮುಖ್ಯವಾಗಿ ಲೈಫ್ ಸಪೋರ್ಟ್ ನಲ್ಲಿ ಮಾತ್ರ ಜೀವಿಸುತ್ತಿದ್ದು, ಆರೋಗ್ಯದಲ್ಲಿ ಏನೇ ಚಿಕಿತ್ಸೆ ಮಾಡಿದರೂ ಚೇತರಿಕೆ ಕಾಣದಿರುವ ಅಥವಾ ಭವಿಷ್ಯದಲ್ಲಿ ಚೇತರಿಸಿಕೊಳ್ಳದ ರೋಗಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ರೋಗಿಯ ಕುಟುಂಬಸ್ಥರ ಮನವಿಯನ್ನು ಆಧರಿಸಿ, ವೈದ್ಯರ ತಂಡವು ಕಾರ್ಯ ನಿರ್ವಹಿಸಿ ಘನತೆಯಿಂದ ಸಾಯುವ ಹಕ್ಕನ್ನು ನಿಡಲಾಗುತ್ತದೆ.
1. ವೈದ್ಯರ ಬೋರ್ಡ್ ನೇಮಕ: ರೋಗಿಯ ಸ್ಥಿತಿಯನ್ನು ಪರಿಶೀಲಿಸಲು ಪ್ರಾಥಮಿಕ ಮತ್ತು ದ್ವಿತೀಯ ವೈದ್ಯರ ಬೋರ್ಡ್ ಅನ್ನು ನೇಮಿಸಲಾಗುತ್ತದೆ. ಪ್ರಾಥಮಿಕ ಬೋರ್ಡ್‌ನಲ್ಲಿ ಮೂರು ವೈದ್ಯರು ಇರುತ್ತಾರೆ. ಆದರೆ, ದ್ವಿತೀಯ ಬೋರ್ಡ್‌ನಲ್ಲಿ ಮೂವರು ವೈದ್ಯರು ಇರಲಿದ್ದು, ಇದರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ವೈದ್ಯರು ಇರಬೇಕು.
2. ಬೋರ್ಡ್ ವರದಿ ಪರಿಶೀಲನೆ: ಪ್ರಾಥಮಿಕ ಬೋರ್ಡ್ ರೋಗಿಯ ಸ್ಥಿತಿಯ ಕುರಿತು ವರದಿ ನೀಡಿದ ಬಳಿಕ, ದ್ವಿತೀಯ ಬೋರ್ಡ್ ಅದರ ಪರಿಶೀಲನೆಯನ್ನು ನಡೆಸುತ್ತದೆ. ನಂತರ, ಈ ವರದಿ ಕೋರ್ಟ್ ಗೆ ಸಲ್ಲಿಸಲಾಗುತ್ತದೆ.
3. ಕೋರ್ಟ್ ಅನುಮೋದನೆ: ಕೋರ್ಟ್‌ನ ಅನುಮೋದನೆಗಾಗಿ ವರದಿಯನ್ನು ಸಲ್ಲಿಸಿದ ಬಳಿಕ, ಕೋರ್ಟ್ ನ್ಯಾಯಪ್ರಜ್ಞೆಯಿಂದ ನಿರ್ಧಾರವನ್ನು ಹೊರಡಿಸುತ್ತದೆ. ತದನಂತರ, ವೈದ್ಯರು ಲೈಫ್ ಸಪೋರ್ಟ್ ಸಿಸ್ಟಮ್ ಅನ್ನು ರೋಗಿಯ ದಯನೀಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆದೇಶವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಈ ದೇವಸ್ಥಾನಕ್ಕೆ ಬಂದ ಹುಂಡಿ ಹಣ ಎಣಿಸಿ ಸುಸ್ತಾದ ಭಕ್ತರು! ಬಂದಿದ್ದೆಷ್ಟು ಕೋಟಿ?
ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಘನತೆಯ ರಕ್ಷಣೆ:
ಈ ಆದೇಶವು ಹೇಗೆ ರೋಗಿಗಳ ಜೀವಿತದ ಅಂತಿಮ ಹಂತಗಳಲ್ಲಿ ಅವರ ಘನತೆಯನ್ನು ರಕ್ಷಿಸುವುದನ್ನು ದೃಢಪಡಿಸುತ್ತದೆ. ಏಕೆಂದರೆ, ಕೇವಲ ಲೈಫ್ ಸಪೋರ್ಟ್ ಅಂಶಗಳಿಂದ ಮಾತ್ರವೇ ಬದುಕಿರುವ ವ್ಯಕ್ತಿಗಳಿಗೆ, ಕೊನೆಯ ಕ್ಷಣಗಳನ್ನು ಯಾವುದೇ ನೋವಿಲ್ಲದೇ, ಸಂಕಟವನ್ನು ಅನುಭವಿಸದೇ ಘನತೆಯಿಂದ ಸಾಯುವುದಕ್ಕೆ ಅವಕಾಶವನ್ನು ನೀಡಲಾಗುತ್ತದೆ. ಕರ್ನಾಟಕ ಸರ್ಕಾರವು ಈ ಆದೇಶವನ್ನು ಹೊರಡಿಸುವ ಮೂಲಕ, ಅಂತಿಮ ದಯನೀಯ ನೆರವನ್ನು ನೀಡಲಾಗುತ್ತದೆ.
ಇದರಲ್ಲಿ ಶಾಸನ ಹಾಗೂ ಕಾನೂನು ಅಂಶಗಳು ಸೇರ್ಪಡೆ: ಈ ಆದೇಶವು ಕೇವಲ ವೈದ್ಯಕೀಯ ಅಥವಾ ಔಷಧೀಯವಾಗಿ ಮಾತ್ರವಲ್ಲದೆ, ಸಂವಿಧಾನ ಮತ್ತು ಕಾನೂನು ದೃಷ್ಟಿಕೋನದಿಂದ ಪರಿಶೀಲನೆ ಮಾಡಲಾಗುತ್ತದೆ. ಈ ಎಲ್ಲಾ ಕ್ರಮಗಳು ವಿವೇಕಪೂರ್ವಕವಾಗಿ ಮತ್ತು ನ್ಯಾಯಪ್ರಜ್ಞೆಯಿಂದ ನಡೆಯಬೇಕಾಗಿದೆ.
ಇದನ್ನೂ ಓದಿ: ಇವರಿಗೆಲ್ಲಾ ₹10-25 ಲಕ್ಷದವರೆಗೆ ಸರ್ಕಾರದಿಂದ ಸಾಲ; ಮತ್ತೆ ದೊರೆಯುತ್ತೆ 35% ಸಬ್ಸಿಡಿ