* ಹೊಸದಾಗಿ ಮತ್ತೆ 22 ತಾಲೂಕುಗಳು ಪ್ರವಾಹ ಪೀಡಿತ ಎಂದು ಘೋಷಿಸಿದ ರಾಜ್ಯ ಸರ್ಕಾರ
* ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ
* ಕುಮಾರಸ್ವಾಮಿ ಪ್ರತಿಭಟನೆಗೆ ಮಣಿದ ಸರ್ಕಾರ
ಬೆಂಗಳೂರು, (ಆ.17): ಹೆಚ್ಚುವರಿಯಾಗಿ ರಾಜ್ಯದ 22 ತಾಲೂಕುಗಳನ್ನ ಪ್ರವಾಹ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ವಿಧಾನಸೌಧದಲ್ಲಿ ಇಂದು (ಆ.17) ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ಹಿಂದೆ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಆದ್ರೆ, ರಾಜ್ಯದ ಇನ್ನೂ ಹಲವಾರು ತಾಲೂಕುಗಳು ಇತ್ತೀಚೆಗೆ ಸುರಿದ ಮಳೆಗೆ ಪ್ರವಾಹ ಪೀಡಿತವಾಗಿದೆ. ಇದೀಗ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಅತಿವೃಷ್ಠಿ/ಪ್ರವಾಹ ಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.
undefined
ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಧರಣಿ: ಮೂಡಿಗೆರೆ ಶಾಸಕನ ಪ್ರತಿಭಟನೆ!
ಇದರೊಂರಿಗೆ ಒಟ್ಟು 83 ಪ್ರವಾಹ ಪೀಡಿತ ತಾಲೂಕುಗಳಾದಂತಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿಮ ಬಬಲೇಶ್ವರ, ನಿಡಗುಂದಿ, ಕೋಲಾರ, ಮುದ್ದೆಬಿಹಾಳ, ಹರಪ್ಪನಹಳ್ಳಿ, ಹೊಸ ನಗರ, ಮೂಡಿಗೆರೆ, ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.
ಕುಮಾರಸ್ವಾಮಿ ಪ್ರತಿಭಟನೆಗೆ ಮಣಿದ ಸರ್ಕಾರ
ಹೌದು.. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಸ್ವ ಪಕ್ಷೀಯ ಶಾಸಕ ಎಂ.ಪಿ.ಕುಮಾರಸ್ವಾಮಿ ಅನುದಾನ ಬಿಡುಗಡೆ ಸೇರಿದಂತೆ, ಅತಿವೃಷ್ಠಿ ಪೀಡಿತ ತಾಲೂಕುಗಳ ಪಟ್ಟಿಗೆ ಮೂಡಿಗೆರೆ ಸೇರ್ಪಡೆಯನ್ನು ಕೈಬಿಟ್ಟಿದ್ದರ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ, ಇದೀಗ ಮೂಡಿಗೆರೆ ತಾಲೂಕನ್ನು ಸಹ ಅತಿವೃಷ್ಠಿ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ.