9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ

Published : Apr 23, 2026, 10:39 PM IST
inspectors transferred

ಸಾರಾಂಶ

9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಯಾವ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ?

ಬೆಂಗಳೂರು (ಏ.23) ರಾಜ್ಯ ಸರ್ಕಾರದ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದೆ. 9 ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಈ ಪೊಲೀಸ್ (ಸಿವಿಲ್) ಇನ್ಸ್‌ಪೆಕ್ಟರ್ ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಯಾವೆಲ್ಲಾ ಇನ್ಸ್‌ಪೆಕ್ಟರ್ ವರ್ಗಾವಣೆ?

1.ಜಹೀರ್ ಅಹಮದ್ ಮೊಕಾಶಿ

ರಾಜ್ಯ ಗುಪ್ತವಾರ್ತೆ ಯಿಂದ ಪೊಲೀಸ್ ತರಬೇತಿ ಶಾಲೆ ಖಾನಾಪುರ

2.ರಾಜಕುಮಾರ್ ವೈ ಬೀಳಗಿ

ಸಿ ಐ ಡಿ ಯಿಂದ ಸಿ.ಎಸ್.ಪಿ

3.ನಿಶ್ಚಲಕುಮಾ‌ರ್ ಡಿ ಎಂ

ಸಿ.ಎಸ್.ಪಿ ಯಿಂದ ಸಿ ಐ ಡಿ

4.ಬಸವರಾಜ್ ಎ ಕಾಮನಬೈಲ್

ವಿವಿಐಪಿ ಭದ್ರತೆ, ಬೆಂಗಳೂರುನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು ಕರ್ನಾಟಕ ಲೋಕಾಯುಕ್ತಕ್ಕೆ

5.ಶಶಿಕಲಾ ಎಸ್

ಚೆಸ್ಕಾಂ ಜಾಗೃತದಳ, ಚಾಮರಾಜನಗರ ಯಿಂದ ಕರ್ನಾಟಕ ಲೋಕಾಯುಕ್ತ.

6.ನಿಂಗನಗೌಡ ಎ ಪಾಟೀಲ

ಮಹಿಳಾ ಪೊ.ಠಾಣೆ-1 ಬಸವನಗುಡಿ, ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತ.

7.ರೋಹಿಣಿ ರಾಜೇಂದ್ರ ಪಾಟೀಲ

ಸಿ ಐ ಡಿ ಯಿಂದ ಆಂತರಿಕ ಭದ್ರತಾ ವಿಭಾಗ

8.ಮುರಳಿ ಎಂ.ಎನ್

ಡಿ ಸಿ ಆರ್ ಇ ಯಿಂದ ಎ.ಎನ್.ಟಿ.ಎಫ್., ಪೊಲೀಸ್ ಪ್ರಧಾನ ಕಛೇರಿ

9.ನಾರಾಯಣ ಸ್ವಾಮಿ ಸಿ ಎ

ಕರ್ನಾಟಕ ಲೋಕಾಯುಕ್ತದಿಂದ ಆಂತರಿಕ ಭದ್ರತಾ ವಿಭಾಗ

ವರ್ಗಾವಣೆಗೊಂಡಿರುವ ಇನ್ಸ್‌ಪೆಕ್ಟರ್‌ಗಳನ್ನು ಹಾಲಿ ವಿಭಾಗಳಿಂದ ತಕ್ಷಣದಿಂದಲೇ ಮುಕ್ತಿಗೊಳಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಇಷ್ಟೇ ಅಲ್ಲ ಈ 9 ಮಂದಿ ನಿಯುಕ್ತಿಗೊಳಿಸಿದ ಸ್ಥಾನಕ್ಕೆ ಯಾವುದೇ ಕಾಲಾವಕಾಶಕ್ಕೆ ಅಕಾಶವಿಲ್ಲದೆ ತಕ್ಷಣವೇ ಹಾಜರಾಗುವಂತೆ ಸೂಚಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?
ಅಂಗಡಿ ಪಾಲಾಗುತ್ತಿದ್ದ 400 ಕೆಜಿ ಅನ್ನ ಭಾಗ್ಯದ ಅಕ್ಕಿ ಅಧಿಕಾರಿಗಳಿಂದ ಜಪ್ತಿ