ನಕ್ಸಲರನ್ನು ಪರಿವರ್ತಿಸುವುದು ನಮ್ಮ ಜವಾಬ್ದಾರಿ: ಗೆಹ್ಲೋತ್‌

Published : Apr 02, 2022, 06:09 AM ISTUpdated : Apr 02, 2022, 06:20 AM IST
ನಕ್ಸಲರನ್ನು ಪರಿವರ್ತಿಸುವುದು ನಮ್ಮ ಜವಾಬ್ದಾರಿ: ಗೆಹ್ಲೋತ್‌

ಸಾರಾಂಶ

*  ‘13ನೇ ಬುಡಕಟ್ಟು ಯುವ ವಿನಿಮಯ’ ಸಮಾರೋಪ ಸಮಾರಂಭ *  ಬುಡಕಟ್ಟು ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಭಾರತ ಸರ್ಕಾರ ಬದ್ಧ *  ಕೆಲವು ಪ್ರದೇಶಗಳು ನಕ್ಸಲ್‌ ಪೀಡಿತ ಪ್ರದೇಶಗಳಾಗಿವೆ

ಬೆಂಗಳೂರು(ಏ.02):  ಸಮಾಜ ವಿರೋಧಿ ಮತ್ತು ಅಮಾನವೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೇಶದ ಪ್ರಗತಿಗೆ ಅಡ್ಡಿಪಡಿಸುತ್ತಿರುವ ಅತೃಪ್ತರನ್ನು ಪರಿವರ್ತಿಸಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಕರ್ನಾಟಕ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಂಘಟನೆ ಸಹಯೋಗದಲ್ಲಿ ನಗರದ ಯವನಿಕದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘13ನೇ ಬುಡಕಟ್ಟು ಯುವ ವಿನಿಮಯ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

Karnataka Assembly Session: 20 ವರ್ಷ ಬಳಿಕ ಮೆಟ್ಟಿಲು ಬಳಸಿ ವಿಧಾನಸೌಧಕ್ಕೆ ಬಂದ ರಾಜ್ಯಪಾಲ

ಛತ್ತೀಸ್‌ಗಢ, ಜಾರ್ಖಂಡ್‌ ಮತ್ತು ಆಂಧ್ರಪ್ರದೇಶದ ಬುಡಕಟ್ಟು ಪ್ರದೇಶಗಳ ಯುವಕರು ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ರಾಜ್ಯಗಳ ಕೆಲವು ಪ್ರದೇಶಗಳು ನಕ್ಸಲ್‌ ಪೀಡಿತ ಪ್ರದೇಶಗಳಾಗಿವೆ. ದೇಶ ಹಾಗೂ ಸಮಾಜದ ವಿರೋಧಿ ಚಟುವಟಿಗಳಲ್ಲಿ ಭಾಗವಹಿಸಿರುವ ಅತೃಪ್ತರನ್ನು ಪರಿವರ್ತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಬುಡಕಟ್ಟು ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಭಾರತ ಸರ್ಕಾರ ಬದ್ಧವಾಗಿದೆ. ಆದಿವಾಸಿಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಿದೆ. ಈಗಾಗಲೇ ಈ ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಮಾತನಾಡಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಆಯುಕ್ತ ಡಾ. ಎನ್‌.ಎನ್‌.ಗೋಪಾಲ್‌ ಕೃಷ್ಣ ಉಪಸ್ಥಿತರಿದ್ದರು.

ವಿಶ್ವಕ್ಕೆ ಭಾರತದಿಂದ ಲೋಕಕಲ್ಯಾಣ ಮಾರ್ಗದ ನಿರೀಕ್ಷೆ 

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ಕಾರ್ಕಳ ಉತ್ಸವದ 5ನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು, ಭಾರತೀಯ ಸಂಸ್ಕೃತಿಯನ್ನು(Indian Culture) ದುರ್ಬಲಗೊಳಿಸುವ ಪ್ರಯತ್ನಗಳು ಅನೇಕ ಬಾರಿ ನಡೆದಿವೆ. ಆದರೆ ಪ್ರತಿಬಾರಿಯೂ ಭಾರತೀಯ ಸಂಸ್ಕೃತಿ ಇನ್ನಷ್ಟು ಬಲಗೊಂಡಿದೆ ಮತ್ತು ವಿಶ್ವಬಂಧುತ್ವ, ವಿಶ್ವಶಾಂತಿ ಮತ್ತು ಸಮಾನತೆಗೆ ಪ್ರೇರಣೆಯಾಗಿದೆ ಎಂದರು.

ಅಹಿಂಸೆಯ ಮೂರ್ತಿರೂಪವಾದ ಭಗವಾನ್‌ ಮಹಾವೀರರ ಬದುಕಿ - ಬದುಕಲು ಬಿಡಿ ಎಂಬ ಸಂದೇಶ ಇಂದು ವಿಶ್ವಕ್ಕೆ ಹೆಚ್ಚು ಅಗತ್ಯವಾಗಿದೆ ಎಂದ ರಾಜ್ಯಪಾಲರು(Governor), ಸಾಮಾಜಿಕ ಸಾಮರಸ್ಯವೇ ವಿಶ್ವದ ಎಲ್ಲ ಧರ್ಮಗಳ ಸ್ಥಾಪನೆಯ ಉದ್ದೇಶವಾಗಿದೆ. ಸಮಾಜವನ್ನು ಸದಾ ಜಾಗೃತಿಗೊಳಿಸುವಲ್ಲಿ ಧರ್ಮದ ಪಾತ್ರ ದೊಡ್ಡದಾಗಿದೆ. ಧರ್ಮ ಸಮಾಜವನ್ನು ಒಗ್ಗೂಡಿಸುತ್ತದೆ. ಇದನ್ನೆ ಭಗವಾನ್‌ ಬುದ್ಧ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂದು ಧರ್ಮಕ್ಕೆ ಮತ್ತು ಸಂಘಟನೆಗೆ ಮಹತ್ವ ನೀಡುವಂತೆ ಹೇಳಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದರು.

Udupi: ಶ್ರೀ ಕೃಷ್ಣನ ದರ್ಶನ ಪಡೆದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

ರಾಜ್ಯಪಾಲರನ್ನು ಕಾರ್ಕಳ ಉತ್ಸವದ(Karkala Utsava 2022) ರುವಾರಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌(Sunil Kumar) ಅವರು, ಶಂಕರಪುರ ಮಲ್ಲಿಗೆ ಹಾರ ತೊಡಿಸಿ, ಕಾರ್ಲ ಕಜೆ ಅಕ್ಕಿ, ಶ್ರೀಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಿದರು.

ಸಚಿವ ವಿ.ಸುನಿಲ್‌ ಕುಮಾರ್‌, ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಎನ್‌. ಮಂಜಳಾ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ಕಾರ್ಕಳ ವಕೀಲರ ಸಂಘ ಅಧ್ಯಕ್ಷ ಸುನಿಲ್‌ ಶೆಟ್ಟಿ ವೇದಿಕೆಯಲ್ಲಿದ್ದರು. ಡಿಸಿ ಎಂ.ಕೂರ್ಮಾ ರಾವ್‌ ಸ್ವಾಗತಿಸಿದರು. ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಕನ್ನಡ - ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್