
ಬೆಂಗಳೂರು, (ಏ.22): ಕರ್ನಾಟಕದಲ್ಲಿ ಡಾಕ್ಟರ್ಸ್, ಪೊಲೀಸ್ರು ಮನೆ-ಮಠ ಬಿಟ್ಟು ಹಗಲಿರುಳು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ಇದರ ಮಧ್ಯೆ ಪುಂಡರ ಕಾಟವೂ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಪದೇ-ಪದೇ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಉತ್ತರ ಪ್ರದೇಶ ಹಾಗೂ ಕೇರಳ ಮಾದರಿಯ ಕಠಿಣ ಕ್ರಮ ಜಾರಿಯಾಗಬೇಕು ಎನ್ನುವ ಕೂಗು ಎದ್ದಿತ್ತು.
ಇದೀಗ ಆ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಪುಂಡರನ್ನು ಮಟ್ಟಹಾಕಲು ಸುಗ್ರೀವಾಜ್ಞೆ ಹೊರಡಿಸಿದೆ. ಇಂದು (ಬುಧವಾರ) ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಬಿದ್ದಿದೆ.
ಕೊರೊನಾ ವಾರಿಯರ್ಸ್ ರಕ್ಷಣೆಗೆ ಮುಂದಾದ ಕೇಂದ್ರ; ಸುಗ್ರೀವಾಜ್ಞೆ ಜಾರಿಗೆ
ಹೀಗಾಗಿ ಇನ್ಮುಂದೆ ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡಿದವರಿಗೆ ಶಿಕ್ಷೆ ಫಿಕ್ಸ್.
ರಾಜ್ಯ ಸರ್ಕಾರ ಕೊರೋನಾ ವಾರಿಯರ್ಸ್ ಗೆ ರಕ್ಷಣೆ ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಸಾಂಕ್ರಾಮಿಕ ಕಾಯ್ದೆಗೆ ತಿದ್ದಪಡಿ ತಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.
ಸುಗ್ರೀವಾಜ್ಞೆ ಏನು ಹೇಳುತ್ತೆ...?
* ಸಾಂಕ್ರಾಮಿಕ ರೋಗದ ತಡೆಗಟ್ಟಲು ಸರ್ಕಾರಿ ನೌಕರರ ಮಾಡುವ ಕೆಲಸಕ್ಕೆ ಅಡ್ಡಿಪಡಿಸುವಂತಿಲ್ಲ.
* ವಾರಿಯರ್ಸ್ ಗಳ ಕ್ರಮಕ್ಕೆ ತಡೆಯೊಡ್ಡಿದರೆ ಕನಿಷ್ಟ ಮೂರು ವರ್ಷಗಳ ಕಾಲ ಜೈಲುವಾಸ.
* ಮೂರು ವರ್ಷಗಳ ಜೈಲುಶಿಕ್ಷೆಯ ಜೊತೆಗೆ 50 ಸಾವಿರ ರೂಪಾಯಿ ದಂಡ.
* ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದ್ರೆ ಕನಿಷ್ಟ 6 ತಿಂಗಳು ಗರಿಷ್ಠ ಮೂರು ವರ್ಷ ಜೈಲು.
* ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಎರಡು ಪಟ್ಟು ದಂಡ ವಿಧಿಸಲು ಅಧಿಕಾರ.
* ದಂಡ ವಸೂಲಾತಿಗಾಗಿ ಆರೋಪಿತನ ಆಸ್ತಿಪಾಸ್ತಿ ಜಪ್ತಿ ಮಾಡಲು ಅವಕಾಶ.
* ಅಪರಾಧ ಎಸಗಲು ಪ್ರೇರಣೆ ನೀಡಿದರೆ 2 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು 10 ಸಾವಿರ ರೂ ದಂಡ.
* ಆರೋಪಿತನಿಗೆ ಪ್ರಕರಣ ಸಂಬಂಧ ಜಾಮೀನು ಪಡೆಯಲು ಅವಕಾಶ.
* ವಾರಿಯರ್ಸ್ ಆಗಿರುವ ಎಲ್ಲಾ ವ್ಯಕ್ತಿಗಳು ಸಹ ಸಾರ್ವಜನಿಕ ನೌಕರ ಎಂದು ಪರಿಗಣನೆ.
* ಆರೋಪಿತರು ಎಂದು ಗುರುತಿಸಲ್ಪಟ್ಟ ಕಂಪನಿಯಾಗಿದ್ದರೆ, ಕಂಪನಿಯ ಮುಖ್ಯಸ್ಥನ ವಿರುದ್ಧ ಕೇಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ